ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ನಟನೆಯನ್ನು ನಾನು ಎಂಜಾಯ್ ಮಾಡುತ್ತೇನೆ: ಶಿವರಾಜ್ ಕುಮಾರ್

ಜಯಣ್ಣ-ಭೋಗೇಂದ್ರ ನಿರ್ಮಾಪಕರು ಶಿವರಾಜ್ ಕುಮಾರ್ ಅವರ ಐದನೇ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಶಿವಣ್ಣ ಕೂಡ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ.
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Updated on: 

ಜಯಣ್ಣ-ಭೋಗೇಂದ್ರ ನಿರ್ಮಾಣದ ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶಿಸುತ್ತಿದ್ದು ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ.

ಶನಿವಾರ ಚಿತ್ರ ತಂಡ ಮಾಹಿತಿ ನೀಡಿದ್ದು, ಸೆಂಚ್ಯುರಿ ಸ್ಟಾರ್ ಶಿವಣ್ಣ ಅಭಿಮಾನಿಗಳು ಸಂತಸಗೊಂಡಿದ್ದು ಇಬ್ಬರ ಕಾಂಬಿನೇಷನ್ ನ ಸಿನಿಮಾವನ್ನು ಬೆಳ್ಳಿ ತೆರೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. 

ಜಯಣ್ಣ-ಭೋಗೇಂದ್ರ ನಿರ್ಮಾಪಕರು ಶಿವರಾಜ್ ಕುಮಾರ್ ಅವರ ಐದನೇ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಶಿವಣ್ಣ ಕೂಡ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ.

ರಿಷಭ್ ಶೆಟ್ಟಿ ಜೊತೆ ಕೆಲಸ ಮಾಡಲು ಶಿವಣ್ಣ ಒಪ್ಪಿಕೊಂಡಿರುವುದನ್ನು ರಿಷಬ್ ತಿಳಿಸಿದರು ಎಂದು ನಿರ್ಮಾಪಕ ಜಯಣ್ಣ ತಿಳಿಸಿದ್ದಾರೆ. ಅದಾದ ನಂತರ ನಿರ್ಮಾಪಕರು ರಿಷಬ್ ಶೆಟ್ಟಿ ಅವರನ್ನು ಕರೆದು ಚರ್ಚಿಸಿದ್ದಾರೆ.

ರಿಷಬ್ ಶೆಟ್ಟಿ ನನಗಾಗಿ ಎರಡು ಕಥೆಯನ್ನು ತಂದಿದ್ದರು, ಎರಡು ಉತ್ತಮವಾಗಿದ್ದವು, ಅದರಲ್ಲಿ  ಒಂದು ಸರಳ ಕಥೆಯನ್ನು ನಾನು ಆರಿಸಿಕೊಂಡಿದ್ದೇನೆ, ಈ ಕಥೆಯಲ್ಲಿ ಸುಂದರವಾದ ಎಮೋಷನ್ ಗಳಿದ್ದು, ನಿಜವಾಗಿಯೂ ನಾನು ರಿಷಬ್ ಶೆಟ್ಟಿ ನಿರ್ದೇಶನದ ನಟನೆಯನ್ನು ನಾನು ಎಂಜಾಯ್ ಮಾಡುತ್ತೇನೆ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ಮಂಗಳೂರು ಶೈಲಿಯಲ್ಲಿ ರಿಷಬ್ ಕಥೆ ನಿರೂಪಣೆ ಮಾಡುವುದಲ್ಲಿ ತುಂಬಾ ನಿಸ್ಸೀಮರು, ಅವರ ಭಾಷಾ ಶೈಲಿ ಅತ್ಯದ್ಭುತ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ಶಿವಣ್ಣ ಜೊತೆ ಕೆಲಸ ಮಾಡಲು ನಾನು ಕಾತುರನಾಗಿದ್ದೇನೆ, ನಾನು ಇತ್ತೀಚೆಗೆ ಶಿವಣ್ಣ ಅವರನ್ನು ಭೇಟಿ ಮಾಡಿದ್ದೆ, ಕೆಲವು ಕಥೆಗಳನ್ನು ತೆಗೆದುಕೊಂಡು ಹೋಗಿದ್ದೆ, ಅದರಲ್ಲಿ ಒಂದನ್ನು ಅವರು ಮೆಚ್ಚಿಕೊಂಡರು, ಮುಂದಿನ ವರ್ಷ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com