ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಕಿಚ್ಚ ಸುದೀಪ್!

ತೆರೆಯ ಮೇಲೆ ಖಳನಾಯಕರ ವಿರುದ್ಧ ಸೆಣೆಸಾಡುತ್ತಿದ್ದ ನಟ ಕಿಚ್ಚ ಸುದೀಪ್‌, ಇದೀಗ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ. 
ಸುದೀಪ್
ಸುದೀಪ್
Updated on

ತೆರೆಯ ಮೇಲೆ ಖಳನಾಯಕರ ವಿರುದ್ಧ ಸೆಣೆಸಾಡುತ್ತಿದ್ದ ನಟ ಕಿಚ್ಚ ಸುದೀಪ್‌, ಇದೀಗ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ. 

ನಟರಾದ  ಅಮೀರ್‌ ಖಾನ್‌, ಕಿಚ್ಚ ಸುದೀಪ್‌, ರಿತೇಷ್‌ ದೇಶ್‌ಮುಖ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ಜೂನ್‌ 13ರಂದು ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರನ್ನು ಎದುರಿಸಲಿದ್ದಾರೆ. 

ಕೋವಿಡ್‌ನಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ವಿಶ್ವನಾಥನ್ ಆನಂದ್ ಅವರು ಇತರ ಕೆಲವು ಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸೆಲೆಬ್ರಿಟಿಗಳ ವಿರುದ್ಧ ಚೆಸ್ ಆಡಲಿದ್ದಾರೆ. ಆಟವಾಡುವ ಮೂಲಕ ದೇಣಿಗೆ ಸಂಗ್ರಹ ಮಾಡಲಿದ್ದಾರೆ.

ಅಕ್ಷಯಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಚೆಸ್‌.ಕಾಮ್‌ ‘ಚೆಕ್‌ಮೇಟ್‌ ಕೋವಿಡ್‌’ ಸೆಲೆಬ್ರಿಟಿ ಆವೃತ್ತಿಯನ್ನು ನಡೆಸುತ್ತಿದ್ದು, ಭಾನುವಾರ ಸಂಜೆ 5ರಿಂದ ರಾತ್ರಿ 8 ಗಂಟೆಯವರೆಗೆ ಐದು ಬಾರಿ ವಿಶ್ವಚಾಂಪಿಯನ್‌ ಆಗಿರುವ ವಿಶ್ವನಾಥನ್‌ ಆನಂದ್‌ ಅವರು ಎರಡು ಬ್ಯಾಚ್‌ಗಳಲ್ಲಿ ಅರ್ಧ ಗಂಟೆಗಳಂತೆ ಹಲವು ಗಣ್ಯರೊಂದಿಗೆ ಏಕಕಾಲದಲ್ಲಿ ಚೆಸ್‌ ಆಡಲಿದ್ದಾರೆ. ಸುದೀಪ್ ತಮ್ಮ ಪತ್ನಿ ಪ್ರಿಯಾ ಜೊತೆ ಚೆಸ್ ಮನೆಯಲ್ಲಿ ಚೆಸ್ ಆಡುವುದಾಗಿ ಮೂಲಗಳು ತಿಳಿಸಿವೆ,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com