ನಟಿ ಸಂಯುಕ್ತ ಹೆಗಡೆಗೆ ವಕ್ಕರಿಸಿದ ಕೊರೋನಾ

ತಂದೆ ಹಾಗೂ ತಾಯಿ ಬಳಿಕ ಇದೀಗ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆಗೂ ಕೊರೋನಾ ವಕ್ಕರಿಸಿದೆ.
ಸಂಯುಕ್ತ ಹೆಗಡೆ
ಸಂಯುಕ್ತ ಹೆಗಡೆ

ಬೆಂಗಳೂರು: ತಂದೆ ಹಾಗೂ ತಾಯಿ ಬಳಿಕ ಇದೀಗ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆಗೂ ಕೊರೋನಾ ವಕ್ಕರಿಸಿದೆ. 

ಕೊರೋನಾ ಬಂದಿರುವುದನ್ನು ನಟಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ತಂದೆ ಹಾಗೂ ತಾಯಿಗೆ ಕೊರೋನಾ ಪಾಸಿಟಿವ್ ಬಂದ 11 ದಿನದ ನಂತರ ಬಿಬಿಎಂಪಿ ಅವರು ಕರೆ ಮಾಡಿದ್ದರು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ನನಗೆ ಪಾಸಿಟಿವ್ ವರದಿ ಬಂದ ಗಂಟೆಯೊಳಗೆ ಬಿಬಿಎಂಪಿ ಅವರು ಕರೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. 

ಇನ್ನು ವೈದ್ಯರ ಸಲಹೆಯಂತೆ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ತಂದೆ-ತಾಯಿ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. 

ತಮ್ಮ ನೆಚ್ಚಿನ ನಟಿ ಬೇಗ ಕೋವಿಡ್ ನಿಂದ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com