
ಹೈದರಾಬಾದ್: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ 'ಪುಷ್ಪಾ- ದಿ ರೈಸ್' ಸಿನಿಮಾ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಬಹಿರಂಗ ಪಡಿಸಿದ್ದಾರೆ. 2021 ಡಿಸೆಂಬರ್ 17ರಂದು ಪುಷ್ಪಾ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಪುಷ್ಪಾ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗುತ್ತಿದೆ.
5 ಭಾಷೆಗಳಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಬಹು ತಾರಾಗಣವಿದೆ. ಮಲಾಯಾಳಂ ನಾಯಕ ನಟ ಫಹಾದ್ ಫಾಜಿಲ್, ರಶ್ಮಿಕಾ ಮಂದಣ್ಣ, ಜಗಪತಿ ಬಾಬು, ಸಮುತಿರಕನಿ, ಡಾಲಿ ಧನಂಜಯ ಮತ್ತಿತರರು ನಟಿಸಿದ್ದಾರೆ.
ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಕ್ತ ಚಂದನ ಕಳ್ಳಸಾಗಣೆ ಕುರಿತಾಗಿ ಸಿನಿಮಾದ ಕಥೆ ಹೆಣೆಯಲಾಗಿದೆ. ಅಲ್ಲು ಅರ್ಜುನ್ ಅವರಿಗೆ ಮೊದಲ ಬ್ರೇಕ್ ನೀಡಿದ್ದ ಆರ್ಯ ಸಿನಿಮಾದ ನಿರ್ದೇಶ ಸುಕುಮಾರ್ ಪುಷ್ಪಾ ನಿರ್ದೇಶಕರಾಗಿರುವುದು ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.
ಪಿ.ಟಿ ಟೀಚರ್ ಶರಣ್ 'ಗುರು ಶಿಷ್ಯರು' ಸಿನಿಮಾದಲ್ಲಿ ಗಾಂಧಿ ತತ್ವ ಸಾರಲಿರುವ ಸುರೇಶ್ ಹೆಬ್ಳೀಕರ್
ಹೈದರಾಬಾದ್: ತೆಲುಗು ನಟಿ ಅನುರಾಧಾ ಆತ್ಮಹತ್ಯೆಗೆ ಶರಣು
'ತೆಲುಗು ಸ್ಟಾರ್ ಹೀರೋಗಳು ಕನ್ನಡ ಸೂಪರ್ ಸ್ಟಾರ್ ಡಾ.ರಾಜ್ ಕುಮಾರ್ ರನ್ನು ನೋಡಿ ಕಲಿಯಬೇಕು'
ಪ್ರೀಮಿಯರ್ ಪದ್ಮಿನಿ ಭಾಗ 2 ಪ್ರೇಕ್ಷಕರಿಗೆ ಜಾಲಿ ರೈಡ್ ಅನುಭವ ನೀಡಲಿದೆ: ಜಗ್ಗೇಶ್
ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಚಿತ್ರದಲ್ಲಿ ಬಾಕ್ಸಿಂಗ್ ದಂತಕಥೆ 'ಮೈಕ್ ಟೈಸನ್'!
Advertisement