ಕಲಬುರಗಿಯಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ ಹಳ್ಳಿ ಸೊಗಡಿನ ಸಿನಿಮಾ 'ಕುಂತಿ ಪುತ್ರ'

ತೆಲುಗಿನ ಹಲವಾರು ಚಲನಚಿತ್ರಗಳಿಗೆ ಕೆಲಸ ಮಾಡಿದ ನಿರ್ದೇಶಕ-ನಿರ್ಮಾಪಕರು ಸೇರಿಕೊಂಡು ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶೇಷ. 
ಕುಂತಿ ಪುತ್ರ ಚಿತ್ರತಂಡ
ಕುಂತಿ ಪುತ್ರ ಚಿತ್ರತಂಡ
Updated on

ಬೆಂಗಳೂರು: ಗುಲ್ಬರ್ಗ ಭಾಗದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಹಳ್ಳಿ ಸೊಗಡಿನ ಹಿನ್ನೆಲೆಯ 'ಕುಂತಿ ಪುತ್ರ' ಚಿತ್ರದ ಚಿತ್ರೀಕರಣ ಪೂರ್ತಿಯಾಗಿದೆ. ಇತ್ತೀಚಿಗಷ್ಟೆ ಚಿತ್ರದ ಮೇಕಿಂಗ್ ದೃಶ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು. 'ಕುಂತಿ ಪುತ್ರ' ಚಿತ್ರಕ್ಕೆ ರಾಜು ಬೋನಗಾಣಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತೆಲುಗಿನ ಹಲವಾರು ಚಲನಚಿತ್ರಗಳಿಗೆ ಕೆಲಸ ಮಾಡಿದ ನಿರ್ದೇಶಕ-ನಿರ್ಮಾಪಕರು ಸೇರಿಕೊಂಡು ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶೇಷ. 

ರಾಜು ಅವರ ಪ್ರಯತ್ನಕ್ಕೆ ಪೂರಕವಾಗಿ ಶಶಾಂಕ್ ಗೌಡ ಮತ್ತು ದೇವೇಂದ್ರಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕನ್ನಡದಲ್ಲಿ ಮೊದಲು ಚಿತ್ರವನ್ನು ಬಿಡುಗಡೆ ಮಾಡಿ ಆನಂತರ ತೆಲುಗಿಗೆ ಡಬ್ ಮಾಡುವ ಯೋಜನೆಯನ್ನೂ ಚಿತ್ರತಂಡ ಹೊಂದಿದೆ. 90ರ ದಶಕದಲ್ಲಿ ನಡೆದ ಘಟನೆ ಆಧರಿಸಿ ಚಿತ್ರ ಮಾಡಲಾಗಿದೆ‌. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 

ಚಿತ್ರದ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ನಿರ್ದೇಶಕ ರಾಜು ಬೋನಗಾನಿ, ತೆಲುಗಿನಲ್ಲಿ ಹಲವು ವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದು, ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದೇನೆ ಎಂದರು. ನಾಯಕ ಗೋಪಿಕೃಷ್ಣ, ಹಳ್ಳಿ ಸೊಗಡಿನ ಕಥೆಯಲ್ಲಿ ಸ್ನೇಹ-ಪ್ರೀತಿ ಸೇರಿದಂತೆ ಎಲ್ಲವೂ ಚಿತ್ರದಲ್ಲಿ ಅಡಕವಾಗಿದೆ. ಪಾಂಡವಪುರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ನೈಜತೆಗೆ ಒತ್ತು ನೀಡಲಾಗಿದೆ. ಈ ಹಿಂದೆ ಅವರು ಮೂರು ಚಿತ್ರಗಳಲ್ಲಿ ನಟಿಸಿದ್ದು ಅದರಲ್ಲಿ ಒಂದು ಚಿತ್ರ ಬಿಡುಗಡೆಯಾಗಿದೆ ಎಂದು ಹೇಳಿದರು.

ಚಿತ್ರದಲ್ಲಿ ಪ್ರಿಯಾಂಕಾ ಚೌಧರಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಆರತಿ ರಾಜ್. ವಿಜಯಪ್ರಕಾಶ್ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ. ದಿಲೀಪ್ ಭಂಡಾರಿ ಅವರ ಸಂಗೀತ ಮತ್ತು ಈಶ್ವರ್ ಅವರು ಛಾಯಾಗ್ರಹಣ ಹೊಣೆ ಹೊತ್ತುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com