ಇನ್ ಸ್ಟಾಗ್ರಾಂ ಅಕೌಂಟ್ ತೆರೆದ ಲೇಖಕ ಪೂರ್ಣಚಂದ್ರ ತೇಜಸ್ವಿ ಕಥೆಯ ಪಾತ್ರಗಳು: ಡೇರ್ ಡೆವಿಲ್ ಮುಸ್ತಾಫಾ ವಿನೂತನ ಸಿನಿಮಾ ಟೀಸರ್

'ಡೇರ್ ಡೆವಿಲ್ ಮುಸ್ತಾಫಾ' ಕನ್ನಡ ಚಿತ್ರತಂಡ ಅಪ್ಪಟ ಕನ್ನಡಿಗರು ನೋಡಬೇಕಾದ ಅದ್ಭುತವಾದ ಟೀಸರ್ ಬಿಡುಗಡೆಗೊಳಿಸಿದೆ. ರೆಟ್ರೊಗ್ರಾಂ ಎನ್ನುವ ಪರಿಕಲ್ಪನೆಯಾಧರಿಸಿ ಈ ಟೀಸರ್ ಅನ್ನು ನಿರ್ಮಿಸಲಾಗಿದೆ. 
ಚಿತ್ರದ ಕಲಾತ್ಮಕ ಪೋಸ್ಟರ್
ಚಿತ್ರದ ಕಲಾತ್ಮಕ ಪೋಸ್ಟರ್
Updated on

ಬೆಂಗಳೂರು: ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ 'ಡೇರ್ ಡೆವಿಲ್ ಮುಸ್ತಾಫಾ' ಕನ್ನಡ ಚಿತ್ರತಂಡ ಅಪ್ಪಟ ಕನ್ನಡಿಗರು ನೋಡಬೇಕಾದ ಅದ್ಭುತವಾದ ಟೀಸರ್ ಬಿಡುಗಡೆಗೊಳಿಸಿದೆ. ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ಬಿಡುಗಡೆಯಾಗಿದೆ.

ತೇಜಸ್ವಿಯವರು ರಚಿಸಿದ ಅಬಚೂರಿನ ಪೋಸ್ಟಾಫೀಸು ಪುಸ್ತಕದಲ್ಲಿ ಬರುವ 'ಡೇರ್ ಡೆವಿಲ್ ಮುಸ್ತಾಫಾ' ಎನ್ನುವ ಕಥೆಯನ್ನಾಧರಿಸಿ ಈ ಸಿನಿಮಾ ತಯಾರಾಗುತ್ತಿದೆ. ರೆಟ್ರೊಗ್ರಾಂ ಎನ್ನುವ ಪರಿಕಲ್ಪನೆಯಾಧರಿಸಿ ಈ ಟೀಸರ್ ಅನ್ನು ನಿರ್ಮಿಸಲಾಗಿದೆ. ಈ ಟೀಸರ್ ನೋಡುಗರನ್ನು ರೆಟ್ರೊ ಕಾಲಕ್ಕೆ ಕರೆದೊಯ್ಯದಿದ್ದರೆ ಕೇಳಿ.

‘ಜಯಮಾಲಾ ದಮಯಂತಿ ಯಾರಪ್ಪ?'ಎನ್ನುವ ವಿಶಿಷ್ಟ ಹಾಡಿನ ಮೂಲಕ ಶುರುವಾಗುವ ಟೀಸರ್ ಸಿನಿಮಾದ ಪಾತ್ರಗಳನ್ನು ಅವರುಗಳ ಇನ್ ಸ್ಟಾಗ್ರಾಂ ಖಾತೆಗಳನ್ನು ತೋರಿಸುವ ಮೂಲಕ ಪರಿಚಯಿಸಲಾಗಿದೆ. ಮಾಲ್ಗುಡಿ ಡೇಸ್  ಅನುಭವವನ್ನು ಈ ಟೀಸರ್ ನೆನಪಿಸಿದರೆ ಅಚ್ಚರಿಯೇನಿಲ್ಲ. ಕನ್ನಡ ಚಿತ್ರರಂಗಕ್ಕೊಂದು ಉತ್ತಮ ಚಿತ್ರ ದೊರೆಯುವ ಸೂಚನೆಯನ್ನು ಈ ವಿನೂತನ ಟೀಸರ್ ನೀಡಿದೆ.

'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾವನ್ನು ಉದಯೋನ್ಮುಖ ಶಶಾಂಕ್ ಸೋಗಾಲ್ ನಿರ್ದೇಶಿಸುತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಓದುಗರೇ ನಿರ್ಮಿಸುತ್ತಿರುವ ಚಿತ್ರ ಎನ್ನುವ ಅಡಿಬರಹ ಈ ಚಿತ್ರದ್ದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com