ಕಿಶೋರ್ ಪಾತಿಕೊಂಡ ನಿರ್ಮಾಣದ ಉಪೇಂದ್ರ ಸಿನಿಮಾಗೆ 'ಮಾಸ್ಟರ್ ಪೀಸ್' ಮಂಜು ಮಾಂಡವ್ಯ ಆಕ್ಷನ್ ಕಟ್!
ಬೆಂಗಳೂರು: ಸಾಲು ಸಾಲು ಸಿನಿಮಾ ಅವಕಾಶಗಳನ್ನು ಹೊಂದಿರುವ ನಟ ಉಪೇಂದ್ರ ಮಾಸ್ಟರ್ ಪೀಸ್ ನಿರ್ದೇಶಕ ಮಂಜು ಮಾಂಡವ್ಯ ಅವರ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕಿಶೋರ್ ಪಾತಿಕೊಂಡ ಅವರು ಈ ಸಿನಿಮಾ ನಿರ್ಮಾಪಕರಾಗಿದ್ದಾರೆ.
ಮಂಜು ಮಾಂಡವ್ಯ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾ ಪ್ರಯೋಗಾತ್ಮಕವಾಗಿರಲಿದೆ ಎನ್ನುವ ಸುದ್ದಿ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮಂಜು ಅವರು ಉಪೇಂದ್ರ ಅವರ ಜೊತೆ ಸಿನಿಮಾ ಕುರಿತು ಮಾತುಕತೆ ನಡೆಸುತ್ತಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.
ಉಪೇಂದ್ರ ಅವರು ಹೋಮ್ ಮಿನಿಸ್ಟರ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ನಿರ್ದೇಶಕ ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ ನಲ್ಲಿ ಮೂಡಿಬಂಡಿರುವ 'ಕಬ್ಜಾ' ತೆರೆಗೆ ಬರಲು ಸಿದ್ಧವಾಗಿದೆ.
Related Article
ಡೈರೆಕ್ಟರ್ ಪಿ.ಸಿ ಶೇಖರ್, ಲವ್ ಮಾಕ್ಟೇಲ್ ಕೃಷ್ಣ ಸಿನಿಮಾ ನಾಯಕಿಯಾಗಿ ಆಶಿಕಾ ರಂಗನಾಥ್ ಸೇರ್ಪಡೆ
ಪುನೀತ್ ರಾಜ್ ಕುಮಾರ್- ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಮತ್ತೊಂದು ಆ್ಯಕ್ಷನ್ ಸಿನಿಮಾ
ಟಾಲಿವುಡ್ ನಟ ಅಡಿವಿ ಶೇಷ್ ಗೆ ತೀವ್ರ ಅನಾರೋಗ್ಯ: ಆಸ್ಪತ್ರೆಗೆ ದಾಖಲು
ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ 'ದಿಯಾ' ಖ್ಯಾತಿಯ ಖುಷಿ ರವಿ
ಟೈಟಾನಿಕ್ ಹೀರೋಯಿನ್ ಕೇಟ್ ವಿನ್ಸ್ ಲೆಟ್ ಗೆ ಪ್ರತಿಷ್ಟಿತ ಎಮ್ಮೀ ಅವಾರ್ಡ್
ಡಾರ್ಲಿಂಗ್ ಕೃಷ್ಣ ಅಭಿಮಾನಿಗಳಿಗೆ ದಸರಾ ಗಿಫ್ಟ್: 'SriKrishna@gmail.com' ಅಕ್ಟೋಬರ್ 14 ರಂದು ತೆರೆಗೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ