ಅಕ್ಟೋಬರ್ ನಲ್ಲಿ ಸಿನಿಪ್ರಿಯರಿಗೆ ಹಬ್ಬ: ಕೋಟಿಗೊಬ್ಬ-3 ಮತ್ತು ಸಲಗ ಒಂದೇ ದಿನ ರಿಲೀಸ್; ಭಜರಂಗಿ-2 ರಿಲೀಸ್ ಅ.29ಕ್ಕೆ!
ಬೆಂಗಳೂರು: ಅಕ್ಟೋಬರ್ ತಿಂಗಳಲ್ಲಿ ದಸರಾ ಸಂಭ್ರಮ ಹತ್ತಿರವಾಗುತ್ತಿದ್ದಂತೆಯೇ ಮೂರು ಚಿತ್ರಗಳು ಈ ತಿಂಗಳು ಬಿಡುಗಡೆಗೆ ಸಿದ್ಧವಾಗಿವೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ಹೇರಲಾಗಿದ್ಧ ನಿರ್ಬಂಧಗಳನ್ನು ಈಗ ಸಡಿಲಿಸಿರುವುದರಿಂದ ಸಿನಿಪ್ರಿಯರ ಉತ್ಸಾಹ ಗರಿಗೆದರಿದೆ. ಅವರ ನೆಚ್ಚಿನ ನಾಯಕರ ಸಿನಿಮಾಗಳನ್ನು ದೊಡ್ಡ ಪರದೆ ಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಕನ್ನಡ ಚಿತ್ರರಂಗದ ಇತ್ತೀಚಿನ ಬಹುನಿರೀಕ್ಷಿತ ಚಿತ್ರಗಳಾದ ಭಜರಂಗಿ2, ಕೋಟಿಗೊಬ್ಬ3 ಮತ್ತು ಸಲಗ ಅಕ್ಟೋಬರ್ ತಿಂಗಳಲ್ಲಿ ತೆರೆಗಪ್ಪಳಿಸಲಿದೆ.
ಸುದೀಪ್ ಅಭಿನಯದ ಕೋಟಿಗೊಬ್ಬ3 ಮತ್ತು ದುನಿಯಾ ವಿಜಯ್ ಅವರ ಸಲಗ ಒಂದೇ ದಿನ ಅಂದರೆ ಅಕ್ಟೋಬರ್ 14ರಂದು ಬಿಡುಗಡೆಯಾಗುತ್ತಿರುವುದು ಈ ಸಿನಿಮಾಗಳ ಕುರಿತು ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಶಿವರಾಜಕುಮಾರ್ ಅಭಿನಯದ ಭಜರಂಗಿ2 ಅಕ್ಟೋಬರ್ 29ರಂದು ಬಿಡುಗಡೆ ಕಾಣುತ್ತಿದೆ.
ಡಾರ್ಲಿಂಗ್ ಕೃಷ್ಣ ಅಭಿನಯದ ನಾಗಶೇಖರ್ ನಿರ್ದೇಶನದ ShriKrishna@gmail.com ಸಿನಿಮಾ ಅಕ್ಟೋಬರ್ 15ರಂದು ಬಿಡುಗಡೆಯಾಗುತ್ತಿದ್ದರೆ, ಸೂರಜ್ ಗೌಡ ಅವರ ಮೊದಲ ನಿರ್ದೇಶನದ ಚಿತ್ರ 'ನಿನ್ನಾ ಸನಿಹಕೆ' ಅಕ್ಟೋಬರ್ 8ರಂದು ಬಿಡುಗಡೆ ಕಾಣುತ್ತಿದೆ.
Related Article
ನಟಿ ಅನುಷ್ಕಾ ಶೆಟ್ಟಿ ಮದುವೆ ನಡೆಯುವುದು ಅಂದೇ: ಜ್ಯೋತಿಷಿ ಹೇಳಿಕೆ ವೈರಲ್
ಗಾನ ಗಂಧರ್ವ ಎಸ್ ಪಿಬಿ ಪ್ರಥಮ ಪುಣ್ಯತಿಥಿ: ಗಣ್ಯರು, ಕಲಾವಿದರಿಂದ ಸ್ಮರಣೆ, ಗಾನಗಾರುಡಿಗನಿಗೆ ಭಕ್ತಿಯ ನಮನ
ಕೆಜಿಎಫ್ ನಿರ್ಮಿಸಿದ ಹೊಂಬಾಳೆ ಫಿಲ್ಮ್ಸನಿಂದ ಜಗ್ಗೇಶ್ ಸಿನಿಮಾ: ಸಂತೋಷ್ ಆನಂದ್ ರಾಮ್ ನಿರ್ದೇಶನ
ಡೈರೆಕ್ಟರ್ ಪಿ.ಸಿ. ಶೇಖರ್, 'ಲವ್ ಮಾಕ್ಟೇಲ್' ಕೃಷ್ಣ ಸಿನಿಮಾಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆ
ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ 'ದಿಯಾ' ಖ್ಯಾತಿಯ ಖುಷಿ ರವಿ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ