The New Indian Express
ಬೆಂಗಳೂರು: ನಟ ಪ್ರೇಮ್ ಅವರ 25 ನೇ ಸಿನಿಮಾ ಪ್ರೇಮಂ ಪೂಜ್ಯಂ ಬಿಡುಗಡೆಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲೇ ಅವರು ಕರ್ನಾಟಕದ ಹೆಮ್ಮೆಯ ಕಲಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪಾತ್ರದಲ್ಲಿ ನಟಿಸುವ ಸುದ್ದಿ ಹೊರಬಿದ್ದಿದೆ. ಈ ಸಿನಿಮಾವನ್ನೂ ಪ್ರೇಮಂ ಪೂಜ್ಯಂ ನಿರ್ಮಾಪಕರೇ ಮಾಡುತ್ತಿರುವುದು ವಿಶೇಷ.
ಇದನ್ನೂ ಓದಿ: ರಾಘವೇಂದ್ರ ಸ್ಟೋರ್ಸ್ ಸಿನಿಮಾ ಸ್ಕ್ರಿಪ್ಟ್ ಗೆ ಮಂತ್ರಾಲಯದಲ್ಲಿ ದೊರೆತ ಪ್ರೇರಣೆ ಕಾರಣ: ನಟ ಜಗ್ಗೇಶ್
ಈ ಹೊಸ ಸಿನಿಮಾವನ್ನು ಜಾಗತಿಕ ಪ್ರೇಕ್ಷಕರಿಗಾಗಿ ನಿರ್ಮಿಸಲಾಗುವುದೆಂದು ಸಿನಿಮಾ ತಂಡ ಹೇಳಿಕೊಂಡಿದೆ. ಪ್ರೇಮಂ ಪೂಜ್ಯಂ ತಂಡವೇ ಕಾರಿಯಪ್ಪ ಜೀವನಾಧರಿತ ಸಿನಿಮಾಗೂ ಕೆಲಸ ಮಾಡಲಿದೆ. ಪ್ರೇಮಂ ಪೂಜ್ಯಂ ನಿರ್ದೇಶಕ ಬಿ ಎಸ್ ರಾಘವೇಂದ್ರ ಅವರೇ ಹೊಸ ಸಿನಿಮಾಗೂ ಆಕ್ಷನ್ ಕಟ್ ಹೇಳಲಿದ್ದಾರೆ.
ಭಾರತದ ಮೊತ್ತಮೊದಲ ಕಮಾಂಡರ್ ಇನ್ ಚೀಫ್ ಎನ್ನುವ ಖ್ಯಾತಿಗೆ ಪಾತ್ರರಾದ ಕೊಡಗಿನ ಕಾರಿಯಪ್ಪ ಅವರ ಜೀವನ ಪಯಣವನ್ನು ಸಾರುವ ಈ ಸಿನಿಮಾ ಬರೋಬ್ಬರಿ 400 ಕೋಟಿ ಬಜೆಟ್ ನ ಸಿನಿಮಾ ಎಂದು ಹೇಳುವ ಮೂಲಕ ಪ್ರೇಮ್ ಎಲ್ಲರನ್ನೂ ದಂಗುಬಡಿಸಿದ್ದಾರೆ.
ಇದನ್ನೂ ಓದಿ: ಕಿಶೋರ್ ಪಾತಿಕೊಂಡ ನಿರ್ಮಾಣದ ಉಪೇಂದ್ರ ಸಿನಿಮಾಗೆ 'ಮಾಸ್ಟರ್ ಪೀಸ್' ಮಂಜು ಮಾಂಡವ್ಯ ಆಕ್ಷನ್ ಕಟ್!
ಕಾರಿಯಪ್ಪ ವಿಶ್ವವೇ ಕೊಂಡಾಡುವ ಹೀರೋ ಆಗಿರುವುದರಿಂದ ಹಾಲಿವುಡ್ ಮಟ್ಟದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುವುದು ಎಂದು ಪ್ರೇಮ್ ಹೇಳಿದ್ದಾರೆ. ಅದಕ್ಕಾಗಿ ಹಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ತಂತ್ರಜ್ನರನ್ನು ಬಳಸಿಕೊಳ್ಲಲಾಗುವುದು ಎಂದು ಅವರು ಹೇಳಿದ್ದಾರೆ.