ನಟ ಸುದೀಪ್ ಗೆ ಅನಾರೋಗ್ಯ; ವಿಶ್ರಾಂತಿಗೆ ವೈದ್ಯರ ಸಲಹೆ

ನಟ, ನಿರ್ದೇಶಕ ಹಾಗೂ ನಿರೂಪಕ ಕಿಚ್ಚ ಸುದೀಪ್ ಅನಾರೋಗ್ಯಕ್ಕೀಡಾಗಿದ್ದು, ಸ್ವತಃ ಅವರೇ ಈ ಕುರಿತು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. 

Published: 16th April 2021 12:14 PM  |   Last Updated: 16th April 2021 12:14 PM   |  A+A-


sudeep

ಸುದೀಪ್

Posted By : Manjula VN
Source : UNI

ನಟ, ನಿರ್ದೇಶಕ ಹಾಗೂ ನಿರೂಪಕ ಕಿಚ್ಚ ಸುದೀಪ್ ಅನಾರೋಗ್ಯಕ್ಕೀಡಾಗಿದ್ದು, ಸ್ವತಃ ಅವರೇ ಈ ಕುರಿತು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. 

ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರಾದರೂ, ನಿಖರವಾಗಿ ಏನಾಗಿದೆ ಎಂಬುದರ ಬಗ್ಗೆ ತಿಳಿಸಿಲ್ಲ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

ಹುಷಾರಿಲ್ಲ, ಈ ವೀಕೆಂಡ್‌ನೊಳಗೆ ಚೇತರಿಸಿಕೊಳ್ಳುತ್ತೇನೆ ಎಂದು ಕೊಂಡಿದ್ದೆ. ಆದರೆ ನನ್ನ ವೈದ್ಯರ ಸಲಹೆ ಪ್ರಕಾರ ಇನ್ನೂ ಒಂದು ವಾರ ವಿಶ್ರಾಂತಿ ತೆಗೆದು ಕೊಳ್ಳಬೇಕಿದೆ.  ಈ ಕಾರಣಕ್ಕೆ ಬಿಗ್ ಬಾಸ್‌ ಈ ವಾರ ಎಪಿಸೋಡ್‌ನಲ್ಲಿ ನಾನಿರುವುದಿಲ್ಲ. ಬಿಗ್ ಬಾಸ್‌ ಕ್ರಿಯೇಟಿವ್ ತಂಡ ಈ ವಾರದ ಎಲಿಮಿನೇಷನ್‌ಗೆ ಏನು ಪ್ಲಾನ್ ಮಾಡಿದೆ ಎಂಬ ಬಗ್ಗೆ ನನಗೆ ಕುತೂಹಲವಿದೆ ಎಂದು ತಿಳಿಸಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp