ಪ್ರೀತಿಗೆ ವಿರೋಧ: ಸಹೋದರನ ಕೊಲೆ ಸಂಬಂಧ ಕನ್ನಡದ ನಟಿ ಶನಾಯ ಕಾಟ್ವೆ, ಪ್ರಿಯಕರನ ಬಂಧನ

ರಾಕೇಶ್ ಕಾಟ್ವೆ ಎಂಬಾತನ ರುಂಡ, ಮುಂಡ ಬೇರ್ಪಟ್ಟಿದ್ದು ಅರ್ಧಂಬರ್ಧ ಸುಟ್ಟು ಹಾಕಿದ್ದ ಆತನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಇದೀಗ ಛೋಟಾ ಬಾಂಬೆ ಚಿತ್ರದ ನಟಿ ಶನಾಯ, ಪ್ರಿಯಕರ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ.

Published: 23rd April 2021 09:59 PM  |   Last Updated: 23rd April 2021 11:34 PM   |  A+A-


Shanaya Katwe

ಶನಾಯ ಕಾಟ್ವೆ

Posted By : Vishwanath S
Source : Online Desk

ಹುಬ್ಬಳ್ಳಿ: ರಾಕೇಶ್ ಕಾಟ್ವೆ ಎಂಬಾತನ ರುಂಡ, ಮುಂಡ ಬೇರ್ಪಟ್ಟಿದ್ದು ಅರ್ಧಂಬರ್ಧ ಸುಟ್ಟು ಹಾಕಿದ್ದ ಆತನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಇದೀಗ ಛೋಟಾ ಬಾಂಬೆ ಚಿತ್ರದ ನಟಿ ಶನಾಯ, ಪ್ರಿಯಕರ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. 

ಏಪ್ರಿಲ್ 11ರಂದು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ರಾಕೇಶ್ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹ ಶನಾಯಳ ಸಹೋದರ ರಾಕೇಶ್ ಎಂದು ತಿಳಿಯುತ್ತಿದ್ದಂತೆ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದರು. 

ಪ್ರಕರಣದ ತನಿಖೆಗಿಳಿಯುತ್ತಿದ್ದಂತೆ ಪೊಲೀಸರು ಶನಾಯಳ ಪ್ರಿಯಕರ ನಿಯಾಜ್, ಸಹಚರರಾದ ಮಲ್ಲಿಕ್, ಫಿರೋಜ್, ಸೈಫುದ್ದೀನ್ ನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಶನಾಯ ಮತ್ತು ನಿಯಾಜ್ ನ ಪ್ರೀತಿಗೆ ರಾಕೇಶ್ ಆಕ್ಷೇಪಿಸುತ್ತಿದ್ದ. ಇದೇ ಕಾರಣಕ್ಕೆ ಏಪ್ರಿಲ್ 9ರಂದು ರಾಕೇಶನ ಕತ್ತು ಹಿಸುಕಿ ನಯಾಜ್ ಕೊಂದಿದ್ದು ನಂತರ ಮೃತದೇಹವನ್ನು ಕಾರಿನಲ್ಲಿ ಮನೆಗೆ ಸಾಗಿಸಿದ್ದರು. 

700

ಈ ವೇಳೆ ಶನಾಯಗೆ ಇಂದು ಮನೆಗೆ ಬರಬೇಡ, ನಿನ್ನ ಅಣ್ಣನಿಗೆ ಯಾರೋ ಹೊಡೆದಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದು ಹೇಳಿ ಮತ್ತೊಂದು ಮನೆಗೆ ಕಳುಹಿಸಿದ್ದರು. ನಂತರ ಮನೆಗೆ ಬಂದ ನಿಯಾಜ್ ರಾಕೇಶ ರುಂಡ ಮತ್ತು ಮುಂಡವನ್ನು ಬೇರ್ಪಡಿಸಿ ಕೈಕಾಲುಗಳನ್ನು ಪೀಸ್ ಪೀಸ್ ಮಾಡಿದ್ದರು. ಆನಂತರ ಆತನ ಶವಕ್ಕೆ ಪೆಟ್ರೋಲ್ ಸುರಿದು ಅರ್ಧಂಬರ್ಧ ಸುಟ್ಟು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.    

ಸಹೋದರನ ಕೊಲೆನೆ ನೆರವು ನೀಡಿದ ಆರೋಪದ ಮೇಲೆ ಪೊಲೀಸರು ಶನಾಯಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

700

ಶನಾಯಾ 2018ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾಗಿದ್ದ ಇದಂ ಪ್ರೇಮಂ ಜೀವನಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ 2021ರಲ್ಲಿ ಕನ್ನಡದ ಒಂದು ಗಂಟೆಯ ಕಥೆ ಹಾಗೂ ಛೋಟಾ ಬಾಂಬೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp