ಕನ್ನಡ ಚಿತ್ರಗಳ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣಾ ಸಮಯದ ಚಿತ್ರ: ಓಟಿಟಿಯಲ್ಲೂ ಶಿವಣ್ಣನ 'ಭಜರಂಗಿ 2' ದಾಖಲೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂತನ ಚಿತ್ರ ಭಜರಂಗಿ 2 ಓಟಿಟಿ ವೇದಿಕೆಯಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದು, ಕನ್ನಡ ಚಿತ್ರಗಳ ಇತಿಹಾಸದಲ್ಲೇ ಬಿಡುಗಡೆಯಾದ ಮೂರು ದಿನದಲ್ಲಿ Zee5ನಲ್ಲಿ ಅತೀ ಹೆಚ್ಚು ವೀಕ್ಷಣಾ ಸಮಯ ಕಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Published: 29th December 2021 12:25 PM | Last Updated: 29th December 2021 02:05 PM | A+A A-

ಭಜರಂಗಿ-2 ಚಿತ್ರದ ಪೋಸ್ಟರ್
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂತನ ಚಿತ್ರ ಭಜರಂಗಿ 2 ಓಟಿಟಿ ವೇದಿಕೆಯಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದು, ಕನ್ನಡ ಚಿತ್ರಗಳ ಇತಿಹಾಸದಲ್ಲೇ ಬಿಡುಗಡೆಯಾದ ಮೂರು ದಿನದಲ್ಲಿ Zee5ನಲ್ಲಿ ಅತೀ ಹೆಚ್ಚು ವೀಕ್ಷಣಾ ಸಮಯ ಕಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಜರಂಗಿಯ - ೨ ಚಿತ್ರದ ಭರ್ಜರಿ ಮೈಲಿಗಲ್ಲು -
ವೀಕ್ಷಕರೆಲ್ಲರಿಗೂ ಧನ್ಯವಾದಗಳು
ಅಧ್ಬುತ ಫ್ಯಾಂಟಸಿ Blockbuster ಭಜರಂಗಿ 2 ಈಗಲೇ ನೋಡಿ #ZEE5 ನಲ್ಲಿhttps://t.co/vCMcO8exOb #Bhajarangi2 #Bhajarangi2OnZEE5 #ShivarajKumar #BhavanaMenon pic.twitter.com/KLSQwY9KA3— ZEE5 Kannada (@ZEE5Kannada) December 27, 2021
ಇತ್ತೀಚೆಗೆ ಅಂದರೆ ಡಿಸೆಂಬರ್ 23ರಿಂದ ‘ಭಜರಂಗಿ 2’ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಜೀ5ನಲ್ಲಿ (Zee5) ತೆರೆಕಂಡ ಚಿತ್ರವನ್ನು ಕನ್ನಡ ಚಿತ್ರಪ್ರೇಮಿಗಳು ಪ್ರೀತಿಯಿಂದ ಬರಮಾಡಿಕೊಂಡಿದ್ದು, ಪರಿಣಾಮ, ಚಿತ್ರ ಕೇವಲ ಮೂರೇ ದಿನದಲ್ಲಿ ಹಿಂದಿನ ದಾಖಲೆಗಳನ್ನು ಮುರಿದಿದೆ.
Blockbuster ಭಜರಂಗಿ 2 ಚಿತ್ರವನ್ನ ಶಿವಾನಿ - ತ್ರಿಶೂಲ್ ನೋಡೋಕೆ excited ಆಗಿದ್ದಾರೆ. ನೀವು ಭಜರಂಗಿ 2 ನ ಈಗಲೇ ನೋಡಿ #ZEE5 ನಲ್ಲಿ ನೋಡಿ!https://t.co/vCMcO8exOb #Bhajarangi2 #Bhajarangi2OnZEE5 #ShivarajKumar #BhavanaMenon pic.twitter.com/x0Mwg2Bbey
— ZEE5 Kannada (@ZEE5Kannada) December 29, 2021
ಜೀ5ನಲ್ಲಿ ತೆರೆಕಂಡಿರುವ ‘ಭಜರಂಗಿ 2’ ಬಿಡುಗಡೆಯಾದ ಕೇವಲ ಮೂರು ದಿನದಲ್ಲಿ ಬರೋಬ್ಬರಿ 5 ಕೋಟಿ ನಿಮಿಷಗಳ ವೀಕ್ಷಣೆ ಪಡೆದಿದೆ. ಓಟಿಟಿಯಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಬೃಹತ್ ವೀಕ್ಷಣೆ ಪಡೆದ ಮೊದಲ ಕನ್ನಡ ಚಿತ್ರ ಇದಾಗಿದ್ದು, ದಾಖಲೆ ಬರೆದಿದೆ.
ಹಲವು ಕಾರಣಗಳಿಂದ ‘ಭಜರಂಗಿ 2’ ಚಿತ್ರ ಚಿತ್ರಮಂದಿರದಲ್ಲಿ ಬಹಳ ಕಾಲದವರೆಗೆ ನಿಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಓಟಿಟಿಯಲ್ಲಿ ತೆರೆಕಂಡ ಚಿತ್ರವನ್ನು ಸಿನಿಪ್ರೇಮಿಗಳು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.
ನೀವು ಇನ್ನೂ ಭಜರಂಗಿ 2 ನೋಡಿಲ್ಲ ಅಂದರೆ ಈಗಲೇ
— ZEE5 Kannada (@ZEE5Kannada) December 28, 2021
ನೋಡಿ #ZEE5 ನಲ್ಲಿhttps://t.co/vCMcO8exOb #Bhajarangi2 #Bhajarangi2OnZEE5 #ShivarajKumar #BhavanaMenon @NishaMilana pic.twitter.com/Q5Ctq1UmPW
ಇದು ಚಿತ್ರತಂಡ ಹಾಗೂ ಶಿವರಾಜ್ಕುಮಾರ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ದು,. ಜೀ5 ಈ ಕುರಿತು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ. ಅಲ್ಲದೇ ವೀಕ್ಷಕರಿಗೆ ಧನ್ಯವಾದ ಸಲ್ಲಿಸಿದೆ.
ಶಿವರಾಜ್ಕುಮಾರ್ (Shiva Rajkumar) ಅವರ ‘ಭಜರಂಗಿ 2’ (Bhajarangi 2) ಚಿತ್ರ ಬಿಡುಗಡೆಗೂ ಮುನ್ನವೇ ಬಹಳ ನಿರೀಕ್ಷೆ ಹುಟ್ಟುಹಾಕಿತ್ತು. ಬಹಳ ಕಾಲದಿಂದ ಕಾದು, ಅಕ್ಟೋಬರ್ 29ರಂದು ಚಿತ್ರ ಬಿಡುಗಡೆಯಾದಾಗ, ಸಂಭ್ರಮದಿಂದ ಬರಮಾಡಿಕೊಂಡಿದ್ದ ಅಭಿಮಾನಿಗಳಿಗೆ ಪುನೀತ್ (Puneeth Rajkumar) ನಿಧನದ ಸುದ್ದಿ ಬರಸಿಡಿಲಿನಂತೆ ಎರಗಿತ್ತು.
ಎವರ್ ಯಂಗ್ Charming ಶಿವಣ್ಣನ Energy ಗೆ ಫಿದಾ ಆಗದವರುಂಟೆ!
— ZEE5 Kannada (@ZEE5Kannada) December 26, 2021
ಅಧ್ಬುತ ಫ್ಯಾಂಟಸಿ Blockbuster ಭಜರಂಗಿ 2
ಈಗಲೇ ನೋಡಿ #ZEE5 ನಲ್ಲಿhttps://t.co/vCMcO7WWWD#Bhajarangi2 #Bhajarangi2OnZEE5 #ShivarajKumar #BhavanaMenon #Shruthi #ArjunJanya #ZEE5Kannada @NimmaShivanna @shivannaupdates @TWTSRK_ pic.twitter.com/3I1Utf2TGy
ನಂತರ ಕೆಲ ದಿನ ಚಿತ್ರದ ಪ್ರದರ್ಶನ ನಿಂತಿತು. ಕಾಲಾನಂತರದಲ್ಲಿ ಚಿತ್ರ ಚೇತರಿಕೆ ಕಂಡರೂ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಆದರೆ ಕನ್ನಡ ಚಿತ್ರಪ್ರೇಮಿಗಳು ಒಳ್ಳೆಯ ಚಿತ್ರವನ್ನು ಎಂದಿಗೂ ಕೈಬಿಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.
ನಿರ್ದೇಶಕ ಎ ಹರ್ಷ (A Harsha) ನಿರ್ದೇಶನದ ಈ ಚಿತ್ರದಲ್ಲಿ ಭಾವನಾ ಮೆನನ್ (Bhavana Menon) ನಾಯಕಿಯಾಗಿ ಅಭಿನಯಿಸಿದ್ದಾರೆ. ಭಜರಂಗಿ ಲೋಕಿ (Loki), ಶ್ರುತಿ (Shruthi), ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಖ್ಯಾತ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ (Arjun Janya) ಸಂಗೀತ ಸಂಯೋಜಿಸಿದ್ದಾರೆ.