ಯೋಗಿ 'ಒಂಭತ್ತನೇ ದಿಕ್ಕು' ಸಿನಿಮಾಗೆ ಸೆನ್ಸಾರ್ ನಿಂದ U/A ಸರ್ಟಿಫಿಕೆಟ್

ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ 'ಒಂಭತ್ತನೇ ದಿಕ್ಕು' ಸಿನಿಮಾದಲ್ಲಿ ಯೋಗಿ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವಾ ಅವರು ನಟಿಸಿದ್ದಾರೆ. 
ಯೋಗಿ
ಯೋಗಿ
Updated on

ಬೆಂಗಳೂರು: ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ನಿರ್ದೇಶಿಸಿರುವ, ಯೋಗಿ ನಾಯಕ ನಟನಾಗಿ ಅಭಿನಯಿಸಿರುವ 'ಒಂಭತ್ತನೇ ದಿಕ್ಕು' ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೆಟ್ ದೊರೆತಿದೆ. ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ 'ಒಂಭತ್ತನೇ ದಿಕ್ಕು' ಸಿನಿಮಾದಲ್ಲಿ ಯೋಗಿ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅವರು ನಟಿಸಿದ್ದಾರೆ. 

ಸಿನಿಮಾದಲ್ಲಿ ಎರಡು ಕಥಾಹಂದರ ಜೊತೆಯಾಗಿ ಸಾಗುತ್ತವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ದಯಾಳ್, ವೆಂಕಟ್ ದೇವ್ ಮತ್ತು ಅಭಿಷೇಕ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಸಿನಿಮಾವನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ತಾರಾಗಣದಲ್ಲಿ ಸಾಯಿಕುಮಾರ್, ರಮೇಶ್ ಭಟ್, ಪ್ರಶಾಂತ್ ಸಿದ್ದಿ, ಸಂಪತ್ ಕುಮಾರ್ ಮತ್ತಿತರರು ನಟಿಸಿದ್ದಾರೆ. 2021ರಲ್ಲಿ ಬಿಡುಗಡೆಯಾಗುತ್ತಿರುವ ಯೋಗಿಯವರ ಎರಡನೇ ಸಿನಿಮಾ ಇದಾಗಿದೆ. ಇತ್ತೀಚಿಗಷ್ಟೆ ಅವರ ಲಂಕೆ ಸಿನಿಮಾ ತೆರೆಕಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com