Online Desk
ಬೆಂಗಳೂರು: ಟ್ರೇಲರ್ ಮೂಲಕ ಕನ್ನಡ ಸಿನಿಪ್ರೇಕ್ಷಕರಲ್ಲಿ ತೀವ್ರ ನಿರೀಕ್ಷೆ ಹುಟ್ಟಿಸಿದ್ದ ರತ್ನನ್ ಪ್ರಪಂಚ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಒಟಿಟಿ ತಾಣವಾದ ಅಮೇಜಾನ್ ಪ್ರೈಮ್ ನಲ್ಲಿ ರತ್ನನ್ ಪ್ರಪಂಚ ಅಕ್ಟೋಬರ್ 22 ರಂದು ತೆರೆ ಕಾಣುತ್ತಿದೆ. ಕೆ ಆರ್ ಜಿ, ಸ್ಟುಡಿಯೋಸ್ ಬ್ಯಾನರ್ ಅಡಿ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ ಟ್ರಾವೆಲ್ ಕಾಮಿಡಿ-ಡ್ರಾಮಾ ರತ್ನನ್ ಪ್ರಪಂಚವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ. ಡಾಲಿ ಧನಂಜಯ್, ರೆಬಾ ಮೋನಿಕಾ ಜಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಉಮಾಶ್ರೀ, ರವಿಶಂಕರ್, ಅನು ಪ್ರಭಾಕರ್, ಪ್ರಮೋದ್, ವೈನಿಧಿ ಜಗದೀಶ್, ಅಚ್ಯುತ್ ಕುಮಾರ್ ಮತ್ತು ಶ್ರುತಿ ಕೃಷ್ಣ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: ಲಿವಿನ್ ರಿಲೇಶನ್ ಶಿಪ್ ಗಳನ್ನು ಮದುವೆಯಂತೆಯೇ ನೋಡಬೇಕು: ಚಂದನವನಕ್ಕೆ ಗಂಧದಗುಡಿ ನಾಯಕನ ಮೊಮ್ಮಗಳು ಭರ್ಜರಿ ಎಂಟ್ರಿ
ರತ್ನನ್ ಪ್ರಪಂಚ ರತ್ನಾಕರನ ಜೀವನ ಮತ್ತು ಪ್ರಯಾಣದ ಸುತ್ತ ಕೇಂದ್ರೀಕೃತವಾದ ಒಂದು ವಿನೂತನ ಟ್ರಾವೆಲ್ ಕಾಮಿಡಿ ಡ್ರಾಮಾ ಸಿನಿಮಾ ಇದಾಗಿದೆ. ಜೀವನದ ಕಷ್ಟ ಸುಖಗಳನ್ನು ಎದುರುಗೊಳ್ಳುತ್ತಲೇ ತನ್ನ ಅಸ್ತಿತ್ವ ಮತ್ತು ಮೂಲವನ್ನು ಹುಡುಕುವ ವ್ಯಕ್ತಿ ರತ್ನಾಕರ. ಜೀವನದ ಪಯಣದಲ್ಲಿ ಹಲವು ಸಂದಿಗ್ಧತೆಗಳಿಗೆ ಅವನು ಸಾಕ್ಷಿಯಾಗುತ್ತಾನೆ. ಈ ಪ್ರಯಾಣದಲ್ಲಿ, ಆತನ ಜೊತೆಯಲ್ಲಿ ಪತ್ರಕರ್ತೆ ಮಯೂರಿ ಜೊತೆಯಾಗುತ್ತಾರೆ.
ಇದನ್ನೂ ಓದಿ: 'ನೀರ್ ದೋಸೆ' ಹುಯ್ದಿದ್ದ ನಿರ್ದೇಶಕ ವಿಜಯಪ್ರಸಾದ್ 'ಪರಿಮಳ ಲಾಡ್ಜ್' ಸಿನಿಮಾಗೆ ಯೋಗಿ ನಾಯಕ
"ಶ್ರೇಷ್ಠ ಕಥೆಗಳು ಯಾವುದೇ ಗಡಿಗಳನ್ನು ಹೊಂದಿಲ್ಲ. 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಹರಡಿರುವ ಪ್ರೈಮ್ ವೀಡಿಯೋ ಗ್ರಾಹಕರಿಗೆ ಸ್ಥಳೀಯ ಕಥೆಗಳನ್ನು ನೀಡುತ್ತಾ ರಂಜಿಸಿದೆ. ರತ್ನನ್ ಪ್ರಪಂಚ ಕೂಡಾ ಅಂಥಾ ಪ್ರಯತ್ನಗಳಲ್ಲಿ ಒಂದು' ಎಂದು ಅಮೇಜಾನ್ ಪ್ರೈಮ್ ಇಂಡಿಯಾದ ಮಾರ್ಕೆಟಿಂಗ್ ಡೈರೆಕ್ಟರ್ ಸುಶಾಂತ್ ಶ್ರೀರಾಮ್ ಹೇಳಿದ್ದಾರೆ.
ಹಿಂದೆಂದೂ ಕೇಳಿರದ ಕಥೆಯನ್ನು ರತ್ನನ್ ಪ್ರಪಂಚ ಹೊಂದಿದೆ. ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ವಿಶ್ವಾದ್ಯಂತ ಪ್ರೇಕ್ಷಕರಿಗೆ ಈ ಕಥೆಯನ್ನು ಸಾದರ ಪಡಿಸಲು ತುಂಬಾ ಉತ್ಸುಕನಾಗಿದ್ದೇನೆ ಎಂದು ನಿರ್ದೇಶಕ ರೋಹಿತ್ ಪದಕಿ ಸಂತಸ ಹಂಚಿಕೊಂಡರು.
ಇದನ್ನೂ ಓದಿ: ರಾಜ್ ಬಿ. ಶೆಟ್ಟಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ರಕ್ಷಿತ್ ಶೆಟ್ಟಿ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಬಿಡುಗಡೆ