ಡಾಲಿ ಧನಂಜಯ ರತ್ನನ್ ಪ್ರಪಂಚ ಸಿನಿಮಾಗೆ ಪವರ್ ಪುನೀತ್ ರಾಜಕುಮಾರ್ 'ಗಿಚ್ಚಿ ಗಿಲಿಗಿಲಿ'!

ಗಿಚ್ಚಿ ಗಿಲಿಗಿಲಿ ಎನ್ನುವ ಹಾಡು ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಹಾಗೂ ಪುನೀತ್ ರಾಜಕುಮಾರ್ ದನಿಯಲ್ಲಿ ವಿಶಿಷ್ಟವಾಗಿ ಮೂಡಿಬಂದಿದೆ.
ಪುನೀತ್ ರಾಜಕುಮಾರ್
ಪುನೀತ್ ರಾಜಕುಮಾರ್

ಬೆಂಗಳೂರು: ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯಿಂದ ಮೂಡಿ ಬರುತ್ತಿರುವ, ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಕಾಣಲಿರುವ 'ರತ್ನನ್ ಪ್ರಪಂಚ' ಸಿನಿಮಾ ಹಾಡಿಗೆ ಪುನೀತ್ ರಾಜಕುಮಾರ್ ದನಿ ನೀಡಿದ್ದಾರೆ. 

ಗಿಚ್ಚಿ ಗಿಲಿಗಿಲಿ ಎನ್ನುವ ಹಾಡು ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಹಾಗೂ ಪುನೀತ್ ರಾಜಕುಮಾರ್ ದನಿಯಲ್ಲಿ ವಿಶಿಷ್ಟವಾಗಿ ಮೂಡಿಬಂದಿದೆ. ಹಾಡು ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣಗಳೂ ಗೋಚರಿಸಿದೆ. ಈ ಹಾಡನ್ನು ಶಿವು ಭೆರ್ಗಿ ರಚಿಸಿದ್ದಾರೆ. 

ರೋಹಿತ್ ಪದಕಿ ಈ ಸಿನಿಮಾ ನಿರ್ದೇಶಿಸಿದ್ದು, ಧನಂಜಯ್, ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್, ರೆಬಾ ಮೋನಿಕಾ ಜಾನ್, ಉಮಾಶ್ರೀ, ಅನು ಪ್ರಭಾಕರ್, ರವಿಶಂಕರ್, ತಾರಾಗಣದಲ್ಲಿದ್ದಾರೆ. ಶ್ರೀಶಾ ಕುಡುವಳ್ಳಿ ಸಿನಿಮೆಟೊಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. 

ರತ್ನನ್ ಪ್ರಪಂಚ ಚಿತ್ರಮಂಡಿರಗಳಲ್ಲಿ ತೆರೆ ಕಾಣುತ್ತಿಲ್ಲ. ಅಮೆಜಾನ್ ಪ್ರೈಮ್ ಮೂಲಕ ನೇರವಾಗಿ ಕನ್ನಡ ಸಿನಿ ಪ್ರೇಕ್ಷಕರ ಎದುರು ತೆರೆಕಾಣುತ್ತಿದೆ ಎನ್ನುವುದು ವಿಶೇಷ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com