The New Indian Express
ಬೆಂಗಳೂರು: ಸದ್ಯ ಗುರು ಶಿಷ್ಯರು ಸಿನಿಮಾ ಚಿತ್ರೀಕರಣದಲ್ಲಿ ಬಿಝಿಯಾಗಿರುವ ನಟ ಶರಣ್, 'ಕರ್ವ' ನಿರ್ದೇಶಕ ನವನೀತ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನೂ ಹೆಸರಿಡದ ಆ ಚಿತ್ರ ಸಂಪೂರ್ಣ ಹಾರರ್ ಸಿನಿಮಾ ಎನ್ನಲಾಗಿದೆ. ತರುಣ್ ಶಿವಪ್ಪ ಈ ಸಿನಿಮಾ ನಿರ್ಮಾಪಕರು. ನಿರ್ದೇಶಕ ಅವರ ರೋಸ್, ವಿಕ್ಟರಿ2 ಸಿನಿಮಾಗಳನ್ನು ಈ ಹಿಂದೆ ಅವರೇ ನಿರ್ಮಾಣ ಮಾಡಿದ್ದರು.
ಇದನ್ನೂ ಓದಿ: ಹುಟ್ಟುಹಬ್ಬದ ದಿನದಂದೂ 'ಮಾರ್ಟಿನ್' ಶೂಟಿಂಗ್ ನಲ್ಲಿ ತೊಡಗಿಕೊಂಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
50 ದಿನಗಳ ಹಿಂದೆ ನವನೀತ್ ಅವರು ಶರಣ್ ಅವರಿಗೆ ಹೊಸ ಸಿನಿಮಾದ ಕಥೆ ಹೇಳಿದ್ದರಂತೆ. ಕಥೆ ಕೇಳುತ್ತಲೇ ಇಂಪ್ರೆಸ್ ಆದ ಶರಣ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದರು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಈ ಹಿಂದೆ ಕರ್ವ ಮತ್ತು ಬಕಾಸುರ ಸಿನಿಮಾಗಳನ್ನು ನಿರ್ದೇಶಿಸಿರುವ ನವನೀತ್ ಅವರಿಗೆ ಇದು ಮೂರನೇ ಸಿನಿಮಾ.
ಇದನ್ನೂ ಓದಿ: 'ಮಾಫಿಯಾ' ದಿಂದ ಗುರುದತ್ತ ಗಾಣಿಗ ಔಟ್: ಪ್ರಜ್ವಲ್ ಗೆ 'ದೇವಕಿ' ನಿರ್ದೇಶಕ ಲೋಹಿತ್ ಆ್ಯಕ್ಷನ್ ಕಟ್!
ಸಿನಿಮಾದ ಶೇ.80ರಷ್ಟು ಭಾಗ ಉತ್ತರಾಖಂಡದ ಹಿಮಚ್ಛಾದಿತ ಪ್ರದೇಶಗಳಲ್ಲಿ ನಡೆಯುವುದು ಎಂದು ನಿರ್ದೇಶಕರು ಹೇಳಿದ್ದಾರೆ. ಸೆನಿಮೆಟೊಗ್ರಾಫರ್ ಆಗಿ ಅನುಪ್ ಕಟ್ಟುಕರನ್ ಅವರು ಆಯ್ಕೆಯಾಗಿದ್ದಾರೆ. ಅವರು ಈ ಹಿಂದೆ ಹಲವು ಜನಪ್ರಿಯ ಜಾಹೀರಾತುಗಳಿಗೆ ಸಿನಿಮೆಟೊಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಇದು ಅವರ ಮೊದಲ ಸಿನಿಮಾ.
ಇದನ್ನೂ ಓದಿ: ಲಿವಿನ್ ರಿಲೇಶನ್ ಶಿಪ್ ಗಳನ್ನು ಮದುವೆಯಂತೆಯೇ ನೋಡಬೇಕು: ಚಂದನವನಕ್ಕೆ ಗಂಧದಗುಡಿ ನಾಯಕನ ಮೊಮ್ಮಗಳು ಭರ್ಜರಿ ಎಂಟ್ರಿ