ರಾಜ್ಯಾದ್ಯಂತ 300 ಚಿತ್ರಮಂದಿರಗಳಲ್ಲಿ ದುನಿಯಾ ವಿಜಯ್ ಸಿನಿಮಾ 'ಸಲಗ' ತೆರೆಗೆ

ಸಲಗ ಮೂಲಕ ನಟ ವಿಜಯ್ ಅವರು ಇದೇ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ ಎನ್ನುವುದು ವಿಶೇಷ. ಕೋಟಿಗೊಬ್ಬ3 ಮತ್ತು ಸಲಗ ಒಂದೇ ದಿನ ತೆರೆಕಾಣುತ್ತಿದ್ದು, ಪ್ರೇಕ್ಷಕರ ದಸರಾ ಸಂಭ್ರಮ ಇಮ್ಮಡಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.
ಸಲಗ ಸಿನಿಮಾ ಸ್ಟಿಲ್
ಸಲಗ ಸಿನಿಮಾ ಸ್ಟಿಲ್
Updated on

ಬೆಂಗಳೂರು: ಅಕ್ಟೋಬರ್ 14 ರಂದು ಬಿಡುಗಡೆಯಾಗುತ್ತಿರುವ ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾ ರಾಜ್ಯಾದ್ಯಂತ ೩೦೦ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ ಎಂದು ನಿರ್ಮಾಪಕ ಶ್ರೀಕಾಂತ್ ತಿಳಿಸಿದ್ದಾರೆ. 

ಅಕ್ಟೋಬರ್ 14ರ ಬಿಡುಗಡೆಗೂ ಮುನ್ನ ಅಕ್ಟೋಬರ್ 10ರಂದು ಅದ್ಧೂರಿ ಪ್ರೀಮಿಯರ್ ಶೋ ಕಾರ್ಯಕ್ರಮವನ್ನು ಶ್ರೀಕಾಂತ್ ಆಯೋಜಿಸಿದ್ದಾರೆ. ರಾಜಕಾರಣಿಗಳು, ಚಿತ್ರರಂಗದ ಸೆಲಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಸಲಗ ಮೂಲಕ ನಟ ವಿಜಯ್ ಅವರು ಇದೇ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ ಎನ್ನುವುದು ವಿಶೇಷ. ಸಲಗ ಸಿನಿಮಾ ಅಂಡರ್ ವರ್ಲ್ಡ್ ಕಥೆಗಳನ್ನು ಆಧರಿಸಿದ ಸಿನಿಮಾ ಆಗಿದೆ. ಸಿನಿಮಾದಲ್ಲಿ ಡಾಲಿ ಧನಂಜಯ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. 

ಅಚ್ಯುತ್ ಕುಮಾರ್, ರಂಗಾಯಣ ರಘು, ಇಕ್ಕಟ್ ನಟ ನಾಗಭೂಷಣ, ಬಿವಿ ಭಾಸ್ಕರ್ ತಾರಗಣದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com