ಸೆಕ್ಸ್ ಸೀನ್ ಶೂಟಿಂಗ್ ವೇಳೆ ಸಹನಟನಿಗೆ ಹಾಲಿವುಡ್ ನಟಿ ಜೆನಿಫರ್ ಆನಿಸ್ಟನ್ ತಲೆದಿಂಬು ಕೊಟ್ಟಿದ್ದೇಕೆ?: ಜೇಕ್ ಬಹಿರಂಗ
40- 50 ಮಂದಿ ಸಿನಿಮಾ ತಂತ್ರಜ್ಞರ ಎದುರು ಕಣ್ಣು ಕೋರೈಸುವ ಬೆಳಕಿನ ನಡುವೆ ಸೆಕ್ಸ್ ದೃಶ್ಯದಲ್ಲಿ ಭಾಗವಹಿಸುವುದು ಯಾತನಾದಾಯಕ ಎನ್ನುವುದು ಜೇಕ್ ಅನುಭವ. ತನ್ನ ಕ್ರಶ್ ನಟಿ ಜೆನಿಫರ್ ಜೊತೆಯಲ್ಲಿ ಸೆಕ್ಸ್ ದೃಶ್ಯ ಅಂದಾಗ ಅವರ ಮನಸಲ್ಲಿ ಭಾವನೆಗಳ ಹೊಯ್ದಾಟ ಶುರುವಾಗಿತ್ತು.
Published: 07th October 2021 04:24 PM | Last Updated: 07th October 2021 04:29 PM | A+A A-

ದಿ ಗುಡ್ ಗರ್ಲ್ ಸಿನಿಮಾ ಸ್ಟಿಲ್
ನ್ಯೂಯಾರ್ಕ್: ಸಿನಿಮಾಗಳಲ್ಲಿ ಸೆಕ್ಸ್ ಸೀನುಗಳು ಬಂತೆಂದರೆ ಪ್ರೇಕ್ಷಕರಿಗೆ ಹಬ್ಬ. ಅದರಲ್ಲೂ ಪುರುಷ ಪ್ರೇಕ್ಷಕರ ಕಾತರ ಹೇಳತೀರದು. ಅದಕ್ಕಾಗಿಯೇ ಸಿನಿಮಾ ನೋಡುವ ವರ್ಗವೂ ಇದೆ.
ಆದರೆ ಸೆಕ್ಸ್ ಸೀನುಗಳನ್ನು ಶೂಟ್ ಮಾಡುವಾಗ ಮಾತ್ರ ಎಕ್ಸೈಟ್ ಮೆಂಟ್ ಇರುವುದಿಲ್ಲ. ಅದೇಕೆ ಎಂದು ಹಾಲಿವುಡ್ ನಟ ಜೇಕ್ ಗಿಲೆನ್ ಹಾಲ್ ಹೇಳಿದ್ದಾರೆ. ಇತ್ತೀಚಿಗೆ ಅವರು ಸಂದರ್ಶನವೊಂದರಲ್ಲಿ ತಮ್ಮ ಸೆಕ್ಸ್ ಸೀನ್ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಜೇಮ್ಸ್ ಬಾಂಡ್ ಪಾತ್ರಕ್ಕೆ ಡೇನಿಯಲ್ ಕ್ರೇಗ್ ಭಾವಪೂರ್ಣ ವಿದಾಯ: ಕೊನೆಯ ಸೀನ್ ಶೂಟಿಂಗ್ ವೇಳೆ ಕಣ್ಣೀರಿಟ್ಟ ನಟ
2002ರಲ್ಲಿ ಜೇಕ್ ದಿ ಗುಡ್ ಗರ್ಲ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಫ್ರೆಂಡ್ಸ್ ಧಾರಾವಾಹಿ ಖ್ಯಾತಿಯ ನಟಿ ಜೆನಿಫರ್ ಆನಿಸ್ಟನ್ ಆ ಸಿನಿಮಾದಲ್ಲಿ ನಾಯಕಿ. ನಟ ಜೇಕ್ ಅವರಿಗೆ ಜೆನಿಫರ್ ಆನಿಸ್ಟನ್ ಕಂಡರೆ ಬಹಳ ಹಿಂದಿನಿಂದಲೂ ಕ್ರಶ್. ಅವರ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಾಗ ಜೇಕ್ ಥ್ರಿಲ್ ಆಗಿದ್ದರು.
ಆ ಸಿನಿಮಾದಲ್ಲಿ ತನ್ನ ಕ್ರಶ್ ಜೊತೆ ಸೆಕ್ಸ್ ಸೀನ್ ಮಾಡಬೇಕಾಗಿ ಬಂದಾಗ ತೀವ್ರ ಇರಿಸುಮುರಿಸು ಉಂಟಾಗಿತ್ತಂತೆ. ಏಕಾಂತದಲ್ಲಿದ್ದಾಗ ಇಬ್ಬರು ಪ್ರೇಮಿಗಳು ಸೆಕ್ಸ್ ಮಾಡುವುದು ಒಂದು ಸುಂದರ ಅನುಭವ. ಆದರೆ 40- 50 ಮಂದಿ ಸಿನಿಮಾ ತಂತ್ರಜ್ಞರ ಎದುರು ಕಣ್ಣು ಕೋರೈಸುವ ಬೆಳಕಿನ ನಡುವೆ ಸೆಕ್ಸ್ ದೃಶ್ಯದಲ್ಲಿ ಭಾಗವಹಿಸುವುದು ಯಾತನಾದಾಯಕ ಎನ್ನುವುದು ಜೇಕ್ ಅನುಭವ.
ಅದಕ್ಕೂ ಮಿಗಿಲಾಗಿ ತಾನು ಕನಸು ಕಾಣುತ್ತಿದ್ದ ನಟಿ ಜೆನಿಫರ್ ಜೊತೆಯಲ್ಲಿ ಸೆಕ್ಸ್ ದೃಶ್ಯ ಅಂದಾಗ ಅವರ ಮನಸಲ್ಲಿ ಭಾವನೆಗಳ ಹೊಯ್ದಾಟ ಶುರುವಾಗಿತ್ತು. ಜೇಕ್ ಅವರ ತಳಮಳ ಗುರುತಿಸಿದ ಜೆನಿಫರ್ ಶೂಟಿಂಗ್ ಗೆ ಮುನ್ನ ತಲೆದಿಂಬನ್ನು ತರಿಸಿ ಇದು ನಿಮಗಾಗಿ. ಎಂದಷ್ಟೇ ಹೇಳಿದರಂತೆ. ಏಕೆ ಎಂಬುದನು ವಿವರಿಸಲೂ ಇಲ್ಲ.
ದೃಶ್ಯದಲ್ಲಿ ತಲ್ಲೀನನಾಗಿ ಪ್ರೀತಿ ಮೇಲೇರಿ ಬಂದರೆ ಅ ಅವಾಂತರ ಮಿಕ್ಕವರಿಗೆ ಎನ್ನುವ ಉದ್ದೇಶದಿಂದ ಜೆನಿಫರ್ ತಲೆದಿಂಬನ್ನು ತರಿಸಿಕೊಟ್ಟಿದ್ದರು. ಈ ಘಟನೆಯನ್ನು ಜೇಕ್ ಮುಜುಗರದಿಂದ ಹಂಚಿಕೊಂಡಿದ್ದಲ್ಲದೆ ಸಹನಟನ ಕಷ್ಟ ಅರ್ಥ ಮಾಡಿಕೊಂಡ ಜೆನಿಫರ್ ತುಂಬಾ ಸ್ವೀಟ್ ನಟಿ ಎಂದು ಕರೆದಿದ್ದಾರೆ.
ಇದನ್ನೂ ಓದಿ: ಡಯೆಟ್, ಸೆಕ್ಸ್, ಕೊಕೇನ್: ಪ್ರಖ್ಯಾತ ಇನ್ನರ್ ವೇರ್ ಸಂಸ್ಥೆಯ ಸೂಪರ್ ಮಾಡೆಲ್ ಬಿಚ್ಚಿಟ್ಟ ರಹಸ್ಯ