ಕಿಚ್ಚ ಸುದೀಪ್ ಕೋಟಿಗೊಬ್ಬ3 ಸಿನಿಮಾ ರಾಜ್ಯಾದ್ಯಂತ 1,000 ಸ್ಕ್ರೀನ್ ಗಳಲ್ಲಿ ಪ್ರದರ್ಶನ: ಅ.11ರಿಂದ ಅಡ್ವಾನ್ಸ್ಡ್ ಟಿಕೆಟ್ ಬುಕಿಂಗ್
ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಸುದೀಪ್ ಅಭಿನಯದ ಕೋಟಿಗೊಬ್ಬ3 ರಾಜ್ಯಾದ್ಯಂತ 1,000 ಸ್ಕ್ರೀನ್ ಗಳಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದೇವೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ. ಸದ್ಯಕ್ಕೆ 1,000 ಸ್ಕ್ರೀನ್ ಗಳು ಎಂದುಕೊಂಡಿದ್ದರೂ ಮುಂಬರಲಿರುವ ದಿನಗಳಲ್ಲಿ ಸ್ಕ್ರೀನ್ ಸಂಖ್ಯೆಯನ್ನು ಏರಿಸಲಿದ್ದೇವೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ದಸರಾ ಸಂಭ್ರಮ ಇಮ್ಮಡಿಸಲಿ
ಇತ್ತೀಚಿಗಷ್ಟೆ ಕೋಟಿಗೊಬ್ಬ3 ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣಪತ್ರ ದೊರೆತಿತ್ತು. ಕೋಟಿಗೊಬ್ಬ3 ಸಿನಿಮಾ ಅಕ್ಟೋಬರ್ 14ರಂದು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ದಸರಾ ಹಬ್ಬದ ಸಂಭ್ರಮದ ನಡುವೆ ತೆರೆ ಕಾಣುತ್ತಿರುವುದರಿಂದ ಹಬ್ಬದ ಉತ್ಸಾಹದ ಜೊತೆಗೇ ಸಿನಿಮಾ ನೋಡಿ ಸಂಭ್ರಮ ಹೆಚ್ಚಿಸಿಕೊಳ್ಳಲು ಸುಸಂದರ್ಭ ಎಂದು ಸೂರಪ್ಪ ಬಾಬು ಆಶಿಸಿದ್ದಾರೆ.
ಅಡ್ವಾನ್ಸ್ ಬುಕಿಂಗ್ ಮಾಡಬಹುದು
ಸಿನಿಮಾಗೆ ಅಡ್ವಾನ್ಸ್ಡ್ ಟಿಕೆಟ್ ಬುಕಿಂಗ್ ಅಕ್ಟೋಬರ್ 11-12 ರಿಂದ ಪ್ರಾರಂಭಗೊಳ್ಳಲಿದೆ. ಆಯುಧ ಪೂಜೆಯ ದಿನವೇ ಬಿಡುಗಡೆಯಾಗುತ್ತಿರುವ ಕಾರಣ ಆ ದಿನ ಮಾರ್ನಿಂಗ್ ಶೋ ಇರುವುದಿಲ್ಲ. ಜನರು ಆಯುಧ ಪೂಜೆ ಹಬ್ಬವನ್ನು ಪಾಲ್ಗೊಂಡು ನಂತರ ಸಿನಿಮಾ ವೀಕ್ಷಣೆಗೆ ಮನೆಮಂದಿ ಸಹಿತ ಚಿತ್ರಮಂದಿರಕ್ಕೆ ಬರಲು ಎನ್ನುವ ಕಾರಣಕ್ಕೆ ಚಿತ್ರತಂಡ ಈ ಏರ್ಪಾಟು ಮಾಡಿಕೊಂಡಿದೆ.
ಸಿನಿಮಾದಲ್ಲಿ ಹೊಸಬರ ಮೇಳ
ಕೋಟಿಗೊಬ್ಬ3 ಸಿನಿಮಾವನ್ನು ಶಿವಕಾರ್ತಿಕ್ ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಸಿನಿಮಾ ಎನ್ನುವುದು ಗಮನಾರ್ಹ. ಈ ಹಿಂದೆ ಎಪ್ರಿಲ್ 29ರಂದು ಈ ಚಿತ್ರ ಬಿಡುಗಡೆಯಾಗಬೇಕಿತ್ತಾದರೂ ಕೊರೊನಾ ಸಾಂಕ್ರಾಮಿಕ ಕಾರಣ ಬಿಡುಗಡೆ ಮುಂದೂಡಲ್ಪಟ್ಟಿತ್ತು.
ಕೋಟಿಗೊಬ್ಬ3 ಮೂಲಕ ಮಡೋನಾ ಸೆಬಾಶ್ಚಿಯನ್ ಮತ್ತು ಬಾಲಿವುಡ್ ನಟ ಅಫ್ತಾಬ್ ಶಿವದಾಸಾನಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನುಳಿದಂತೆ ಶ್ರದ್ಧಾ ದಾಸ್, ತಬಲಾ ನಾಣಿ, ರವಿಶಂಕರ್, ರಾಜೇಶ್ ನಟರಂಗ ತಾರಾಗಣದಲ್ಲಿದ್ದಾರೆ. ಆಶಿಕಾ ರಂಗನಾಥ್ ಚಿತ್ರದಲ್ಲಿ ವಿಶೇಷ ಅಪಿರೆಯನ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೇಖರ್ ಚಂದ್ರು ಸೆನಿಮೆಟೊಗ್ರಾಫರ್ ಹೊಣೆ ಹೊತ್ತಿದ್ದರೆ, ಅರ್ಜುನ್ ಜನ್ಯಾ ಸಂಗೀತ ಈ ಚಿತ್ರಕ್ಕಿದೆ.
Related Article
ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ, ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ
'ನೀರ್ ದೋಸೆ' ಹುಯ್ದಿದ್ದ ನಿರ್ದೇಶಕ ವಿಜಯಪ್ರಸಾದ್ 'ಪರಿಮಳ ಲಾಡ್ಜ್' ಸಿನಿಮಾಗೆ ಯೋಗಿ ನಾಯಕ
ರಾಜ್ ಬಿ. ಶೆಟ್ಟಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ರಕ್ಷಿತ್ ಶೆಟ್ಟಿ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಬಿಡುಗಡೆ
ಹಿಂದುತ್ವದ ಜತೆ ಮುಂದುತ್ವವೂ ಬೇಕು; ತಮಿಳರು ತೋರಿದ ಧೈರ್ಯ ನಮ್ಮಲ್ಲಿಲ್ಲ: ಹಂಸಲೇಖ
ಸೂರಿ 'ಬ್ಯಾಡ್ ಮ್ಯಾನರ್ಸ್' ನಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿಷೇಕ್!
'ಮಿಸ್ ನಂದಿನಿ' ಸಿನಿಮಾದಲ್ಲಿ ಟೀಚರ್ ಆಗಿ ಮಕ್ಕಳಿಗೆ ಪಾಠ ಹೇಳಲು ಬರುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ!