ಅನಿತಾ ಭಟ್ ನಿರ್ಮಾಣದ 'ಇಂದಿರಾ' ಮೋಷನ್ ಫೋಸ್ಟರ್ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್

ನಟಿ ಅನಿತಾ ಭಟ್ ನಿರ್ಮಿಸಿ, ಅಭಿನಯಿಸುತ್ತಿರುವ 'ಇಂದಿರಾ' ಚಿತ್ರದ ಮೋಷನ್ ಫೋಸ್ಟರ್ ನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
ಇಂದಿರಾ ಮೋಷನ್ ರಿಲೀಜ್ ಮಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಇಂದಿರಾ ಮೋಷನ್ ರಿಲೀಜ್ ಮಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಬೆಂಗಳೂರು: ನಟಿ ಅನಿತಾ ಭಟ್ ನಿರ್ಮಿಸಿ, ಅಭಿನಯಿಸುತ್ತಿರುವ 'ಇಂದಿರಾ' ಚಿತ್ರದ ಮೋಷನ್ ಫೋಸ್ಟರ್ ನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.

ಗ್ಲಾಮರಸ್ ಸೇರಿದಂತೆ ವಿಭಿನ್ನ ಪಾತ್ರ ಪೋಷಣೆಯಿಂದ ಗಾಂಧಿನಗರದಲ್ಲಿ ಗುರುತಿಸಿಕೊಂಡಿರುವ ಅನಿತಾ ಭಟ್, ಇದೀಗ ತಾವೇ ಚಿತ್ರ ನಿರ್ಮಾಣಕ್ಕಿಳಿದಿದ್ದು, ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. 

ಅನಿತಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ''ಇಂದಿರಾ'' ಚಿತ್ರದಲ್ಲಿ ಮೊಹಿನುದ್ದೀನ್ ಶಫಿ, ನೀತು ಶೆಟ್ಟಿ, ಡಿ. ಜೆ. ಚಕ್ರವರ್ತಿ, ರೆಹಮಾನ್ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಚಿತ್ರ ತಯಾರಾಗುತ್ತಿದ್ದು, ಲೋಹಿತ್ ಎನ್ ನಾಯಕ್ ಅವರು ಸಂಗೀತ ಸಂಯೋಜಿಸಿದ್ದಾರೆ. 

'ಇಂದಿರಾ ' ಇದೊಂದು ವಿಭಿನ್ನ ಹಾಗೂ ವಿಶೇಷವಾದ ಪಾತ್ರ. ಇಂದಿರಾಗೆ ಅಪಘಾತ ಆಗುತ್ತದೆ. ಅದರಿಂದಾಗಿ ಅಂಧೆ ಆಗುವ ಇಂದಿರಾಗೆ ನೆನಪಿನ ಶಕ್ತಿ ಕೂಡಾ ಕೊರತೆ ಆಗುತ್ತದೆ. ಅಪಘಾತ ಆಗಿದ್ದು, ಯಾಕೆ, ಮಾಡಿದ್ದು ಯಾರು, ಉದ್ದೇಶ ಪೂರ್ವಕವಾಗಿಯೇ ಅಪಘಾತ ಮಾಡಲಾಯಿತಾ ಎಂಬಿತ್ಯಾದಿ ಪ್ರಶ್ನೆಗಳ ಸುತ್ತ ಕಥೆ ಸಾಗುತ್ತದೆ ಎಂದು ಅನಿತಾ ಭಟ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com