'ರಾಣಾ' ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ 'ತುಪ್ಪದ ಬೆಡಗಿ' ರಾಗಿಣಿ!

ಡ್ಯಾನ್ಸ್ ನಲ್ಲಿ ವಿಶೇಷ ಸಾಮರ್ಥ್ಯ ಹೊಂದಿರುವ ನಟಿ ರಾಗಿಣಿ ದ್ವಿವೇದಿ ನಂದ ಕಿಶೋರ್ ನಿರ್ದೇಶನದ ರಾಣಾ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ.
ರಾಣಾ ಚಿತ್ರತಂಡದ ಜೊತೆ ರಾಗಿಣಿ
ರಾಣಾ ಚಿತ್ರತಂಡದ ಜೊತೆ ರಾಗಿಣಿ

ಡ್ಯಾನ್ಸ್ ನಲ್ಲಿ ವಿಶೇಷ ಸಾಮರ್ಥ್ಯ ಹೊಂದಿರುವ ನಟಿ ರಾಗಿಣಿ ದ್ವಿವೇದಿ ನಂದ ಕಿಶೋರ್ ನಿರ್ದೇಶನದ ರಾಣಾ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ.

ಶ್ರೇಯಸ್ ಮಂಜು ಮತ್ತು ರೇಷ್ಮಾ ನಾಣಯ್ಯ ನಟಿಸಿರುವ ರಾಣಾ ಸಿನಿಮಾದಲ್ಲಿನ ವಿಶೇಷ ಹಾಡಿದೆ ಇಮ್ರಾನ್ ಸರ್ದಾರಿಯಾ ಕೊರಿಯೊಗ್ರಪಿ ಮಾಡಿದ್ದಾರೆ.

ನಂದಕಿಶೋರ್ ಮತ್ತು ರಾಗಿಣಿ ಹ್ಯಾಟ್ರಿಕ್ ಕಾಂಬಿನೇಷನ್ ಇದಾಗಿದೆ. ಈ ಮೊದಲು 'ಯಕ್ಕಾ ನಿನ್ನ ಮಗಳು' ಮತ್ತು ಐಟಂ ಸಾಂಗ್ ಬ್ಯಾನ್ ಆಗಬೇಕು ಎಂಬ ಹಾಡುಗಳಿಗೆ ಜೊತೆಯಾಗಿದ್ದರು.ಇಮ್ರಾನ್ ಸರ್ದಾರಿಯಾ ಮತ್ತು ರಾಗಿಣಿ  ತುಪ್ಪ ಬೇಕಾ ತುಪ್ಪ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಚುಟು ಚುಟು ಫೇಮಸ್ ಸಾಂಗ್ ನ ಶಿವು ಬೈರಾಗಿ ಸಾಹಿತ್ಯ ಬರೆದಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದರು.

ನಾವು ತಂಡವನ್ನು ಸಿದ್ಧಪಡಿಸಿದ್ದೇವೆ. ಒಮ್ಮೆ ನಾವು ಸೆಟ್ ಕೆಲಸಗಳನ್ನು ಮುಗಿಸಿದ ನಂತರ, ನಾವು ಹಾಡಿನ ಚಿತ್ರೀಕರಣ ಮಾಡುತ್ತೇವೆ ಎಂದು ನಂದ ಕಿಶೋರ್ ಹೇಳಿದ್ದಾರೆ. ಕೇವಲ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಕೆ.ಮಂಜು ಮತ್ತು ಗುಜ್ಜಾಲ್ ಪುರುಷೋತ್ತಮ್ ನಿರ್ಮಾಣ  ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com