ಬರ್ಲಿನ್ ಚಿತ್ರೋತ್ಸವದಲ್ಲಿ ಭಾರತ ಮೂಲದ ಹಾಲಿವುಡ್ ನಿರ್ದೇಶಕ ನೈಟ್ ಶ್ಯಾಮಲನ್ ಮುಖ್ಯ ತೀರ್ಪುಗಾರ

ತೀರ್ಪುಗಾರರಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೈಟ್ ಶ್ಯಾಮಲನ್, ತಾವು ಹಾಲಿವುಡ್ ಒಳಗಿದ್ದುಕೊಂಡು ಹಾಲಿವುಡ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದರೂ ತಾನು ಹೊರಗಿನವ ಎನ್ನುವ ಭಾವನೆ ಮುಂಚಿನಿಂದಲೂ ಇದೆ ಎಂದು ಹೇಳಿದ್ದಾರೆ.
ಹಾಲಿವುಡ್ ನಿರ್ದೇಶಕ ನೈಟ್ ಶ್ಯಾಮಲನ್
ಹಾಲಿವುಡ್ ನಿರ್ದೇಶಕ ನೈಟ್ ಶ್ಯಾಮಲನ್

ಲಂಡನ್: ವಿಕ್ಷಿಪ್ತ, ವಿನೂತನ ಹಾಲಿವುಡ್ ಸಿನಿಮಾಗಳಿಗೆ ಹೆಸರಾದ ಭಾರತ ಮೂಲದ ನಿರ್ದೇಶಕ ನೈಟ್ ಶ್ಯಾಮಲನ್ ಪ್ರತಿಷ್ಟಿತ ಬರ್ಲಿನ್ ಚಿತ್ರೋತ್ಸವದ ಅಂತಾರಾಷ್ಟ್ರೀಯ ತೀರ್ಪುಗಾರರ ಸಮಿತಿಗೆ ಅಧ್ಯಕ್ಷರಾಗುತ್ತಿರುವ ಸುದ್ದಿ ಹೊರಬಿದ್ದಿದೆ. ಶ್ಯಾಮಲನ್ ಅವರು ತಮ್ಮ ಆಹ್ವಾನವನ್ನು ಒಪ್ಪಿಕೊಂಡಿರುವುದು ತೀವ್ರ ಸಂತಸ ತಂದಿದೆ ಎಂಡು ಚಿತ್ರೋತ್ಸವ ಮಂಡಲಿ ಪ್ರಕಟಣೆ ಹೊರಡಿಸಿದೆ.

ಥ್ರಿಲ್ಲರ್ ಮತ್ತು ಹಾರರ್ ಪ್ರಕಾರದ ಸಿನಿಮಾಗಳಿಗೆ ಹೆಸರಾದ ನೈಟ್ ಶ್ಯಾಮಲನ್ ದಿ ಸಿಕ್ಸ್ಥ್ ಸೆನ್ಸ್, ಅನ್ ಬ್ರೇಕೆಬಲ್, ಸೈನ್ಸ್, ದಿ ವಿಲೇಜ್, ಸ್ಪ್ಲಿಟ್ ಮತ್ತು ಓಲ್ಡ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಬರೆದು ನಿರ್ದೇಶಿಸಿದ್ದಾರೆ.

ತೀರ್ಪುಗಾರರಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೈಟ್ ಶ್ಯಾಮಲನ್, ತಾವು ಹಾಲಿವುಡ್ ಒಳಗಿದ್ದುಕೊಂಡು ಹಾಲಿವುಡ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದರೂ ತಾನು ಹೊರಗಿನವ ಎನ್ನುವ ಭಾವನೆ ಮುಂಚಿನಿಂದಲೂ ಇದೆ. ಓರ್ವ ಸ್ವತಂತ್ರ ಫಿಲಂ ಮೇಕರ್ ಎಂದೇ ನಾನು ನನ್ನ ಬಗ್ಗೆ ತಿಳಿದುಕೊಂಡಿದ್ದೇನೆ. ಬರ್ಲಿನ್ ಚಿತ್ರೋತ್ಸವ ತೀರ್ಪುಗಾರನಾಗುವುದು ದೊಡ್ಡ ಹೊಣೆ ಎಂದು ನಾನು ತಿಳಿಯುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com