The New Indian Express
ಲಾಸ್ ಎಂಜೆಲಿಸ್: ಪ್ರಖ್ಯಾತ ಹಾಲಿವುಡ್ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ಒಡೆತನದ ಪ್ರೊಡಕ್ಷನ್ ಸಂಸ್ಥೆ ಮತ್ತು ಬಾಲಿವುಡ್ ನಟ ಅಭಯ್ ದಿಯೋಲ್ ಒಡೆತನದ ಸಂಸ್ಥೆ ಸಹಯೋಗದಲ್ಲಿ ಹಾಲಿವುಡ್ ಸಿನಿಮಾ ಘೋಷಣೆಯಾಗಿದೆ.
ಇದನ್ನೂ ಓದಿ: ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ 2 ಬಿಡುಗಡೆ ದಿನಾಂಕ ಘೋಷಣೆ
20ನೇ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದ ಬಾಕ್ಸಿಂಗ್ ಪಟು ಗಗ್ಲಿಮೊ ಪೆಪೆಲಿಯೊ ಎಂಬಾತನ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದೆ. ಆತ ಜಗದ್ವಿಖ್ಯಾತ ಬಾಕ್ಸರ್ ಗಳಲ್ಲಿ ಒಬ್ಬ ಎಂದು ಹೆಸರಾದ ವ್ಯಕ್ತಿ.
ಇದನ್ನೂ ಓದಿ: ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಚಿತ್ರದಲ್ಲಿ ಬಾಕ್ಸಿಂಗ್ ದಂತಕಥೆ 'ಮೈಕ್ ಟೈಸನ್'!
ಬಾಕ್ಸಿಂಗ್ ಕ್ರೀಡೆಯಲ್ಲಿ ಆತನಿಗೆ ಯಶಸ್ಸು ದೊರೆತಿದ್ದರೂ ಆತನ ಜೀವನ ಸಾಲದಲ್ಲಿ ಮುಳುಗಿತ್ತು. ಅದನ್ನು ತೀರಿಸುವಲ್ಲಿಯೇ ಅವನ ಜೀವನ ಕಳೆದುಹೋಗಿತ್ತು. ಅದು ಸಾಲದೆಂಬಂತೆ ಆತನ ಮಗ ಮಾದಕವ್ಯಸನಿಯಾಗಿದ್ದ. ಇಷ್ತೆಲ್ಲಾ ಸಮಸ್ಯೆಗಳ ನಡುವೆ ಆತನಿಗೆ ನೆಮ್ಮದಿ ಸಿಗುತ್ತಿದ್ದಿದ್ದು ಬಾಕ್ಸಿಂಗ್ ನಲ್ಲಿ.
ಇದನ್ನೂ ಓದಿ: ಸೆಕ್ಸ್ ಸೀನ್ ಶೂಟಿಂಗ್ ವೇಳೆ ಸಹನಟನಿಗೆ ಹಾಲಿವುಡ್ ನಟಿ ಜೆನಿಫರ್ ಆನಿಸ್ಟನ್ ತಲೆದಿಂಬು ಕೊಟ್ಟಿದ್ದೇಕೆ?: ಜೇಕ್ ಬಹಿರಂಗ
ಟೈಟಾನಿಕ್ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ಜೊತೆ ಭಾರತದ ಅಭಯ್ ದಿಯೋಲ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಭಾರತೀಯರು ಹೆಮ್ಮೆ ಪಡುವ ವಿಚಾರ.