The New Indian Express
ಬೆಂಗಳೂರು: ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾದ ಎರಡನೇ ಭಾಗದ ಚಿತ್ರೀಕರಣಕ್ಕೆ ಮುಹೂರ್ತ ನಿಗದಿಯಾಗಿದೆ. ನವಂಬರ್ 4ರಿಂದ ಚಿತ್ರೀಕರಣ ಶುರುವಾಗುವ ಸುದ್ದಿ ಹೊರಬಿದ್ದಿದೆ. ಈ ಸಿನಿಮಾವನ್ನೂ ಆಕಾಶ್ ಶ್ರೀವತ್ಸ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಗ್ರೇಟ್ ಇಂಡಿಯನ್ ಕಿಚನ್ ಅತ್ಯುತ್ತಮ ಸಿನಿಮಾ: ನಿಮಿಷಾ ಸಜಯನ್ ಗೆ ಬೆಸ್ಟ್ ನಟಿ ಪ್ರಶಸ್ತಿ ಸಿಕ್ಕದ್ದಕ್ಕೆ ನಿರ್ದೇಶಕ ಬೇಸರ
ನಟ ರಮೇಶ್ ಅರವಿಂದ್ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತೀವ್ರ ಉತ್ಸುಕರಾಗಿದ್ದಾರೆ. ಕೊರೊನಾ ಕಾರಣದಿಂದ ಕಳೆದ 2 ವರ್ಷಗಳಿಂದ ಯಾವುದೇ ಸಿನಿಮಾದ ಶೂಟಿಂಗ್ ನಲ್ಲಿಯೂ ಅವರು ಪಾಲ್ಗೊಂಡಿಲ್ಲ. ಹೀಗಾಗಿ ಶೂಟಿಂಗ್ ಸೆಟ್ ಗೆ ಮರಳಲು ತುಂಬಾ ಕಾತರನಾಗಿರುವುದಾಗಿ ರಮೇಶ್ ಹೇಳಿದ್ದಾರೆ.
ಇದನ್ನೂ ಓದಿ: ನಾನು ಮತ್ತು ಸುದೀಪ್ ಒಳ್ಳೆ ಫ್ರೆಂಡ್ಸ್: ಥಿಯೇಟರ್ ಮುಂದೆ ಸುದೀಪ್ ಫ್ಯಾನ್ಸ್ ಕಂಡು ಅಫ್ತಾಬ್ ಥ್ರಿಲ್
ಸಿನಿಮಾ ಶೂಟಿಂಗ್, ರಿಯಾಲಿಟಿ ಶೋ ಅಥವಾ ಬರವಣಿಗೆಯೇ ಇರಲಿ ಹೀಗೆ ಸದಾ ಒಂದಿಲ್ಲೊಂದು ಕೆಲಸಗಳಲ್ಲಿ ತೊಡಗಿಕೊಂಡು ಬ್ಯುಸಿಯಾಗಿರುತ್ತಿದ್ದ ರಮೇಶ್ ಕಳೆದ 2 ವರ್ಷಗಳನ್ನು ಅವ್ಯಾವುವುದೂ ಇಲ್ಲದೆ ಕಳೆದಿದ್ದೇ ಒಂದು ಅಚ್ಚರಿ. ಈ ಬಗ್ಗೆ ಕೇಳಿದಾಗ ಆಕ್ಷನ್ ಕಟ್ ಎನ್ನುವ ಎರಡು ಪದಗಳನ್ನು ನಿರ್ದೇಶಕರ ಬಾಯಿಂದ ಕೇಳುವುದು, ಕ್ಯಾಮೆರಾ ಎದುರು ನಿಲ್ಲುವುದು, ಮೇಕಪ್ ಹಾಕಿಕೊಳ್ಳುವುದು ಇವೆಲ್ಲವೂ ನನ್ನ ಜೀವನದ ಅವಿಭಾಜ್ಯ ಅಂಗ. ಡೈರೆಕ್ಟರ್ ಆಕ್ಷನ್ ಕಟ್ ಹೇಳಿದಾಗ ಆಗುವ ರೋಮಾಂಚನ ಎಲ್ಲವನ್ನೂ ಮಿಸ್ ಮಾಡಿಕೊಂಡಿದ್ದೆ ಎಂದರು ರಮೇಶ್.
ಇದನ್ನೂ ಓದಿ: 'ಕ್ರಾಂತಿ' ಯಲ್ಲಿ ದರ್ಶನ್ ಜೊತೆ 'ಬುಲ್ ಬುಲ್' ಬೆಡಗಿ; ನನ್ನ ಸಿನಿ ಪಯಣ ಮರಳಿ ಆರಂಭ: ರಚಿತಾ ರಾಮ್
ಶಿವಾಜಿ ಸುರತ್ಕಲ್- ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ಸಿನಿಮಾವನ್ನು ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಾಣಮಾಡುತ್ತಿದ್ದಾರೆ. ತಾರಾಗಣದಲ್ಲಿ ರಾಧಿಕಾ ನಾರಾಯಣ್, ರಘು ರಾಮನಕೊಪ್ಪ, ವಿದ್ಯಾ ಮೂರ್ತಿ ಮತ್ತಿತರರು ಇದ್ದಾರೆ. ಗುರುಪ್ರಸಾದ್ ಎಂ.ಜಿ ಸಿನಿಮೆಟೊಗ್ರಾಫಿ ಹೊಣೆ ಹೊತ್ತಿದ್ದಾರೆ.
ಇದನ್ನೂ ಓದಿ: ಕಿಸ್, ಭರಾಟೆಯಲ್ಲಿ ಮಿಂಚಿದ್ದ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ