ನಾನು ಮತ್ತು ಸುದೀಪ್ ಒಳ್ಳೆ ಫ್ರೆಂಡ್ಸ್: ಥಿಯೇಟರ್ ಮುಂದೆ ಸುದೀಪ್ ಫ್ಯಾನ್ಸ್ ಕಂಡು ಅಫ್ತಾಬ್ ಥ್ರಿಲ್

ಸುದೀಪ್ ಕೋಟಿಗೊಬ್ಬ3 ಸಿನಿಮಾದಲ್ಲಿ ನಟಿಸಲು ಕೋರಿಕೊಂಡಾಗ ಅಫ್ತಾಬ್ ದೂಸ್ರಾ ಯೋಚನೆಯನ್ನೇ ಮಾಡಲಿಲ್ಲ. 
ಸುದೀಪ್, ಅಫ್ತಾಬ್ ಶಿವದಾಸಾನಿ
ಸುದೀಪ್, ಅಫ್ತಾಬ್ ಶಿವದಾಸಾನಿ

ಬೆಂಗಳೂರು: ಬಾಲಿವುಡ್ ನಟ ಅಫ್ತಾಬ್ ಶಿವದಾಸಾನಿ ಬೆಳ್ಳಿ ಪರದೆಯಿಂದ ದೂರವಿದ್ದರು. ಹೀಗಿರುವಾಗಲೇ ಅಚಾನಕ್ಕಾಗಿ ದಕ್ಷಿಣ ಭಾರತೀಯ ಚಿತ್ರರಂಗ ಸ್ಯಾಂಡಲ್ ವುಡ್ ನಲ್ಲಿ ನಟಿಸುವ ಮೂಲಕ ಹಲವರ ಹುಬ್ಬೇರಿಸಿದ್ದರು. 

<strong>ಅಫ್ತಾಬ್ ಶಿವದಾಸಾನಿ</strong>
ಅಫ್ತಾಬ್ ಶಿವದಾಸಾನಿ

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ3 ಸಿನಿಮಾದಲ್ಲಿ ಅಫ್ತಾಬ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಕೋಟಿಗೊಬ್ಬ3 ಬಿಡುಗಡೆಯ ಸಂದರ್ಭದ ಗೊಂದಲದ ಹೊರತಾಗಿಯೂ ಥಿಯೇಟರ್ ಮುಂದೆ ನೆರೆದಿದ್ದ ಸುದೀಪ್ ಅಭಿಮಾನಿಗಳನ್ನು ಕಂಡು ಅಫ್ತಾಬ್ ಥ್ರಿಲ್ಲಾಗಿದ್ದಾರೆ. 

ಬಾಲಿವುಡ್ ನಲ್ಲಿ ಮಸ್ತಿ, ಕ್ಯಾ ಕೂಲ್ ಹೈ ಹಮ್ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಅಫ್ತಾಬ್ ಕನ್ನಡ ಚಿತ್ರರಂಗದಲ್ಲಿಯೂ ಅಂಥದ್ದೇ ಹವಾ ಸೃಷ್ಟಿಸುವ ಇರಾದೆಯನ್ನು ಹೊಂದಿದ್ದಾರೆ.

ಏಕಾಏಕಿ ಕನ್ನಡ ಸಿನಿಮಾದಲ್ಲಿ ನಟಿಸಲು ಕಾರಣವೇನೆಂದು ಕೇಳಿದಾಗ ಅಫ್ತಾಬ್ ಹೇಳಿದ್ದಿಷ್ಟು. ಸುದೀಪ್ ಮತ್ತು ನಾನು ತುಂಬಾ ಒಳ್ಳೆಯ ಮಿತ್ರರು. ಕೋಟಿಗೊಬ್ಬ3 ಸಿನಿಮಾದಲ್ಲಿ ನಟಿಸಲು ಮುಖ್ಯ ಕಾರಣ ಸುದೀಪ್. 

ಪರಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನುವ ಅಳುಕು ಒಮ್ಮೆಯೂ ಸುಳಿಯಲಿಲ್ಲ. ಸಿನಿಮಾ ಭಾಷೆಗಳ ಗಡಿಯನ್ನು ಮೀರಿದ್ದು ಎನ್ನುವುದು ತಮ್ಮ ಭಾವನೆ ಎಂದು ಶಿವದಾಸಾನಿ ಹೇಳಿದ್ದಾರೆ. ಹೀಗಾಗಿಯೇ ಸುದೀಪ್ ಈ ಪಾತ್ರದಲ್ಲಿ ನಟಿಸಲು ಕೋರಿಕೊಂಡಾಗ ಅಫ್ತಾಬ್ ದೂಸ್ರಾ ಯೋಚನೆಯನ್ನೇ ಮಾಡಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com