ಟಾಲಿವುಡ್ ನಲ್ಲಿ ಕಿಚ್ಚು ಹಚ್ಚಲಿರುವ ಯೋಗಿ ಸಿನಿಮಾ 'ಲಂಕೆ': ಶೀಘ್ರದಲ್ಲೇ ತೆಲುಗಿಗೆ ರೀಮೇಕ್

ಕೊರೊನಾ ಕಾರಣದಿಂದ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಿದ್ದ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಲಂಕೆಯೂ ಒಂದು.
ಲಂಕೆ ಚಿತ್ರದ ಸ್ಟಿಲ್
ಲಂಕೆ ಚಿತ್ರದ ಸ್ಟಿಲ್
Updated on

ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ಯೋಗಿ ಅಭಿನಯದ ಲಂಕೆ ಸಿನಿಮಾ ತೆಲುಗಿಗೆ ರೀಮೇಕ್ ಆಗುತ್ತಿದೆ. ಈ ವಿಷಯವನ್ನು ನಿರ್ದೇಶಕ ರಾಮ್ ಪ್ರಸಾದ್ ಹಂಚಿಕೊಂಡಿದ್ದಾರೆ. ತೆಲುಗು ಅವತರಣಿಕೆಯ ಎಲ್ಲಾ ಮಾಹಿತಿಯನ್ನು ಲಂಕೆ ಸಿನಿಮಾದ 50ನೇ ದಿನೋತ್ಸವದ ಸಂದರ್ಭ ಹಂಚಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಕೊರೊನಾ ಕಾರಣದಿಂದ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಿದ್ದ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಲಂಕೆಯೂ ಒಂದು. ಸಿನಿಮಾಗೆ ಉತ್ತರ ಕರ್ನಾಟಕ ಭಾಗದಲ್ಲಿ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ. 

ಲಂಕೆ ಸಿನಿಮಾ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಚಿತ್ರದ ತೆಲುಗು ರೀಮೇಕ್ ಹಕ್ಕನ್ನು ಪಡೆದುಕೊಂಡಿರುವ ನಿರ್ಮಾಣ ಸಂಸ್ಥೆ ತಮ್ಮನ್ನೇ ನಿರ್ದೇಶಕನನ್ನಾಗಿ ಉಳಿಸಿಕೊಳ್ಳಲು ಉತ್ಸುಕವಾಗಿದೆ ಎಂದು ನಿರ್ದೇಶಕ ರಾಮ್ ಪ್ರಸಾದ್ ಮಾಹಿತಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com