ಗೆಳೆಯ ಪುನೀತ್ ಅಗಲಿಕೆಗೆ ಕಂಬನಿ ಮಿಡಿದ ನಟಿ ರಮ್ಯಾ
ಪವರ್ ಸ್ಟಾರ್ ಪುನೀತ್ ರಾಜ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಕಂಠೀರವ ಕ್ರೀಡಾಂಗಣಕ್ಕೆ ಸಾಗರೋಪಾದಿಯಲ್ಲಿ ಜನರು ಆಗಮಿಸುತ್ತಿದ್ದರು. ನಟ, ನಟಿಯರು, ಗಣ್ಯಾತಿಗಣ್ಯರು ಬಂದು ದರ್ಶನ ಪಡೆಯುತ್ತಿದ್ದಾರೆ.
Published: 30th October 2021 04:04 PM | Last Updated: 30th October 2021 04:04 PM | A+A A-

ಪುನೀತ್ ಪಾರ್ಥಿವ ಶರೀರದ ದರ್ಶನ ಪಡೆದ ರಮ್ಯಾ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಕಂಠೀರವ ಕ್ರೀಡಾಂಗಣಕ್ಕೆ ಸಾಗರೋಪಾದಿಯಲ್ಲಿ ಜನರು ಆಗಮಿಸುತ್ತಿದ್ದರು. ನಟ, ನಟಿಯರು, ಗಣ್ಯಾತಿಗಣ್ಯರು ಬಂದು ದರ್ಶನ ಪಡೆಯುತ್ತಿದ್ದಾರೆ.
ಮೋಹಕ ತಾರೆ ರಮ್ಯಾ, ನಟ ಅರ್ಜುನ್ ಸರ್ಜಾ ಸೇರಿದಂತೆ ಹಲವು ಸಿನಿಮಾ ರಂಗದ ಕಲಾವಿದರು ಅಗಲಿದ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದರು. ಇದೇ ವೇಳೆ ರಮ್ಯಾ ಅವರು ಕಣ್ಣೀರಾಗಿದ್ದಾರೆ.
ದರ್ಶನದ ಬಳಿಕ ಮಾತನಾಡಿದ ರಮ್ಯಾ, ಕಮ್ ಬ್ಯಾಕ್ ಮಾಡುವಂತೆ ಪುನೀತ್ ಹೇಳುತ್ತಿದ್ದರು. ಆದರೆ, ಈಗ ಅವರಿಲ್ಲ ಎಂಬ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದರು. ರಮ್ಯಾ ಅವರ ಮೊದಲ ಚಿತ್ರ ಅಭಿಯಲ್ಲಿ ಪುನೀತ್ ಜೊತೆಗೆ ನಾಯಕ ನಟಿಯಾಗಿ ರಮ್ಯಾ ಅಭಿನಯಿಸಿದ್ದರು.
ನಟ ಅರ್ಜುನ್ ಸರ್ಜಾ ಮಾತನಾಡಿ, ಪುನೀತ್ ನಿಧನದ ಸುದ್ದಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಪುನೀತ್ ಗೆ ಯಾವುದೇ ಕೆಟ್ಟ ಹವ್ಯಾಸಗಳು ಇರಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಅವರ ನಿಧನ ತುಂಬಾ ಬೇಸರ ಮೂಡಿಸಿದೆ ಎಂದರು.