The New Indian Express
ತಿರುವನಂತಪುರ: ಕೇರಳದ ಜನಪ್ರಿಯ ಕಿರುತೆರೆ ನಟ, ನಿರೂಪಕ ರಮೇಶ್ ವಲಿಯಸಲ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿದೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಇದನ್ನೂ ಓದಿ: ಕನ್ನಡ ವೀಕ್ಷಕರಿಗೆ ಸಿಹಿಸುದ್ದಿ: ಲಾಕ್ಡೌನ್ನಲ್ಲೂ ಜನಪ್ರಿಯ ಧಾರಾವಾಹಿಗಳ ಹೊಸ ಕಂತುಗಳ ಪ್ರಸಾರ!
ಅವರು ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅಲ್ಲಿಂದಲೇ ಅವರ ಕಿರುತೆರೆ ನಂಟು ಪ್ರಾರಂಭವಾಗಿತ್ತು. ಕಳೆದ 22 ವರ್ಷಗಳಿಂದ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿ ಜನಪ್ರಿಯತೆ ಗಳಿಸಿದ್ದರು.
ಇದನ್ನೂ ಓದಿ: ಟಿವಿ ಧಾರಾವಾಹಿ ಚಿತ್ರೀಕರಣ ತಂಡದ ಮೇಲೆ ಪೊಲೀಸರ ದಾಳಿ: ನಟ ಸೇರಿ 18 ಜನರ ವಿರುದ್ಧ ಪ್ರಕರಣ
ತಿರುವನಂತಪುರದ ಅವರ ನಿವಾಸದಲ್ಲಿ ಅವರು ನೇಣಿಗೆ ಶರಣಾಗಿರುವುದನ್ನು ಪತ್ನಿಯೇ ಮೊದಲು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಕೊರೊನಾ ಸಾಂಕ್ರಾಮಿಕದಿಂದ ಲಾಕ್ ಡೌನ್ ಹೇರಿಕೆಯಾಗಿದ್ದರಿಂದ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಚೆನ್ನೈ: ತಮಿಳು ಕಿರುತೆರೆ ನಟಿ ವಿ.ಜೆ. ಚಿತ್ರಾ ಮೃತದೇಹ ಹೊಟೇಲ್ ರೂಂನಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ