ಕೆಜಿಎಫ್ ಸಕ್ಸಸ್ ಬಳಿಕ ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಚಿತ್ರಗಳಲ್ಲಿ ರವಿ ಬಸ್ರೂರ್; ಯುಧ್ರಾ ಬೆನ್ನಲ್ಲೇ ಇದೀಗ 'ಗರುಡ್'!

ಕೆಜಿಎಫ್ ಚಿತ್ರದ ಬೆನ್ನಲ್ಲೇ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಇದೀಗ ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಯುಧ್ರಾ ಬಳಿಕ ಇದೀಗ 'ಗರುಡ್' ಚಿತ್ರಕ್ಕೂ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ರವಿ ಬಸ್ರೂರ್
ರವಿ ಬಸ್ರೂರ್

ಮುಂಬೈ: ಕೆಜಿಎಫ್ ಚಿತ್ರದ ಬೆನ್ನಲ್ಲೇ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಇದೀಗ ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಯುಧ್ರಾ ಬಳಿಕ ಇದೀಗ 'ಗರುಡ್' ಚಿತ್ರಕ್ಕೂ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಅಜಯ್ ಕಪೂರ್ ಹಾಗೂ ಸುಭಾಷ್ ಕಾಳೆ ಜಂಟಿಯಾಗಿ ಕೈಗೆತ್ತಿಕೊಂಡಿರುವ ಈ ಚಿತ್ರಕ್ಕೆ ‘ಗರುಡ್’ ಎಂದು ನಾಮಕರಣ ಮಾಡಲಾಗಿದ್ದು,  ಯುದ್ಧ ಪೀಡಿತ ಅಫ್ಗಾನಿಸ್ತಾನ್ ಮತ್ತು ಅಲ್ಲಿ ನಡೆದ ಏರ್ ಲಿಫ್ಟ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಗರುಡ ತಂಡ ಪಾಲ್ಗೊಂಡ ಕುರಿತ ರೋಚಕ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗಿದೆ. 

ಈಗಾಗಲೇ ಈ ಚಿತ್ರದ ಅಧಿಕೃತ ಘೋಷಣೆಯಾಗಿದ್ದು, ಚಿತ್ರದ ಮೊದಲ ಮೋಷನ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.  

ಗರುಡ ನೈಜ ಕಥೆಯನ್ನಾಧರಿತ ಸಿನಿಮಾ ಆಗಿದ್ದು, ಅಫ್ಗಾನಿಸ್ಥಾನ್ ತಾಲಿಬಾನಿಗಳ ವಶವಾದ ವೇಳೆ ಅಲ್ಲಿಯ ಜನರು ದೇಶ ತೊರೆಯಲು ಕಷ್ಟ ಪಡುತ್ತಿದ್ದ ಸಂದರ್ಭದಲ್ಲಿ ಭಾರತೀಯ ಏರ್ ಪೋರ್ಸ್‍ನ ಗರುಡ ವಿಂಗ್‍ನ ಕಮಾಂಡೋ ತೋರಿದ ಶೌರ್ಯದ ಕಥಾ ಹಂದರ ಈ ಚಿತ್ರದಲ್ಲಿರಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. ಇನ್ನು ಈ ಚಿತ್ರದ ನಾಯಕ ಯಾರು ಎಂಬುದನ್ನು ಚಿತ್ರತಂಡ ರಿವೀಲ್ ಮಾಡಿಲ್ಲ.  

ಕೆಜಿಎಫ್ ಸಂಗೀತ ನಿರ್ದೇಶಕರಿಗಿದು 2ನೇ ಚಿತ್ರ
ಇನ್ನು ಕನ್ನಡದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಸಂಗೀತ ಸಂಯೋಜಿಸಿವುದು ಈ ಚಿತ್ರದ ಮತ್ತೊಂದು ವಿಶೇಷ. ಇದು ಇವರ 2ನೇ ಬಾಲಿವುಡ್ ಚಿತ್ರವಾಗಿದ್ದು, ಈ ಹಿಂದೆ ರವಿ 'ಯುಧ್ರಾ' ಎಂಬ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಈ ಚಿತ್ರ 2022ರಲ್ಲಿ ತೆರೆಗೆ ಬರಲಿದೆ. ಅಷ್ಟರೊಳಗೇ ಮತ್ತೊಂದು ಬಾಲಿವುಡ್ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡುತ್ತಿರುವುದು ಮಹತ್ವದ ವಿಚಾರವಾಗಿದೆ. ಇದಲ್ಲದೇ ರವಿ, ಪ್ರಭಾಸ್-ಪ್ರಶಾಂತ್ ನೀಲ್ ರ ಸಲಾರ್ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. 

ಒಟ್ಟಾರೆ ಕನ್ನಡದ ಅದ್ಭುತ ಪ್ರತಿಭೆ ಇದೀಗ ಕರ್ನಾಟಕದಾಚೆಗೂ ತಮ್ಮ ಪ್ರತಿಭೆ ಪ್ರದರ್ಶನ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com