The New Indian Express
ಬೆಂಗಳೂರು: ಅಕ್ಟೋಬರ್ ತಿಂಗಳಲ್ಲಿ ದಸರಾ ಸಂಭ್ರಮ ಹತ್ತಿರವಾಗುತ್ತಿದ್ದಂತೆಯೇ ಮೂರು ಚಿತ್ರಗಳು ಈ ತಿಂಗಳು ಬಿಡುಗಡೆಗೆ ಸಿದ್ಧವಾಗಿವೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ಹೇರಲಾಗಿದ್ಧ ನಿರ್ಬಂಧಗಳನ್ನು ಈಗ ಸಡಿಲಿಸಿರುವುದರಿಂದ ಸಿನಿಪ್ರಿಯರ ಉತ್ಸಾಹ ಗರಿಗೆದರಿದೆ. ಅವರ ನೆಚ್ಚಿನ ನಾಯಕರ ಸಿನಿಮಾಗಳನ್ನು ದೊಡ್ಡ ಪರದೆ ಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಸ್ಯಾಟಲೈಟ್ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ!
ಕನ್ನಡ ಚಿತ್ರರಂಗದ ಇತ್ತೀಚಿನ ಬಹುನಿರೀಕ್ಷಿತ ಚಿತ್ರಗಳಾದ ಭಜರಂಗಿ2, ಕೋಟಿಗೊಬ್ಬ3 ಮತ್ತು ಸಲಗ ಅಕ್ಟೋಬರ್ ತಿಂಗಳಲ್ಲಿ ತೆರೆಗಪ್ಪಳಿಸಲಿದೆ.
ಸುದೀಪ್ ಅಭಿನಯದ ಕೋಟಿಗೊಬ್ಬ3 ಮತ್ತು ದುನಿಯಾ ವಿಜಯ್ ಅವರ ಸಲಗ ಒಂದೇ ದಿನ ಅಂದರೆ ಅಕ್ಟೋಬರ್ 14ರಂದು ಬಿಡುಗಡೆಯಾಗುತ್ತಿರುವುದು ಈ ಸಿನಿಮಾಗಳ ಕುರಿತು ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಶಿವರಾಜಕುಮಾರ್ ಅಭಿನಯದ ಭಜರಂಗಿ2 ಅಕ್ಟೋಬರ್ 29ರಂದು ಬಿಡುಗಡೆ ಕಾಣುತ್ತಿದೆ.
ಇದನ್ನೂ ಓದಿ: ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪಾತ್ರದಲ್ಲಿ ನಟಿಸಲಿರುವ ಪ್ರೇಮ್: ಪ್ರೇಮಂ ಪೂಜ್ಯಂ ತಂಡದಿಂದ 400 ಕೋಟಿ ರೂ. ಹಾಲಿವುಡ್ ಚಿತ್ರ
ಡಾರ್ಲಿಂಗ್ ಕೃಷ್ಣ ಅಭಿನಯದ ನಾಗಶೇಖರ್ ನಿರ್ದೇಶನದ ShriKrishna@gmail.com ಸಿನಿಮಾ ಅಕ್ಟೋಬರ್ 15ರಂದು ಬಿಡುಗಡೆಯಾಗುತ್ತಿದ್ದರೆ, ಸೂರಜ್ ಗೌಡ ಅವರ ಮೊದಲ ನಿರ್ದೇಶನದ ಚಿತ್ರ 'ನಿನ್ನಾ ಸನಿಹಕೆ' ಅಕ್ಟೋಬರ್ 8ರಂದು ಬಿಡುಗಡೆ ಕಾಣುತ್ತಿದೆ.
ಇದನ್ನೂ ಓದಿ: ರಾಘವೇಂದ್ರ ಸ್ಟೋರ್ಸ್ ಸಿನಿಮಾ ಸ್ಕ್ರಿಪ್ಟ್ ಗೆ ಮಂತ್ರಾಲಯದಲ್ಲಿ ದೊರೆತ ಪ್ರೇರಣೆ ಕಾರಣ: ನಟ ಜಗ್ಗೇಶ್