'ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು'! ಎಂದ ಹರಿಪ್ರಿಯಾ... ಎಂದೂ ನಿನ್ನ ನೆರಳಾಗಿ ಕಾಯುವೆ ನಾನು..! ಎಂದ ವಶಿಷ್ಠ ಸಿಂಹ

ಸ್ಯಾಂಡಲ್ ವುಡ್ ನಲ್ಲಿ ಮದುವೆ ಪರ್ವ ಜೋರಾಗುತ್ತಿದ್ದಂತೆ ನಟ ವಶಿಷ್ಠ ಸಿಂಹ ಮತ್ತು ನಾಯಕಿ ನಟಿ ಹರಿಪ್ರಿಯಾ ಕೂಡ ಸದ್ಯದಲ್ಲಿಯೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಹಬ್ಬಿತು.
ವಶಿಷ್ಠ ಸಿಂಹ-ಹರಿಪ್ರಿಯಾ
ವಶಿಷ್ಠ ಸಿಂಹ-ಹರಿಪ್ರಿಯಾ
Updated on

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮದುವೆ ಪರ್ವ ಜೋರಾಗುತ್ತಿದ್ದಂತೆ ನಟ ವಶಿಷ್ಠ ಸಿಂಹ ಮತ್ತು ನಾಯಕಿ ನಟಿ ಹರಿಪ್ರಿಯಾ ಕೂಡ ಸದ್ಯದಲ್ಲಿಯೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಹಬ್ಬಿತು. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ವಾರ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಜೊತೆಜೊತೆಯಾಗಿ ಕೈ ಕೈ ಹಿಡಿದು ಹೋಗುತ್ತಿರುವಾಗ ಕ್ಯಾಮರಾ ಕಣ್ಣಿಗೆ ಬಿದ್ದರು. ಅವರು ದುಬೈಗೆ ಹೋಗಿ ಬಂದಿದ್ದಾರೆ ಎಂದು ಸುದ್ದಿಯಾಯಿತು.

ಇದೀಗ ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಸುದ್ದಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು. ನಿನ್ನೆ ನಟಿ ಹರಿಪ್ರಿಯಾ ಮನೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳ ಆಪ್ತರು, ಕುಟುಂಬಸ್ಥರು ಸೇರಿದ್ದರು. ಅಲ್ಲಿ ಈ ಜೋಡಿ ಉಂಗುರ ಬದಲಾಯಿಸಿಕೊಂಡಿದ್ದು. ಸದ್ಯದಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ. 

ಈ ಸುದ್ದಿ ಹೊರಬೀಳುತ್ತಿದ್ದಂತೆ ಹರಿಪ್ರಿಯಾ ನಿನ್ನೆ ಸೋಷಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಹಾಕಿದ್ದಾರೆ. ಅದು ಇಬ್ಬರ ಮದುವೆ ವದಂತಿಗೆ ತಾರ್ಕಿಕ ಉತ್ತರ ನೀಡುತ್ತಿದೆ. ಸಿಂಹದ ಚಿತ್ರ ಹಾಕಿ ಅದಕ್ಕೆ ಚಿನ್ನದ ಅಲಂಕಾರ ಮಾಡಿ ಸಿಂಹದ ತೋಳಿನಲ್ಲಿ ಚಿನ್ನಾಭರಣಗಳಿಂದ ಅಲಂಕೃತವಾದ ಮಗು ಸುಖನಿದ್ದೆ ಮಾಡುತ್ತಿರುವ ಫೋಟೋವನ್ನು ಹಾಕಿರುವ ಹರಿಪ್ರಿಯಾ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ತಾನು ವಶಿಷ್ಟ ಸಿಂಹನನ್ನು ಮದುವೆಯಾಗುತ್ತಿರುವುದು ನಿಜ ಎಂದು ಪರಿಪ್ರಿಯಾ ಪರೋಕ್ಷವಾಗಿ ಹೇಳಿದಂತಿದೆ.

ಇದಕ್ಕೆ ರಿಯಾಕ್ಷನ್ ಕೊಟ್ಟಿರುವ ವಶಿಷ್ಠ ಸಿಂಹ ಅದೇ ಚಿತ್ರವನ್ನು ಪೋಸ್ಟ್ ಮಾಡಿ ಎಂದೂ ನಿನ್ನ ನೆರಳಾಗಿ ಕಾಯುವೆ ನಾನು ಎಂದು ಕ್ಯಾಪ್ಷನ್ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com