2022 ವರ್ಷಾಂತ್ಯಕ್ಕೆ ‘ಮೇಡ್ ಇನ್ ಬೆಂಗಳೂರು’ ಚಿತ್ರ ಬಿಡುಗಡೆ
2022 ವರ್ಷ ಕೊನೆಗೊಳ್ಳುತ್ತಿದ್ದು, ವರ್ಷಾಂತ್ಯಕ್ಕೆ ಹಲವು ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ. ಈ ಪಟ್ಟಿಗೆ ಇದೀಗ ಮೇಡ್ ಇನ್ ಬೆಂಗಳೂರು ಸೇರಿದ್ದು, ಚಿತ್ರವು ಡಿ.30ಕ್ಕೆ ಬಿಡುಗಡೆಯಾಗಲಿದೆ.
‘ರಜನಿ ಥರ್ಸ್ಡೆ ಸ್ಟೋರೀಸ್’ ಬ್ಯಾನರ್ನಲ್ಲಿ ಬಾಲಕೃಷ್ಣ ಬಿ.ಎಸ್. ನಿರ್ಮಾಣ ಮಾಡುತ್ತಿರುವ ‘ಮೇಡ್ ಇನ್ ಬೆಂಗಳೂರು’ ಚಿತ್ರದ ಕತೆ, ಚಿತ್ರಕತೆ ಹಾಗೂ ನಿರ್ದೇಶವನ್ನು ಪ್ರದೀಪ್ ಶಾಸ್ತ್ರಿ ಮಾಡಿದ್ದಾರೆ.
ಈ ಚಿತ್ರದ ಮುಖಾಂತರ ಮಧುಸೂದನ್ ಗೋವಿಂದ್, ಪುನೀತ್ ಮಾಂಜ, ವಂಶಿಧರ್ ಹಾಗೂ ಹಿಮಾಂಶಿ ವರ್ಮಾ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಶ್ವಿನ್.ಪಿ.ಕುಮಾರ್ ಸಂಗೀತ ನೀಡಿದ್ದು, ಭಜರಂಗ್ ಕೊಣತಮ್ ಛಾಯಾಗ್ರಹಣ ಮಾಡಿದ್ದಾರೆ.
ಕನಸುಗಳನ್ನು ಕಟ್ಟಿಕೊಂಡು ಬೆಂಗಳೂರಿಗೆ ಬರುವ ಯುವಕರ ಕತೆಗಳನ್ನು 'ಮೇಡ್ ಇನ್ ಬೆಂಗಳೂರು' ಹೇಳಲು ಹೊರಟಿದೆ.
ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಅವರು ಹೂಡಿಕೆದಾರ ಪಾತ್ರದಲ್ಲಿ ನಟಿಸುತ್ತಿದ್ದು, ಹಿರಿಯ ನಟರಾದ ಸಾಯಿಕುಮಾರ್ ಮತ್ತು ಪ್ರಕಾಶ್ ಬೆಳವಾಡಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಅನುರಾಗ್ ಪುತ್ತಿಗೆ, ಮತ್ತು ಅರ್ಚನಾ ಕೊಟ್ಟಿಗೆ, ಸುಧಾ ಬೆಳವಾಡಿ ಮತ್ತು ಮಂಜುನಾಥ್ ಹೆಗಡೆ ಜೊತೆಗೆ ಹಲವಾರು ಕಲಾವಿದರು ನಟಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ