ಚಾಲೆಂಜಿಂಗ್ ಸ್ಟಾರ್ ಮೇಲೆ ಚಪ್ಪಲಿ ಎಸೆತ; ಶಿವಣ್ಣ ಗರಂ, ವಾಣಿಜ್ಯ ಮಂಡಳಿ ಆಕ್ರೋಶ.. ಆದರೆ ದರ್ಶನ್ ಹೇಳಿದ್ದೇನು?

ಕ್ರಾಂತಿ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕೆಲ ಕಿಡಿಕೇಡಿಗಳು ಚಪ್ಪಲಿ ಎಸೆಯುವ ಮೂಲಕ ಅಗೌರವ ತೋರಿದ್ದು, ಇದು ಸ್ಯಾಂಡಲ್ ವುಡ್ ನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ದರ್ಶನ್ ಮೇಲೆ ಚಪ್ಪಲಿ ಎಸೆತ ಶಿವಣ್ಣ
ದರ್ಶನ್ ಮೇಲೆ ಚಪ್ಪಲಿ ಎಸೆತ ಶಿವಣ್ಣ

ಬೆಂಗಳೂರು: ಕ್ರಾಂತಿ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕೆಲ ಕಿಡಿಕೇಡಿಗಳು ಚಪ್ಪಲಿ ಎಸೆಯುವ ಮೂಲಕ ಅಗೌರವ ತೋರಿದ್ದು, ಇದು ಸ್ಯಾಂಡಲ್ ವುಡ್ ನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ದರ್ಶನ್ ಮೇಲೆ ದುಷ್ಕರ್ಮಿಗಳು ಚಪ್ಪಲಿ ಎಸೆದಿದ್ದಾರೆ. ಕಾಂತ್ರಿ ಚಿತ್ರದ 2ನೇ ಹಾಡು ಬೊಂಬೆ ಬೊಂಬೆಯನ್ನು ಬಳ್ಳಾರಿಯ ಹೊಸಪೇಟೆ ಪಟ್ಟಣದ ಡ್ಯಾಮ್ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ಥದಲ್ಲಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಹೊಸಪೇಟೆಯಲ್ಲಿ ಪುನೀತ್ ರಾಜಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿತ್ತು. ಕಾಂತ್ರಿ ಚಿತ್ರದ ಪೋಸ್ಟರ್ ಗಳನ್ನು ಅಪ್ಪು ಅಭಿಮಾನಿಗಳು ಹರಿದುಹಾಕಿ ಅಪ್ಪು ಕಟ್ ಔಟ್ ಹಿಡಿದು ಅಪ್ಪುಗೆ ಜೈಕಾರ ಹಾಕಿ ವೇದಿಕೆ ಏರಿದ್ದರು.

ಇದರ ಹೊರತಾಗಿಯೂ ದರ್ಶನ್ ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಕಾರ್ಯಕ್ರಮ ಶುರುವಾಯಿತು. ವೇದಿಕೆ ಮೇಲೆ ರಚಿತಾ ರಾಮ್ ಚಿತ್ರದ ಕುರಿತು ಮಾತನಾಡುತ್ತಿದ್ದಾಗ ಯಾರೋ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಶಿವಣ್ಣ ಗರಂ
ಇನ್ನು ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಿವರಾಜ್ ಕುಮಾರ್ ಅವರು ಘಟನೆಯನ್ನು ಖಂಡಿಸಿದ್ದು, ನೆನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ ಅಭಿಮಾನದಿಂದ ಪ್ರೀತಿಯನ್ನು ತೋರಿ; ದ್ವೇಷ ಅಗೌರವವನ್ನಲ್ಲ ಎಂದು ಹೇಳಿದ್ದಾರೆ.

ವಾಣಿಜ್ಯ ಮಂಡಳಿ ಖಂಡನೆ
ಚಪ್ಪಲಿ ಎಸೆದ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ, ಹೊಸಪೇಟೆಯಲ್ಲಿ ನಡೆದ ಘಟನೆ ತುಂಬಾ ನೋವುಂಟು ಮಾಡಿದೆ. ಈ ಘಟನೆ ಚಿತ್ರರಂಗಕ್ಕೆ ಒಂದು ಕಪ್ಪು ಚುಕ್ಕೆ. ಅಭೀಮಾನ ಯಾವುದೇ ಕಾರಣಕ್ಕೂ ಅತಿರೇಖ ಆಗಬಾರದು. ಚಿತ್ರರಂಗದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಗೌರವ ಕೊಡಿ.. ಚಿತ್ರರಂಗ ಒಂದು ಎಂಬಂತೆ ನಾವೆಲ್ಲಾ ಬಾಳೋಣ. ಈ ರೀತಿ ಯಾವುದೇ ಕಲಾವಿದನ ಮೇಲೆ ಮಾಡುವುದು ಸರಿಯಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ,ಮ ಹರೀಶ್ ಹೇಳಿದ್ಧಾರೆ.

ತಕ್ಕ ಶಿಕ್ಷ ಆಗಬೇಕು ಎಂದ ನೆನಪಿರಲಿ ಪ್ರೇಮ್
ಚಪ್ಪಲಿ ಎಸೆದು ಅವಮಾನ ಮಾಡಿದವರು ಯಾರೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಭಾಯಿಜಾನ್ ನಿಮ್ಮೊಂದಿಗೆ ನಾವಿದ್ದೇವೆ. ಕಲೆ ಮತ್ತು ಕಲಾವಿದರನ್ನು ಗೌರವಿಸಬೇಕು.

ಅಸಭ್ಯ ವರ್ತನೆಗೆ ಧಿಕ್ಕಾರವಿರಲಿ: ನಟ ಜೆಕೆ
ಹೊಸಪೇಟೆಯಲ್ಲಿ ಒಂದು ಕೆಟ್ಟ ಬೆಳವಣಿಗೆ ನಡೆದಿದೆ. ಅಂತಹ ವ್ಯಕ್ತಿಗೆ ಈ ರೀತಿ ಅವಮಾನ ಮಾಡಿದ್ರಲ್ಲಾ ನಿಮ್ಮ ಅಸಭ್ಯ ವರ್ತನೆಗೆ ಧಿಕ್ಕಾರವಿರಲಿ. ಚಪ್ಪಾಳೆ ತಟ್ಟುವ ಕೈಗೆ ಚಪ್ಪಲಿ ಬಂದಾಗ ಮಲೀನವಾಗಿದ್ದು ಕೈಗಳೇ ಹೊರತು ಕಲಾವಿದನಲ್ಲ.
-ನಟ ಜಯರಾಮ್ ಕಾರ್ತಿಕ್

ನಟರಾದ ರಾಜವರ್ಧನ್, ಧನ್ವೀರ್ ಗೌಡ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ನಟರು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ದರ್ಶನ್ ಅವರ ಮೇಲೆ ಈ ರೀತಿ ನಡೆದುಕೊಂಡ ಕಿಡಿಗೇಡಿಗಳಿಗೆ ತಕ್ಷಣ ಶಿಕ್ಷೆಯಾಗಬೇಕು. ಈ ರೀತಿಯ ಘಟನೆ ಮುಂದೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರನ್ನು ಬೆಂಬಲಿಸುವ ಪೋಸ್ಟ್ ಗಳು ನಿನ್ನೆ ರಾತ್ರಿಯಿಂದಲೇ ಹರಿದಾದುತ್ತಿದ್ದು ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಡ ಹೆಚ್ಚಾಗಿದೆ.

ʼಪರವಾಗಿಲ್ಲ ಬಿಡು ಚಿನ್ನʼ ಎಂದ ದರ್ಶನ್
ಚಪ್ಪಲಿ ಎಸೆತವಾದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತವೇ ಇದಕ್ಕೆ ಸೌಮ್ಯವಾಗಿ ಉತ್ತರಿಸಿದ ನಟ ದರ್ಶನ್, ತಪ್ಪೇನು ಇಲ್ಲ.. ಪರವಾಗಿಲ್ಲ ಬಿಡು ಚಿನ್ನ ಎಂದು ಹೇಳುವ ಮೂಲಕ ದೊಡ್ಡತನ ಮೆರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com