ನಾನು ಒಂದು ಇಂಡಸ್ಟ್ರಿಗೆ ಸೀಮಿತವಾಗಿರಲು ಬಯಸುವುದಿಲ್ಲ: ಪದವಿ ಪೂರ್ವ ಚಿತ್ರದ ನಟಿ ಅಂಜಲಿ ಅನೀಶ್

ತಮ್ಮ ವೃತ್ತಿಜೀವನದಲ್ಲಿ ವಿಭಿನ್ನ ಮಾರ್ಗಗಳನ್ನು ನಿಭಾಯಿಸುವ ಬಗ್ಗೆ ಆತ್ಮವಿಶ್ವಾಸವನ್ನು ನಟಿ ಅಂಜಲಿ ಅನೀಶ್ ವ್ಯಕ್ತಪಡಿಸುತ್ತಾರೆ. ಈ ವಾರ ಪದವಿ ಪೂರ್ವ ಸಿನಿಮಾ ಬಿಡುಗಡೆಯಾಗಲಿದ್ದು, ಮಾಡೆಲ್ ಆಗಿದ್ದ ಅಂಜಲಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಪದವಿ ಪೂರ್ವ ಚಿತ್ರದ ಪೋಸ್ಟರ್
ಪದವಿ ಪೂರ್ವ ಚಿತ್ರದ ಪೋಸ್ಟರ್

ತಮ್ಮ ವೃತ್ತಿಜೀವನದಲ್ಲಿ ವಿಭಿನ್ನ ಮಾರ್ಗಗಳನ್ನು ನಿಭಾಯಿಸುವ ಬಗ್ಗೆ ಆತ್ಮವಿಶ್ವಾಸವನ್ನು ನಟಿ ಅಂಜಲಿ ಅನೀಶ್ ವ್ಯಕ್ತಪಡಿಸುತ್ತಾರೆ. ಈ ವಾರ ಪದವಿ ಪೂರ್ವ ಸಿನಿಮಾ ಬಿಡುಗಡೆಯಾಗಲಿದ್ದು, ಮಾಡೆಲ್ ಆಗಿದ್ದ ಅಂಜಲಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರು ಹಿಂದಿ ಸಿನಿಮಾ ಭಯ್ಯಾಜಿ ಸೂಪರ್‌ಹಿಟ್ ಮತ್ತು ಕನ್ನಡ ಚಿತ್ರ ಸಿನಿಮಾ ಅಂಬಿ ನಿಂಗ್ ವಯಸ್ಸಾಯ್ತೋಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಅಷ್ಟೆ ಅಲ್ಲ, ಸದ್ಯ ಕಾನೂನು ಓದುತ್ತಿರುವ ಅಂಜಲಿ, ಚಿಕಾಗೋ ಮತ್ತು ಮುಂಬೈನ ಅನುಪಮ್ ಖೇರ್ ಸಂಸ್ಥೆಯಲ್ಲಿ ನಟನೆಯ ತರಬೇತಿಯನ್ನೂ ಪಡೆದಿದ್ದಾರೆ.

'ನಾನು ಕೇವಲ ನಟಿಯಾಗಲು ಇಲ್ಲಿಗೆ ಬಂದಿಲ್ಲ. ನಾನು ನಿರ್ದೇಶಕಿಯಾಗಲು ಬಯಸುತ್ತೇನೆ ಮತ್ತು ಉದ್ಯಮಿ ಕೂಡ. ನಾನು ಕೆಲವು ಕೆಲಸಗಳನ್ನು ಮಾಡಲು ಬಯಸುತ್ತೇನೆ ಮತ್ತು ಇದೆಲ್ಲದಕ್ಕೂ ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ಆದರೆ, ನಟಿಯಾಗಿ  ವೃತ್ತಿಜೀವನ ಯಾವಾಗಲೂ ಇರುತ್ತದೆ' ಎನ್ನುತ್ತಾರೆ ಅಂಜಲಿ.

'ಅಂತಿಮವಾಗಿ, ನಾನು ಪೂರ್ಣ ಪ್ರಮಾಣದ ಚಲನಚಿತ್ರ ನಿರ್ದೇಶಕಿಯಾಗಲು ಬಯಸುತ್ತೇನೆ. ಒಮ್ಮೆ ನಾನು ಉತ್ತಮ ಹಣವನ್ನು ಗಳಿಸಿದರೆ, ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತೇನೆ. ಇದು ಬಹುಶಃ ನನ್ನ ತಾಯಿಯಿಂದ ಬಂದಿದೆ. ಅವರು ವಕೀಲೆಯಾಗಿದ್ದಾರೆ ಮತ್ತು ಇತರ ಹಲವು ವಿಷಯಗಳಲ್ಲೂ ಕೆಲಸ ಮಾಡುತ್ತಾರೆ. ಹೀಗಾಗಿಯೇ, ನಾನು ಒಂದು ಉದ್ಯಮದಲ್ಲಿ ಸೀಮಿತವಾಗಿರಲು ಬಯಸುವುದಿಲ್ಲ. ಏಕೆಂದರೆ, ನಾನು ಹೆಚ್ಚಿನದನ್ನು ಮಾಡಲು ಸಮರ್ಥಳು ಎಂಬುದು ನನಗೆ ತಿಳಿದಿದೆ' ಎಂದು ಅವರು ಹೇಳುತ್ತಾರೆ.

ಪದವಿ ಪೂರ್ವ 1990 ರ ದಶಕದಲ್ಲಿ ನಡೆಯುವ ಕಥೆಯಾಗಿದ್ದು, ಇದುವೇ ಈ ಕಥೆಯನ್ನು ಆಯ್ಕೆ ಮಾಡಲು ಕಾರಣವಾಯಿತು ಎನ್ನುವ ಅವರು, 'ಸಾಮಾನ್ಯವಾಗಿ ಸಿನಿಮಾಗಳು 60 ಅಥವಾ 70 ರ ದಶಕದಷ್ಟು ಹಿಂದಿನ ಕಥೆಯನ್ನು ತೆರೆಮೇಲೆ ತರುತ್ತವೆ. ಆದರೆ, 90 ರ ದಶಕವು ಉತ್ತಮ ಸಮಯವಾಗಿದೆ. ಏಕೆಂದರೆ ಅದು ಕೇವಲ 25-30 ವರ್ಷಗಳ ಹಿಂದಿನದು. ಅಲ್ಲದೆ, ಚಿತ್ರದಲ್ಲಿ ಸಾಕಷ್ಟು ಮುಗ್ಧತೆಯಿದೆ ಮತ್ತು ಅದು ನನ್ನ ಪಾತ್ರದಲ್ಲಿಯೂ ಬರುತ್ತದೆ. ಇದು ನನ್ನ ಮೊದಲ ಚಿತ್ರವಾದ್ದರಿಂದ, ನನ್ನ ವಯಸ್ಸಿಗೆ ಸಮಾನವಾದ ಪಾತ್ರವನ್ನು ಹೊಂದಿರುವ ಚಿತ್ರದ ಭಾಗವಾಗಲು ನಾನು ಬಯಸುತ್ತೇನೆ' ಎಂದು ಅವರು ಹೇಳುತ್ತಾರೆ.

ನಾಯಕ ಪೃಥ್ವಿ ಶಾಮನೂರು, ಚಿತ್ರವು ಸಂದೇಶವನ್ನು ನೀಡುವ ಉದ್ದೇಶವನ್ನು ಹೊಂದಿಲ್ಲ ಎಂದರೆ, ಅಂಜಲಿ ಭಿನ್ನವಾಗಿ ಹೇಳಿದರು. 'ಇದು ವ್ಯಕ್ತಿಯಿಂದ ವ್ಯಕ್ತಿಯನ್ನು ಅವಲಂಬಿಸಿರುತ್ತದೆ ಮತ್ತು ಪ್ರತಿಯೊಬ್ಬರೂ ಅದನ್ನು ವಿಭಿನ್ನ ರೀತಿಯಲ್ಲಿ ನೋಡುತ್ತಾರೆ. ಒಂದು ಸಂದೇಶವಿಲ್ಲ. ಆದರೆ, ಚಿತ್ರದಲ್ಲಿ ಹಲವಾರು ಸಂದೇಶಗಳಿವೆ. ಪ್ರೇಕ್ಷಕರು ಚಿತ್ರದ ಕನಿಷ್ಠ ಒಂದು ಭಾಗವನ್ನಾದರೂ ತಮ್ಮೊಂದಿಗೆ ಹೋಲಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಪದವಿ ಪೂರ್ವದ ಸಂದೇಶವೆಂದರೆ ಪ್ರೀತಿ ಮತ್ತು ಸ್ನೇಹವನ್ನು ಹರಡುವುದು. ಎರಡನೆಯದಾಗಿ, ಯಾವುದೇ ಯುವಕನ ಜೀವನದಲ್ಲಿ ಪಿಯುಸಿ ದಿನಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅದನ್ನು ನಿರ್ದೇಶಕರು ಚೆನ್ನಾಗಿ ಸೆರೆಹಿಡಿದಿದ್ದಾರೆ ಮತ್ತು ಭಾವುಕ ಭಾವನೆಯನ್ನು ನೀಡುತ್ತದೆ' ಎನ್ನುತ್ತಾರೆ ಅಂಜಲಿ.

ನಾನೊಂದು ಸ್ವಚ್ಛವಾದ ಸ್ಲೇಟ್ ಇದ್ದಂತೆ. ನಾನು ವಿಭಿನ್ನ ಪಾತ್ರಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ. 'ನಾನು ಜಂಬೋ ಸರ್ಕಸ್‌ಗಾಗಿ ನಿರ್ದೇಶಕ ಎಂ.ಡಿ. ಶ್ರೀಧರ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಇದು ನನ್ನ ಮೊದಲ ಚಿತ್ರಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತ ವಿಭಿನ್ನ ಪಾತ್ರವನ್ನು ಹೊಂದಿದೆ. ಸದ್ಯಕ್ಕೆ ನನ್ನ ಗಮನವೆಲ್ಲ ಪದವಿ ಪೂರ್ವ ಸಿನಿಮಾದ ಮೇಲಿದೆ ಮತ್ತು ಸಿನಿಮಾದಲ್ಲಿ ನನ್ನ ಮೊದಲ ಹೆಜ್ಜೆಗೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ನಾನು ಕಾಯುತ್ತಿದ್ದೇನೆ' ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com