ದೇಶದ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ರೂ. 300 ಕೋಟಿ ಸನ್ನಿಹದಲ್ಲಿ ಕಮಲ್ ಹಾಸನ್  'ವಿಕ್ರಮ್'

ಇತ್ತೀಚಿಗೆ ಬಿಡುಗಡೆಯಾದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ 'ವಿಕ್ರಮ್ ಚಿತ್ರ' ಬಾಕ್ಸ್ ಆಫೀಸ್ ನಲ್ಲಿ ಈ ವಾರವೂ ಉತ್ತಮ ಕಲೆಕ್ಷನ್ ಮಾಡಿದೆ.
ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್
ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್
Updated on: 

ಚೆನ್ನೈ: ಇತ್ತೀಚಿಗೆ ಬಿಡುಗಡೆಯಾದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ 'ವಿಕ್ರಮ್ ಚಿತ್ರ' ಬಾಕ್ಸ್ ಆಫೀಸ್ ನಲ್ಲಿ ಈ ವಾರವೂ ಉತ್ತಮ ಕಲೆಕ್ಷನ್ ಮಾಡಿದೆ. ಮೂರನೇ ವಾರಾಂತ್ಯದಲ್ಲಿ ಈ ಚಿತ್ರ ಅಂದಾಜು ರೂ. 39 ಕೋಟಿ ದೋಚಿದೆ, ಈ ಮೂಲಕ ದೇಶದಲ್ಲಿ ಇಲ್ಲಿಯವರೆಗೂ 276 ಕೋಟಿ ರೂ. ಭರ್ಜರಿ ಕಲೆಕ್ಷನ್ ಮಾಡಿದೆ.

ದೇಶದಲ್ಲಿ ರೂ. 300 ಕೋಟಿ ಕಲೆಕ್ಷನ್ ನತ್ತ ದಾಪುಗಾಲು ಇಟ್ಟಿರುವ ವಿಕ್ರಮ್, ವಿಶ್ವದಾದ್ಯಂತ 400 ಕೋಟಿ ರೂ. ಸನ್ನಿಹದಲ್ಲಿದೆ. ವಿಶ್ವದಾದ್ಯಂತ ಇಷ್ಟು ಹಣ ದೋಚಿದ ಎರಡನೇ ಕಾಲಿವುಡ್ ಸಿನಿಮಾ ಇದಾಗಿದೆ.

ಬಿಡುಗಡೆಯಾದ ಮೊದಲ ವಾರ ರೂ. 164.75 ಕೋಟಿ ಗಳಿಕೆ ಕಂಡಿದ್ದ ವಿಕ್ರಮ್, ಎರಡನೇ ವಾರದಲ್ಲಿ ಒಟ್ಟಾರೇ 72. 50 ಕೋಟಿ ಬ್ಯುಸಿನೆಸ್ ಮಾಡಿತ್ತು. ಜುಲೈ 8 ರಂದು ಡಿಸ್ನಿ+ ಹಾಟ್ ಸ್ಟಾರ್ ಒಟಿಟಿ ವೇದಿಕೆ ಮೂಲಕವೂ ಚಿತ್ರ ಬಿಡುಗಡೆಯಾಗಲಿದ್ದು, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಲೋಕೇಶ್ ಕನಗರಾಜ್ ನಿರ್ದೇಶನದ ವಿಕ್ರಮ್ ಚಿತ್ರದಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಎಫ್ ಫಾಸಿಲ್ ಪ್ರಮುಖ ಪಾತ್ರದಲ್ಲಿದ್ದು, ನಟರಾಜ ಚೆಂಬನ್ ವಿನೋದ್ ಜೋಸ್, ಕಾಳಿದಾಸ್ ಜಯರಾಮ್, ಅಂಟೋನಿ ವರ್ಗೀಸ್ ಮತ್ತಿತರರು ಅಭಿನಯಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com