ಪವನ್ ಒಡೆಯರ್ ನಿರ್ದೇಶನದ 'ರೆಮೋ' ಚಿತ್ರದ ಅತ್ಯುತ್ತಮ ವಿಚಾರವೆಂದರೆ ಸ್ಕ್ರಿಪ್ಟ್: ನಟಿ ಆಶಿಕಾ ರಂಗನಾಥ್

'ರೆಮೋ' ನಟಿ ಆಶಿಕಾ ರಂಗನಾಥ್ ಅವರ ಒಂಬತ್ತನೇ ಚಿತ್ರ. ಇದೇ ಮೊದಲ ಬಾರಿಗೆ ನಟ ಇಶಾನ್ ಮತ್ತು ನಿರ್ದೇಶಕ ಪವನ್ ಒಡೆಯರ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಆಶಿಕಾ.
ಆಶಿಕಾ ರಂಗನಾಥ್
ಆಶಿಕಾ ರಂಗನಾಥ್

'ರೆಮೋ' ನಟಿ ಆಶಿಕಾ ರಂಗನಾಥ್ ಅವರ ಒಂಬತ್ತನೇ ಚಿತ್ರ. ಇದೇ ಮೊದಲ ಬಾರಿಗೆ ನಟ ಇಶಾನ್ ಮತ್ತು ನಿರ್ದೇಶಕ ಪವನ್ ಒಡೆಯರ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಆಶಿಕಾ. 'ಇದು ಕೋವಿಡ್‌ನಿಂದಾಗಿ ದೀರ್ಘಕಾಲದಿಂದ ನಿರ್ಮಾಣವಾಗುತ್ತಿರುವ ಚಲನಚಿತ್ರವಾಗಿದೆ. ಆದರೆ, ಸಿನಿಮಾ ಶುರುವಾದಾಗಿನಿಂದ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ’ ಎಂದು ನವೆಂಬರ್ 25 ರಂದು ಚಿತ್ರ ಬಿಡುಗಡೆಯಾಗುವ ಮುನ್ನ ಆಶಿಕಾ ಹೇಳುತ್ತಾರೆ.

ಯಾವುದೇ ಚಲನಚಿತ್ರ ಹಿನ್ನೆಲೆಯಿಂದ ಬಂದಿಲ್ಲದ ಅವರು, 'ನಾನು ಪವನ್ ಒಡೆಯರ್ ಅವರ ಗೂಗ್ಲಿ ಸಿನಿಮಾವನ್ನು ನೋಡಿ ಆನಂದಿಸಿದೆ ಮತ್ತು ಅಂದಿನಿಂದ ನಾನು ಅವರ ನಿರ್ದೇಶನದಲ್ಲಿ ಕೆಲಸ ಮಾಡಲು ಕಾಯುತ್ತಿದ್ದೆ. ಅವಕಾಶ ಸಿಕ್ಕಾಗ ಮತ್ತಷ್ಟು ಉತ್ಸುಕಳಾದೆ. ಮ್ಯೂಸಿಕಲ್ ಮತ್ತು ಔಟ್-ಅಂಡ್-ಔಟ್ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಸಾಮಾನ್ಯವಾಗಿ, ಲವ್ ಸ್ಟೋರಿಗಳು ಮಾತ್ರ ನಾಯಕಿಯರಿಗೆ ಸಮಾನವಾದ ಪಾತ್ರವನ್ನು ನೀಡುತ್ತವೆ ಮತ್ತು ಏನಾದರೂ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ರೆಮೋ ಕೂಡ ಅಂತಹ ಒಂದು ಸಿನಿಮಾವಾಗಿದೆ ಎನ್ನುತ್ತಾರೆ.

'ಪವನ್ ಅವರ ಪ್ರಕಾರ, ನಾನು ಮುಗ್ಧ ಮುಖವನ್ನು ಹೊಂದಿರುವುದೇ ಅವರು ನನ್ನನ್ನು ಈ ಪಾತ್ರಕ್ಕೆ ಆಯ್ಕೆಮಾಡಲು ಪ್ರಮುಖ ಕಾರಣ. ಯಾವುದೇ ಒಂದು ಪಾತ್ರಕ್ಕೆ ನೀವು ಹೊಂದಿಕೆಯಾಗುತ್ತೀರಿ ಎಂದು ನಿರ್ದೇಶಕರಿಗೆ ಅನಿಸಿದಾಗಲೇ ನಿಮ್ಮ ಅರ್ಧದಷ್ಟು ಕೆಲಸ ಮುಗಿದಿದೆ ಎಂದರ್ಥ. ಇನ್ನೊಂದು 50 ಪ್ರತಿಶತವು ನಾವು ಕೆಲಸ ಮಾಡುವುದರಲ್ಲಿದೆ. ಮೋಹನನ ಪಾತ್ರವನ್ನು ಮಾಡುವುದು ನನಗೆ ಕಷ್ಟವಾಗಲಿಲ್ಲ. ಸ್ವಲ್ಪ ವ್ಯತ್ಯಾಸಗಳಿದ್ದರೂ, ಪಾತ್ರವು ನನಗೆ ಹೋಲಿಕೆಯಾಗುತ್ತದೆ. ನಾನು ಈ ಪಾತ್ರವನ್ನು ಆನಂದಿಸಿದೆ. ಆದಾಗ್ಯೂ, ಕೆಲವು ದೃಶ್ಯಗಳು ನನ್ನ ಕಂಫರ್ಟ್ ಝೋನ್‌ನಿಂದ ಹೊರಬಂದವು. ಈ ಸಿನಿಮಾದಲ್ಲಿ ಪ್ರೇಕ್ಷಕರು ನನ್ನನ್ನು ಹೊಸ ರೀತಿಯಲ್ಲಿ ನೋಡುತ್ತಾರೆ ಎಂದು ನಾನು ನಂಬುತ್ತೇನೆ' ಎಂದು ಅವರು ಹೇಳುತ್ತಾರೆ.

'ನನ್ನ ಪಾತ್ರದಲ್ಲಿ ಎರಡು ಶೇಡ್‌ಗಳಿವೆ. ಒಬ್ಬ ಗಾಯಕಿಯಾಗಿ, ಶ್ರೇಯಾ ಘೋಷಾಲ್ ಅವರು ಗಾಯಕಿಯ ವ್ಯಕ್ತಿತ್ವ ಮತ್ತು ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ನನಗೆ ಸಲಹೆಗಳನ್ನು ನೀಡಿದರು. ಗಾಯಕಿಯಾಗುವುದರ ಹೊರತಾಗಿ, ಆಕೆ ತನ್ನ ತಂದೆ, ಸಮಾಜ ಮತ್ತು ಅದರೊಂದಿಗೆ ಬರುವ ಸವಾಲುಗಳನ್ನು ನಿಭಾಯಿಸುತ್ತಾಳೆ' ಎಂದು ಆಶಿಕಾ ಹೇಳುತ್ತಾರೆ.

ನಿಜ ಜೀವನದಲ್ಲಿ ನಾವಲ್ಲದ ಪಾತ್ರದ ಭಾಗವಾಗುವುದು ಯಾವಾಗಲೂ ರೋಮಾಂಚನಕಾರಿ ಆಗಿರುತ್ತದೆ. ಅದರಲ್ಲೂ ಗಾಯಕಿಯಾಗುವುದು, 'ಪ್ರತಿಯೊಬ್ಬರಲ್ಲಿಯೂ ಒಬ್ಬ ಗಾಯಕನಿದ್ದಾನೆ. ಒಳ್ಳೆಯ ಅಥವಾ ಕೆಟ್ಟ ಹಾಡುಗಳು ಪ್ರತಿಯೊಂದು ಸನ್ನಿವೇಶದಲ್ಲಿ ಮತ್ತು ವಿಭಿನ್ನ ಮನಸ್ಥಿತಿಗಳಲ್ಲಿ ಮಾನವ ಜೀವನದ ಭಾಗವಾಗಿರುತ್ತವೆ. ಸಂಗೀತವು ಎಲ್ಲರಿಗೂ ಚಿಕಿತ್ಸೆಯಾಗಿದೆ. ಕನಿಷ್ಠ ನಮ್ಮಲ್ಲಿ ಹೆಚ್ಚಿನವರಿಗೆ ಸಂಗೀತ ಚಿಕಿತ್ಸೆಯೇ. ಆದರೆ, ಗಾಯಕರಾಗಲು ಸಾಕಷ್ಟು ಪ್ರತಿಭೆ ಬೇಕು' ಎಂದು ಹೇಳುತ್ತಾರೆ.

ನಿರ್ದೇಶಕ ಪವನ್ ಅವರೊಂದಿಗಿನ ಕೆಲಸದ ಅನುಭವದ ಬಗ್ಗೆ ಮಾತನಾಡುತ್ತಾ, 'ಅವರು ತುಂಬಾ ಆ್ಯಕ್ಟಿವ್ ವ್ಯಕ್ತಿ. ಅವರು ಸಮಯ ವ್ಯರ್ಥ ಮಾಡುವುದಿಲ್ಲ. ನಾನು ಕೂಡ ಅಂತಹ ಜನರ ಸುತ್ತಲೂ ಇರಲು ಮತ್ತು ಸಾಧ್ಯವಾದಷ್ಟು ನಾನು ಆ್ಯಕ್ಟಿವ್ ಆಗಿರಲು ಬಯಸುತ್ತೇನೆ. ಇದುವೇ ರೆಮೋ ಸಿನಿಮಾದ ನಿರ್ದೇಶಕರಿಂದ ನಾನು ಕಲಿಯಬಹುದಾದ ವಿಷಯ. ಅವರ ಸಂಭಾಷಣೆಗಳು ವಾಸ್ತವ ಮತ್ತು ಸಂಬಂಧಿಸಿದವುಗಳಾಗಿವೆ. ಅವರು ನಿಜವಾಗಿಯೂ ಉತ್ತಮ ತಂತ್ರಜ್ಞ' ಎಂದು ಹೇಳುತ್ತಾರೆ ಆಶಿಕಾ.

ತನ್ನ ಸಹ ಕಲಾವಿದ ಇಶಾನ್ ಬಗ್ಗೆ ಮಾತನಾಡುವ ಆಶಿಕಾ, 'ನಾನು ಇಲ್ಲಿಯವರೆಗೆ ಕೆಲಸ ಮಾಡಿದ ನಾಯಕರು, ಹೆಚ್ಚಾಗಿ ಫೇಮಸ್ ಆದವರು ಮತ್ತು ಅವರು ಸಾಕಷ್ಟು ಅನುಭವವುಳ್ಳವರು. ಅವರು ನಾನು ಕಂಫರ್ಟ್ ಆಗಿರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ, ಇಶಾನ್ ಜೊತೆಯಲ್ಲಿ, ಇದು ತಿರುಗುಮುರುಗಾಗಿತ್ತು. ಆರಂಭದಲ್ಲಿ, ನಾವು ಮಾತನಾಡಲು ಸಮಯ ತೆಗೆದುಕೊಂಡೆವು. ಆದರೆ, ಚಿತ್ರವು ಪ್ರೇಮಕಥೆಯಾಗಿರುವುದರಿಂದ ನಾವು ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕೆಂದು ಪವನ್ ಒತ್ತಾಯಿಸಿದರು. ಕಾಲಾನಂತರದಲ್ಲಿ, ನಾವು ಉತ್ತಮ ಸ್ನೇಹಿತರಾಗಿದ್ದೇವೆ ಮತ್ತು ಅದು ಚಿತ್ರಕ್ಕಾಗಿ ನಮ್ಮ ಪರವಾಗಿ ಕೆಲಸ ಮಾಡಿತು. ಒಂದು ರೀತಿಯಲ್ಲಿ, ಇದು ಯಾವುದೇ ಹಿಂಜರಿಕೆಯಿಲ್ಲದೆ ಕೆಲವು ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಲು ನಮಗೆ ಸಹಾಯ ಮಾಡಿತು' ಎಂದು ಅವರು ಹೇಳುತ್ತಾರೆ.

ಆಶಿಕಾ ಹೇಳುವಂತೆ ರೆಮೋದ ಅತ್ಯುತ್ತಮ ವಿಷಯವೆಂದರೆ ಸ್ಕ್ರಿಪ್ಟ್. 'ಇದು ಬಹಳಷ್ಟು ವೇರಿಯೇಷನ್ಸ್‌ಗಳನ್ನು ಹೊಂದಿದೆ ಮತ್ತು ಇದು ಪಾತ್ರ ಆಧಾರಿತ ಕಥೆಯಲ್ಲ. ಇದು ಲವ್ ಸ್ಟೋರಿಯಾಗಿದ್ದರೂ, ಸೆಂಟಿಮೆಂಟ್ ಇದೆ ಮತ್ತು ಉತ್ತಮ ರೀತಿಯ ಕಮರ್ಷಿಯಲ್ ಅಂಶಗಳಿವೆ. ಯುವ ಪೀಳಿಗೆಯ ಆತುರದ ನಿರ್ಧಾರಗಳ ಬಗ್ಗೆ ಸಿನಿಮಾ ಚರ್ಚಿಸುತ್ತದೆ. ಇದು ಯುವ ಪ್ರತಿಭೆಗಳ ಯಶಸ್ಸಿನ ಹೋರಾಟದ ಬಗ್ಗೆಯೂ ಹೇಳುತ್ತದೆ. ಇದು ಟೇಕ್‌ಅವೇ ಸಂದೇಶದೊಂದಿಗೆ ಉತ್ತಮ ಮನರಂಜನೆಯಾಗಿದೆ' ಎಂದು ಅವರು ಹೇಳುತ್ತಾರೆ.

ಆರು ವರ್ಷಗಳಲ್ಲಿ ಒಂಬತ್ತು ಚಿತ್ರಗಳು, ತಮಿಳು ಮತ್ತು ತೆಲುಗು ಇಂಡಸ್ಟ್ರಿಯಿಂದ ಆಫರ್‌ಗಳನ್ನು ಪಡೆಯುತ್ತಿರುವ ಆಶಿಕಾ ಇದನ್ನು ಯೋಜಿತ ಕ್ರಮ ಎಂದು ಕರೆಯುತ್ತಾರೆ. 'ನನ್ನ ಬಳಿ ಬಂದ ಚಿತ್ರಗಳಲ್ಲಿ ಕೆಲಸ ಮಾಡಲು ನಾನು ಒಪ್ಪಿದೆ. ಆದರೆ, ರ‍್ಯಾಂಬೋ 2 ಚಿತ್ರದ ಯಶಸ್ಸು ಮತ್ತು ಚುಟ್ಟು ಚುಟ್ಟು ಹಾಡಿಗೆ ಸಿಕ್ಕಿದ ಸ್ವಾಗತ ನನ್ನ ಸಿನಿಮಾ ವೃತ್ತಿಜೀವನದ ಸಂಪೂರ್ಣ ದೃಷ್ಟಿಕೋನವನ್ನೇ ಬದಲಿಸಿತು. ಇದು ನನ್ನಲ್ಲಿ ಜವಾಬ್ದಾರಿಯುತ ಭಾವನೆ ಮೂಡಿಸಿತು ಮತ್ತು ಒಳ್ಳೆಯ ಚಿತ್ರಗಳ ಭಾಗವಾಗುವಂತೆ ಮಾಡಿದೆ. ಆಗ ನನ್ನಿಂದ ಉತ್ತಮವಾದದ್ದನ್ನು ಹೊರತರುವ ನಿರ್ದೇಶಕರ ಜತೆ ಕೆಲಸ ಮಾಡಲು ಆದ್ಯತೆ ನೀಡಿದ್ದೆ' ಎಂದು ಹೇಳುತ್ತಾರೆ.

'ಅದಕ್ಕಾಗಿಯೇ ನಾನು ಮೊದಲಿಗೆ ಉತ್ತಮ ಸ್ಕ್ರಿಪ್ಟ್‌ಗಳನ್ನು ಆಯ್ದುಕೊಳ್ಳುತ್ತೇನೆ. ಬೇರೆ ಭಾಷೆಗಳಲ್ಲಿ ಕೆಲಸ ಮಾಡಲು ಸ್ವಲ್ಪ ಸಮಯ ತೆಗೆದುಕೊಂಡೆ. ಆದರೆ, ನನಗೆ ಎಲ್ಲಾ ಚಿತ್ರಗಳು ಒಂದೇ ಮತ್ತು ಭಾಷೆಗಳು ಮುಖ್ಯವಲ್ಲ. ಆದರೆ, ಭಾಷೆಯ ಕಾರಣದಿಂದಲೇ ಆರಂಭದಲ್ಲಿ ನಾನು ತಮಿಳು ಮತ್ತು ತೆಲುಗಿನಲ್ಲಿ ಏಲಿಯನ್ ರೀತಿಯಂತೆ ಅನಿಸಿತು. ಅದೃಷ್ಟವಶಾತ್, ನಾನು ಎಲ್ಲರಿಂದ ಉತ್ತಮ ಬೆಂಬಲವನ್ನು ಪಡೆಯುತ್ತಿದ್ದೇನೆ. ಆದರೆ, ನಮ್ಮ ಭಾಷೆಯಲ್ಲಿ ಕೆಲಸ ಮಾಡುವುದು ಅಂತಹ ಭಾವನೆಯನ್ನು ಉಂಟುಮಾಡುವುದಿಲ್ಲ' ಎಂದು ಆಶಿಕಾ ತಿಳಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com