ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರಕ್ಕೆ ನಟ ಧನುಷ್ ಮೆಚ್ಚುಗೆಯ ಸುರಿಮಳೆ!

ಇತ್ತೀಚಿಗೆ ಬಿಡುಗಡೆಯಾದ ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಕನ್ನಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ, ವಿಮರ್ಶೆ ವ್ಯಕ್ತವಾಗಿದೆ. ಇದರಿಂದಾಗಿ ಇದೀಗ ಚಿತ್ರವು ಮಲಯಾಳಂ, ತಮಿಳು, ಹಿಂದಿ ಮತ್ತಿತರ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿದೆ. ತಮಿಳು ನಟ ಧನುಷ್ ಚಿತ್ರಕ್ಕೆ ಮೆಚ್ಚುಗೆ ಸುರಿಮಳೆಗೈದಿದ್ದಾರೆ. 
ಧನುಷ್, ಕಾಂತಾರ ಚಿತ್ರದ ಫೋಸ್ಟರ್
ಧನುಷ್, ಕಾಂತಾರ ಚಿತ್ರದ ಫೋಸ್ಟರ್
Updated on

ಇತ್ತೀಚಿಗೆ ಬಿಡುಗಡೆಯಾದ ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಕನ್ನಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ, ವಿಮರ್ಶೆ ವ್ಯಕ್ತವಾಗಿದೆ. ಇದರಿಂದಾಗಿ ಇದೀಗ ಚಿತ್ರವು ಮಲಯಾಳಂ, ತಮಿಳು, ಹಿಂದಿ ಮತ್ತಿತರ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿದೆ. ತಮಿಳು ನಟ ಧನುಷ್ ಚಿತ್ರಕ್ಕೆ ಮೆಚ್ಚುಗೆ ಸುರಿಮಳೆಗೈದಿದ್ದಾರೆ. 

'ಕಾಂತಾರ ಮನಸ್ಸಿಗೆ ಹಿತವಾದ ಚಿತ್ರವಾಗಿದ್ದು, ಖಂಡಿತವಾಗಿಯೂ ನೋಡಲೇಬೇಕು. ನಿಮ್ಮ ಬಗ್ಗೆ ನೀವು ತುಂಬಾ ಹೆಮ್ಮೆ ಪಡಬೇಕು . ಹೊಂಬಾಳೆ ಫಿಲಂಸ್ ಗೆ ಅಭಿನಂದನೆಗಳು, ಗಡಿಯನ್ನು ತಳ್ಳುತ್ತಲೇ ಇರಿ . ಚಿತ್ರದ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರಿಗೆ ಒಂದು ದೊಡ್ಡ ಅಪ್ಪುಗೆ. ದೇವರ ಆಶೀರ್ವಾದ ಇರಲಿ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.

ಕಾಂತಾರ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ರಿಷಬ್ ಶೆಟ್ಟಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಬೆಂಬಲದೊಂದಿಗೆ  ರಿಷಬ್ ಶೆಟ್ಟಿ ಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಭೂಮಿಯ ಹಕ್ಕುಗಳ ಸಮಸ್ಯೆಗಳ ಬಗ್ಗೆ ಸ್ಥಳೀಯ ಮಣ್ಣಿನ ಜನರು ಮತ್ತು ಅಧಿಕಾರದಲ್ಲಿರುವವರ ನಡುವಿನ ಸಂಘರ್ಷ ಕುರಿತು ಚಿತ್ರ ಹೇಳುತ್ತದೆ.

ಚಿತ್ರದಲ್ಲಿ ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿರುವ ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಕಾಂತಾರ ಸದ್ಯ ಚಿತ್ರಮಂದಿರಗಳಲ್ಲಿ ಎರಡನೇ ವಾರವೂ ಚೆನ್ನಾಗಿ ಓಡುತ್ತಿದೆ.

ನಾಳೆ ತೆಲುಗಿನಲ್ಲಿ, ಅಕ್ಟೋಬರ್ 20 ರಂದು ಮಲಯಾಳಂ ಭಾಷೆಯಲ್ಲಿ ಕಾಂತಾರ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com