ಪೊನ್ನಿಯಿನ್ ಸೆಲ್ವನ್: ಪ್ರಕಾಶ್ ರಾಜ್ ಫಸ್ಟ್ ಲುಕ್ ಅನಾವರಣ

ತಮಿಳಿನ ಬಹುನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರು ಚಿತ್ರದಲ್ಲಿನ ಪ್ರಕಾಶ್ ರಾಜ್, ಜಯಚಿತ್ರ ಮತ್ತು ರೆಹಮಾನ್ ಅವರ ಫಸ್ಟ್ ಲುಕ್ ನ್ನು ಅನಾವರಣಗೊಳಿಸಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಹೊಸ ಫೋಸ್ಟರ್
ಪೊನ್ನಿಯಿನ್ ಸೆಲ್ವನ್ ಹೊಸ ಫೋಸ್ಟರ್

ಚೆನ್ನೈ: ತಮಿಳಿನ ಬಹುನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರು ಚಿತ್ರದಲ್ಲಿನ ಪ್ರಕಾಶ್ ರಾಜ್, ಜಯಚಿತ್ರ ಮತ್ತು ರೆಹಮಾನ್ ಅವರ ಫಸ್ಟ್ ಲುಕ್ ನ್ನು ಅನಾವರಣಗೊಳಿಸಿದ್ದಾರೆ.

 ಲೈಕಾ ಪ್ರೊಡಕ್ಷನ್ಸ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮೋಷನ್ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಪ್ರಕಾಶ್ ರಾಜ್ ಅನ್ನು ಸುಂದ್ರ ಚೋಜರ್ ಎಂದು, ಜಯಚಿತ್ರವನ್ನು ಸೆಂಬಿಯನ್ ಮಾದೇವಿ ಎಂದು ಮತ್ತು ರೆಹಮಾನ್ ಅನ್ನು ಮಧುರಾಂತಕನ್ ಎಂದು ಪರಿಚಯಿಸಲಾಗಿದೆ.

ಪೋಸ್ಟ್ ನಲ್ಲಿ  “ಪ್ರತಿಯೊಂದು ಗುಲಾಬಿಗೂ ಅದರ ಮುಳ್ಳುಗಳಿವೆ. ಚಕ್ರವರ್ತಿ, ರಾಣಿ ತಾಯಿ ಮತ್ತು ಎಲ್ಲವನ್ನೂ ಬಯಸುವ ಮಗ! ಗ್ರ್ಯಾಂಡ್ ಆಡಿಯೊ ಮತ್ತು ಟ್ರೇಲರ್ ಬಿಡುಗಡೆಗೆ 2 ದಿನಗಳು” ಎಂದು ಬರೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com