ಉಪೇಂದ್ರ ನಿರ್ದೇಶನದ ಸಿನಿಮಾಗಳು ನನ್ನನ್ನು ಯಾವಾಗಲೂ ದಂಗುಬಡಿಸುತ್ತವೆ: ನಾಗೇಂದ್ರ ಪ್ರಸಾದ್

ನೃತ್ಯ ಸಂಯೋಜಕ ಹಾಗೂ ನಟ ನಾಗೇಂದ್ರ ಪ್ರಸಾದ್ ಅವರು ಲಕ್ಕಿ ಮ್ಯಾನ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ನಿರ್ದೇಶನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾದ ತಮ್ಮ ನಿರ್ದೇಶನದ ವೈಖರಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.
ಲಕ್ಕಿ ಮ್ಯಾನ್ ಚಿತ್ರದ ದೃಶ್ಯ
ಲಕ್ಕಿ ಮ್ಯಾನ್ ಚಿತ್ರದ ದೃಶ್ಯ
Updated on

ನೃತ್ಯ ಸಂಯೋಜಕ ಹಾಗೂ ನಟ ನಾಗೇಂದ್ರ ಪ್ರಸಾದ್ ಅವರು ಲಕ್ಕಿ ಮ್ಯಾನ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ನಿರ್ದೇಶನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾದ ತಮ್ಮ ನಿರ್ದೇಶನದ ವೈಖರಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.

'ನಾನು ಓ ಮೈ ಕಡವುಲೆಯನ್ನು ವೀಕ್ಷಿಸಿದಾಗ, ನಾನು ಅದನ್ನು ಮರುಸೃಷ್ಟಿಸಲು ಬಯಸಿದ್ದೆ. ನನ್ನ ಮಾತೃಭಾಷೆಯಲ್ಲಿ ಚಿತ್ರ ಮಾಡಿದ್ದರಿಂದಾಗಿ ನನಗೆ ಇದೊಂದು ವಿಶೇಷವಾಗಿದೆ. ನಾನು ನನ್ನ ತಾಯಿ ಕನ್ನಡ ಮಾತನಾಡುವುದನ್ನು ಕೇಳುತ್ತಾ ಬೆಳೆದಿದ್ದೇನೆ ಮತ್ತು ಆ ಭಾಷೆಯಲ್ಲಿ ಸಿನಿಮಾ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ' ಎನ್ನುತ್ತಾರೆ ನಾಗೇಂದ್ರ ಪ್ರಸಾದ್.

<strong>ನಾಗೇಂದ್ರ ಪ್ರಸಾದ್</strong>
ನಾಗೇಂದ್ರ ಪ್ರಸಾದ್

ಚಿತ್ರದಲ್ಲಿ ಅವರು ನೃತ್ಯ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದು, ಅವರ ಸಹೋದರ ಮತ್ತು ಚಲನಚಿತ್ರ ನಿರ್ಮಾಪಕ ಪ್ರಭುದೇವ ಅವರು ನಿರ್ದೇಶನದ ವಿಭಾಗದಲ್ಲಿ ಸಹಾಯ ಮಾಡಿದ್ದಾರೆ. 'ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ ನನ್ನ ಪ್ರಯಾಣವು ಸಿನಿಮಾವನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿದೆ' ಎಂದು ತಿಳಿಸಿದ್ದಾರೆ.

ಹಾಡೊಂದನ್ನು ರಚಿಸಬೇಕು ಎನ್ನುವ ನನ್ನ ದೃಷ್ಟಿ ಪೂರ್ಣ ಪ್ರಮಾಣದ ಚಲನಚಿತ್ರವನ್ನೇ ಮಾಡಲು ಮುಂದಾಯಿತು. ನಿರ್ದೇಶಕನಾಗಿ ನನ್ನ ಜವಾಬ್ದಾರಿಗಳು ದೊಡ್ಡದಾಗುತ್ತಿವೆ. ಸಿನಿಮಾ ಒಂದು ಸೃಜನಶೀಲ ಕಲೆ ಮತ್ತು ನಾನು ಈ ಪ್ರಕ್ರಿಯೆಯನ್ನು ಆನಂದಿಸಲು ಇಷ್ಟಪಡುತ್ತೇನೆ. ಹಾಡೊಂದಕ್ಕೆ ಕೊರಿಯೋಗ್ರಫಿ ಮಾಡುತ್ತಿರಲಿ, ಸಿನಿಮಾ ನಿರ್ದೇಶನವಿರಲಿ, ನಾನೇ ನನ್ನ ಮಾರ್ಗದರ್ಶನದ ಶಕ್ತಿ’ ಎನ್ನುತ್ತಾರೆ ನಾಗೇಂದ್ರ ಪ್ರಸಾದ್.

ತಮ್ಮ ಸಿನಿಮಾದ ನಾಯಕ ನಟ ಕೃಷ್ಣನನ್ನು ಬುದ್ಧಿವಂತ ಮತ್ತು ಸಹಾಯ ಮಾಡುವ ವ್ಯಕ್ತಿ ಎಂದು ಕರೆದ ಅವರು, 'ಸಿನಿಮಾದಲ್ಲಿ ಅವರ ಪ್ರಯಾಣವನ್ನು ನಾನು ಇಷ್ಟಪಟ್ಟೆ ಮತ್ತು ಅವರು ಇಲ್ಲಿಗೆ ಬರಲು ಮಾಡಿದ ಪ್ರಯತ್ನಗಳನ್ನು ತಿಳಿದುಕೊಳ್ಳಲು ಸಂತೋಷವಾಯಿತು. ಅವರ ದಾರಿಯಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ' ಎಂದರು.

ತಾವು ನಿರ್ದೇಶಕರಾಗಲೂ ತಮ್ಮ ಜೀವನದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರು ಮಹತ್ವದ ತಿರುವುದು ಎಂದು ಹೇಳಿದರು.

'ಚಿಕ್ಕವರಿದ್ದಾಗ ನಾನು ಅವರನ್ನು ಅವರ ಮನೆಯಲ್ಲಿ ಭೇಟಿಯಾದ ಸಿಹಿ ನೆನಪುಗಳನ್ನು ಹೊಂದಿದ್ದೇನೆ ಮತ್ತು ನಾವು ಒಟ್ಟಿಗೆ ಆಡಿದ್ದೇವೆ. ಆದರೆ, ನಾವು ಬೆಳೆದಂತೆ ಸಂಪರ್ಕ ಕಡಿತಗೊಂಡಿತ್ತು. ಮುಂದೆ ನಾನು ನಟಿಸಿದ್ದ ಮನಸೆಲ್ಲಾ ನೀನೇ ಸಿನಿಮಾದಲ್ಲಿ ಅತಿಥಿಯಾಗಿ ಬಂದು ಚಪ್ಪಾಳೆ ತಟ್ಟಿದರು. ಲಕ್ಕಿ ಮ್ಯಾನ್ ಮೂರನೇ ಬಾರಿಗೆ ನಮ್ಮನ್ನು ಒಟ್ಟಿಗೆ ತರುತ್ತಿದ್ದಾನೆ. ಲಕ್ಕಿ ಮ್ಯಾನ್‌ ಸಿನಿಮಾದಲ್ಲಿ ದೇವರಾಗಿ ಕಾಣಿಸಿಕೊಂಡಿರುವ ಅವರ ಉಪಸ್ಥಿತಿಯು ಕಥಾವಸ್ತುವನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಅವರು ಈ ಚಿತ್ರವನ್ನು ಆಶೀರ್ವದಿಸುತ್ತಿದ್ದಾರೆ' ಎಂದು ಹೇಳಿದರು.

ಉಪೇಂದ್ರ ಅವರ ಕೆಲಸದ ದೊಡ್ಡ ಅಭಿಮಾನಿ ಎಂದ ಅವರು, 'ಅವರ ನಿರ್ದೇಶನವು ಯಾವಾಗಲೂ ನನ್ನನ್ನು ದಿಗ್ಭ್ರಮೆಗೊಳಿಸಿದೆ. ಅವರ ಓಂ, ಎ, ಮತ್ತು ಉಪೇಂದ್ರ ಸಿನಿಮಾಗಳು ಅವರ ಆಲೋಚನಾ ಕ್ರಮದ ಬಗ್ಗೆ ನನ್ನನ್ನು ಮಂತ್ರಮುಗ್ಧಗೊಳಿಸಿತು. ನಾನು ನಿರ್ದೇಶಕನಾಗಲು ಪ್ರೇರಣೆ ನೀಡಿದವರು ಅವರು. ಅವರನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ' ಎಂದು ಅವರು ಹೇಳುತ್ತಾರೆ.

ಅವರ ಸಹೋದರ, ನಟ ಮತ್ತು ನಿರ್ದೇಶಕ ಪ್ರಭುದೇವ ಅವರು ಲಕ್ಕಿ ಮ್ಯಾನ್‌ನಲ್ಲಿ ನೃತ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವೇದಿ ಮತ್ತು ರೌಡಿ ರಾಥೋರ್‌ನಂತಹ ಚಿತ್ರಗಳಲ್ಲಿ ನಾನು ಅವರಿಗೆ ಸಹಾಯ ಮಾಡಿದ್ದೇನೆ ಮತ್ತು ಅವರು ನನ್ನ ನಿರ್ದೇಶನದ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗಿದೆ' ಎಂದು ಹೇಳಿದರು.

ತನ್ನ ಸೋದರನಿಗಾಗಿ ನಿರ್ದೇಶನ ಮಾಡುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ನನ್ನ ಬಳಿ ಸಾಕಷ್ಟು ಯೋಜನೆಗಳಿವೆ. ಆದಾಗ್ಯೂ ನಾನು ಈಗ ಲಕ್ಕಿ ಮ್ಯಾನ್ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com