ಜೈಲು ಹಕ್ಕಿಯ ಜೀವನವನ್ನು ತೋರಿಸುವ ಸುಂದರ ಪ್ರೇಮಕಥೆಯೇ 'ಬಾಂಡ್ ರವಿ': ನಿರ್ದೇಶಕ ಪ್ರಜ್ವಲ್
'ಚಿತ್ರವು ಕಂಟೆಂಟ್ ಆಧಾರಿತ ಕಮರ್ಷಿಯಲ್ ಸ್ಕ್ರಿಪ್ಟ್ ಆಗಿದ್ದು, ಬಲವಾದ ಪ್ರೇಮಕಥೆಯೊಂದಿಗೆ ತೆರೆಗೆ ತರಲಾಗುತ್ತಿದೆ' ಎಂದು ಚೊಚ್ಚಲ ಚಿತ್ರವನ್ನು ನಿರ್ದೇಶಿಸಿರುವ ಪ್ರಜ್ವಲ್ ಎಸ್‌ಪಿ ಹೇಳುತ್ತಾರೆ. ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಯಾಗಲಿದೆ.
Published: 07th December 2022 04:48 PM | Last Updated: 07th December 2022 05:18 PM | A+A A-

ನಿರ್ದೇಶಕ ಪ್ರಜ್ವಲ್ ಎಸ್‌ಪಿ - ಬಾಂಡ್ ರವಿ ಚಿತ್ರದಲ್ಲಿ ಪ್ರಮೋದ್
ಪುನೀತ್ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿರುವ ನಟ ಪ್ರಮೋದ್ ಖಡಕ್ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ಬಾಂಡ್ ರವಿ ಟ್ರೇಲರ್‌ನಲ್ಲಿ ನೋಡಿದ್ದೇವೆ. 'ಇದಲ್ಲದೆ, ಚಿತ್ರವು ಕಂಟೆಂಟ್ ಆಧಾರಿತ ಕಮರ್ಷಿಯಲ್ ಸ್ಕ್ರಿಪ್ಟ್ ಆಗಿದ್ದು, ಬಲವಾದ ಪ್ರೇಮಕಥೆಯೊಂದಿಗೆ ತೆರೆಗೆ ತರಲಾಗುತ್ತಿದೆ' ಎಂದು ಚೊಚ್ಚಲ ಚಿತ್ರವನ್ನು ನಿರ್ದೇಶಿಸಿರುವ ಪ್ರಜ್ವಲ್ ಎಸ್‌ಪಿ ಹೇಳುತ್ತಾರೆ. ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಯಾಗಲಿದೆ.
ಎಸ್ ಮಹೇಂದರ್, ಪ್ರಶಾಂತ್ ರಾಜ್ ಮತ್ತು ಕಾಂತ ಕನ್ನಲಿಯಂತಹ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಪ್ರಜ್ವಲ್ ಅವರು ತಮ್ಮ ಚೊಚ್ಚಲ ಚಿತ್ರದಲ್ಲಿ ಜೈಲಿನಲ್ಲಿರುವುದು ಹಣ ಸಂಪಾದಿಸುವ ಸಾಧನವಾಗಿ ಕಂಡುಕೊಂಡಿರುವ ಜೈಲು ಹಕ್ಕಿಯ ಜೀವನದ ಸುತ್ತ ಕಥೆಯನ್ನು ಹೆಣೆದಿದ್ದಾರೆ.
ಇದನ್ನೂ ಓದಿ: ರಂಗಭೂಮಿಯ ಭಾಗವಾಗಿದ್ದರೆ ಅಭಿನಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಬಹುದು: ನಟಿ ಕಾಜಲ್ ಕುಂದರ್
'ಖೈದಿಯ ಜೀವನವು ಕಟ್ಟಕಡೆಯೆಂದು ಪರಿಗಣಿಸುವ ಕಾಲದಲ್ಲಿ, ಇಲ್ಲಿ ನಾವು ಜೈಲಿನ ಸೌಕರ್ಯವನ್ನು ಇಷ್ಟಪಡುವವರನ್ನು ಹೊಂದಿದ್ದೇವೆ. ಆದಾಗ್ಯೂ, ಆತ ಪ್ರೀತಿಯಲ್ಲಿ ಬಿದ್ದಾಗ ಆತನ ದೃಷ್ಟಿಕೋನವು ಬದಲಾಗುತ್ತದೆ ಮತ್ತು ಈ ಭಾವನೆಯನ್ನು ಒಂದು ಸುಂದರವಾದ ರೊಮ್ಯಾಂಟಿಕ್ ಸಿನಿಮಾವಾಗಿ ಹೊರತರಲಾಗುತ್ತಿದೆ' ಎಂದು ಪ್ರಜ್ವಲ್ ಹೇಳುತ್ತಾರೆ.
ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ. ಇದನ್ನು ತನ್ನ ಸ್ನೇಹಿತರ ಮೂಲಕ ತಿಳಿದುಕೊಂಡೆ. 'ಕೈದಿಯಾಗಿ ಜೀವನ ಸಾಗಿಸುವ ಜನರಿದ್ದಾರೆ ಎಂದು ತಿಳಿದು ನನಗೆ ಆಶ್ಚರ್ಯವಾಯಿತು. ಸಿನಿಮಾ ಮಾಡಲು ಇದು ಆಸಕ್ತಿದಾಯಕ ವಿಷಯ ಎಂದು ನಾನು ಭಾವಿಸಿದೆ. ಚಿತ್ರವು ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಹೊಂದಿದೆ ಮತ್ತು ಮನೋಮೂರ್ತಿಯವರ ಸಂಗೀತವು ಹೈಲೈಟ್‌ಗಳಲ್ಲಿ ಒಂದಾಗಿದೆ' ಎಂದು ಹೇಳುತ್ತಾರೆ.
ಇದನ್ನೂ ಓದಿ: ಪ್ರಮೋದ್ ಅಭಿನಯದ 'ಬಾಂಡ್ ರವಿ' ಚಿತ್ರ ಡಿಸೆಂಬರ್ 9ಕ್ಕೆ ಬಿಡುಗಡೆ
ನರಸಿಂಹಮೂರ್ತಿ ಅವರು ಚಿತ್ರವನ್ನು ನಿರ್ಮಿಸಿದ್ದು, ಕೆ.ಎಸ್. ಚಂದ್ರಶೇಖರ್ ಅವರು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಕಾಜಲ್ ಕುಂದರ್ ನಾಯಕಿಯಾಗಿರುವ ಈ ಚಿತ್ರದಲ್ಲಿ ರವಿಕಾಳೆ, ಧರ್ಮ, ರವಿ ಪ್ರಕಾಶ್, ಗೋವಿಂದ ಗೌಡ ಮತ್ತು ವಿಜಯ್ ಚೆಂಡೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.