ಶಿವಣ್ಣ ಹುಟ್ಟುಹಬ್ಬಕ್ಕೆ ಸ್ಟೈಲಿಶ್ ಪೋಸ್ಟರ್ ಬಿಡುಗಡೆ ಮಾಡಿದ 'ಘೋಸ್ಟ್' ಚಿತ್ರತಂಡ: ಅಭಿಮಾನಿಗಳು ಫಿದಾ!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಚಿತ್ರಕ್ಕೆ ನಿರ್ದೇಶಕ ಶ್ರೀನಿ ಆಕ್ಷನ್ ಕಟ್ ಹೇಳುತ್ತಿದ್ದು ಇದೀಗ ಸೆಂಚುರಿ ಸ್ಟಾರ್ ಅವರ 60ನೇ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಅಧಿಕೃತ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು.
ಘೋಸ್ಟ್ ಚಿತ್ರದ ಪೋಸ್ಟರ್
ಘೋಸ್ಟ್ ಚಿತ್ರದ ಪೋಸ್ಟರ್

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಚಿತ್ರಕ್ಕೆ ನಿರ್ದೇಶಕ ಶ್ರೀನಿ ಆಕ್ಷನ್ ಕಟ್ ಹೇಳುತ್ತಿದ್ದು ಇದೀಗ ಸೆಂಚುರಿ ಸ್ಟಾರ್ ಅವರ 60ನೇ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಅಧಿಕೃತ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು. 

ಘೋಸ್ಟ್ ಚಿತ್ರದ ಪೋಸ್ಟರ್ ಇದೀಗ ಅಭಿಮಾನಿಗಳ ಕೌತುಕವನ್ನು ದ್ವಿಗುಣಗೊಳಿಸಿದೆ. ಪೋಸ್ಟರ್ ನಲ್ಲಿ ಗನ್ ಹಾಗೂ ಕಾರು ಎರಡೂ ಇದೆ. ಅದರ ಹಿಂದೆ ಶಿವರಾಜ್ ಕುಮಾರ್ ನಿಂತಿದ್ದಾರೆ. ಪೋಸ್ಟರ್ ನಲ್ಲಿ ಹ್ಯಾಪಿ ಬರ್ತ್ ಡೇ ಕಿಂಗ್ ಆಫ್ ಆಲ್ ಮಾಸಸ್ ಎಂದು ಬರೆಯಲಾಗಿದೆ.

ಶಿವಣ್ಣ ತನ್ನ ಹಣೆಯ ಮೇಲೆ 'ಡೇಂಜರ್' ಟ್ಯಾಟೂವನ್ನು ಹಾಕಿಕೊಂಡಿರುವುದನ್ನು ಕಾಣಬಹುದಾಗಿದೆ. ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಬಹುಭಾಷಾ ಚಿತ್ರದ ಶೂಟಿಂಗ್ ಆಗಸ್ಟ್‌ನಲ್ಲಿ ಪ್ರಾರಂಭವಾಗಲಿದೆ.

ಘೋಸ್ಟ್‌ ಚಿತ್ರಕ್ಕೆಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ. ಘೋಸ್ಟ್ ಗೆ ಮಾಸ್ತಿ ಮತ್ತು ಪ್ರಸನ್ನ ವಿಎಂ ಸಂಭಾಷಣೆಗಳನ್ನು ಬರೆಯಲಿದ್ದಾರೆ.

ಘೋಸ್ಟ್ ಚಿತ್ರದ ನಿರ್ದೇಶನದಲ್ಲಿ ನಿರತರಾಗಿರುವ ಶ್ರೀನಿ ಅವರು ತಮ್ಮ ಇನ್ನೊಂದು ಪ್ರಾಜೆಕ್ಟ್ ಬೀರ್ಬಲ್ 2 ಅನ್ನು ಇತ್ತೀಚೆಗೆ ಘೋಷಿಸಿದ್ದರು. 'ನನ್ನ ಪ್ರಸ್ತುತ ಪ್ರಾಜೆಕ್ಟ್ ಮುಗಿದ ನಂತರ ನಾನು ಬೀರ್ಬಲ್ 2 ಅನ್ನು ಕೈಗೆತ್ತಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com