ಮಾಫಿಯಾದಲ್ಲಿ ಬ್ಯುಸಿಯಾಗಿರುವಾಗಲೇ ಮತ್ತೊಂದು ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ಲೋಹಿತ್
ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಲೋಹಿತ್ ಎಚ್ ಸದ್ಯ 'ಮಾಫಿಯಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಮಧ್ಯೆ, ಸೋಮವಾರ ಸ್ಕ್ರಿಪ್ಟ್ ಪೂಜೆಯೊಂದಿಗೆ ಪ್ರಾರಂಭವಾದ ಸಿನಿಮಾಗಾಗಿ ನಟ ಮತ್ತು ನಿರ್ದೇಶಕರ ಜೋಡಿ ಮತ್ತೊಮ್ಮೆ ಒಂದಾಗಲಿದೆ.
Published: 15th November 2022 11:03 AM | Last Updated: 15th November 2022 11:03 AM | A+A A-

ಪ್ರಜ್ವಲ್ ದೇವರಾಜ್
ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಲೋಹಿತ್ ಎಚ್ ಸದ್ಯ 'ಮಾಫಿಯಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಮಧ್ಯೆ, ಸೋಮವಾರ ಸ್ಕ್ರಿಪ್ಟ್ ಪೂಜೆಯೊಂದಿಗೆ ಪ್ರಾರಂಭವಾದ ಸಿನಿಮಾಗಾಗಿ ನಟ ಮತ್ತು ನಿರ್ದೇಶಕರ ಜೋಡಿ ಮತ್ತೊಮ್ಮೆ ಒಂದಾಗಲಿದೆ.

ಸಿನಿಮಾದ ಬಗ್ಗೆ ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿದ ಪ್ರಜ್ವಲ್, 'ಲೋಹಿತ್ ಎಚ್ ಅವರು ಬರೆದಿರುವ ಕಥೆಯು ಆಕ್ಷನ್ ಎಂಟರ್ಟೈನರ್ ಅಲ್ಲ. ಬದಲಿಗೆ ಇದೊಂದು ಹಾರರ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಟೈಮ್ ಲೂಪ್ ಸುತ್ತ ಸುತ್ತುವ ಮೊದಲ ಚಿತ್ರ ಇದಾಗಿದೆ. ಮಾಫಿಯಾ ಸಿನಿಮಾದಲ್ಲಿ ಕೆಲಸ ಮಾಡುವಾಗಲೇ ನಿರ್ದೇಶಕ ಲೋಹಿತ್ ಅವರ ಸಾಮರ್ಥ್ಯ ಏನೆಂಬುನ್ನು ಅರ್ಥಮಾಡಿಕೊಂಡಿದ್ದೇನೆ. ಹೀಗಾಗಿಯೇ ಇನ್ನೊಂದು ಚಿತ್ರದಲ್ಲಿ ಅವರೊಂದಿಗೆ ಕೈಜೋಡಿಸಲು ನಿರ್ಧರಿಸಿದ್ದೇನೆ ಎಂದು ಹೇಳುತ್ತಾರೆ ಪ್ರಜ್ವಲ್.
ಸಿನಿಮಾವನ್ನು ಮಾಡುವ ಕುರಿತು ಲೋಹಿತ್ ಅವರ ದೃಷ್ಟಿಕೋನವೇ ಹೊಸದಾಗಿದೆ. ಅವರು ಯಾವಾಗಲೂ ತಾಜಾತನದಿಂದ ಕೂಡಿರುವ ಹೊಸದಾದ ಚಿತ್ರವನ್ನು ಮಾಡಲು ಬಯಸುತ್ತಾರೆ. ಅವರು ಈ ಚಿತ್ರದ ಸಾರಾಂಶವನ್ನಷ್ಟೇ ಹೇಳಿದರು. ಕೂಡಲೇ ನಾನು ಹೌದು ಎಂದು ಹೇಳಿದೆ. ಹಾರರ್ ಸಿನಿಮಾ ನನಗೆ ಹೊಸದಾಗಿದ್ದು, ಪಾತ್ರವೂ ವಿಭಿನ್ನವಾಗಿದೆ. ನಿರ್ದೇಶಕರು ನನಗೆ ಹೊಸ ಲುಕ್ ನೀಡಲು ನಿರ್ಧಿರಿಸಿದ್ದಾರೆ ಮತ್ತು ಈ ಸಿನಿಮಾಗಾಗಿ ಸಾಕಷ್ಟು ಆಸಕ್ತಿದಾಯಕ ವಿಷಯಗಳನ್ನು ಸಂಗ್ರಹಿಸಲಾಗಿದೆ ಎನ್ನುತ್ತಾರೆ.
ಇದನ್ನೂ ಓದಿ: ಲೋಹಿತ್ ನಿರ್ದೇಶನದ ಮಾಫಿಯಾ 2023 ಜನವರಿಯಲ್ಲಿ ರಿಲೀಸ್!
ದೇವಕಿ ಮತ್ತು ಮಮ್ಮಿ-ಸೇವ್ ಮಿ ಚಿತ್ರದ ನಿರ್ಮಾಪಕರಾದ ಅಕ್ಷಯ್ ಸಿ.ಎಸ್ ಮತ್ತು ರವೀಶ್ ಆರ್ ಅವರು ಲೋಹಿತ್ ಅವರ ಫ್ರೈಡೇ ಫಿಲ್ಮ್ಸ್ ಸಹಯೋಗದೊಂದಿಗೆ ಚಿತ್ರವನ್ನು ನಿರ್ಮಿಸಲಿದ್ದಾರೆ. ಮಾಫಿಯಾವನ್ನು ಹೊರತುಪಡಿಸಿ, ಪ್ರಜ್ವಲ್ ದೇವರಾಜ್ ಅವರು ಅಬ್ಬರ, ಗಾನ ಮತ್ತು ವೀರಂ ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.