ದಿಢೀರ್ ಅನಾರೋಗ್ಯ: ರಿಯಲ್ ಸ್ಟಾರ್ ಉಪೇಂದ್ರ ಆಸ್ಪತ್ರೆಗೆ ದಾಖಲು; ಡಿಸ್ಚಾರ್ಜ್

ಚಿತ್ರೀಕರಣದ ವೇಳೆ ದಿಢೀರ್ ಅಸ್ವಸ್ಥಗೊಂಡಿದ್ದರಿಂದ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉಪೇಂದ್ರ
ಉಪೇಂದ್ರ

ಬೆಂಗಳೂರು: ಚಿತ್ರೀಕರಣದ ವೇಳೆ ದಿಢೀರ್ ಅಸ್ವಸ್ಥಗೊಂಡಿದ್ದರಿಂದ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿತ್ರೀಕರಣದ ವೇಳೆ ಡಸ್ಟ್ ಅಲರ್ಜಿ ಆಗಿದ್ದರಿಂದ ಉಪೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ ಮಾಡಲಾಯಿತು. 

ಆರೋಗ್ಯ ತಪಾಸಣೆ ಬಳಿಕ ಅವರು ತೆರಳಿದರು ಎಂದು ನೆಲಮಂಗಲ ಹರ್ಷ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಆರೋಗ್ಯ ತಪಾಸಣೆ ಮಾಡಿಸಿಕೊಂಡ ಬಳಿಕ ಉಪೇಂದ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು ಅಭಿಮಾನಿಗಳ ಆತಂಕ ನಿವಾರಣೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com