ಸ್ಯಾಂಡಲ್ ವುಡ್ ಗೂ ಬಂತು #boycott ಟ್ರೆಂಡ್; ವೈರಲ್ ಆಯ್ತು #boycottBanaras, ಶಾಸಕ ಜಮೀರ್ ಪುತ್ರ ಝೈದ್ ಖಾನ್ ಚಿತ್ರಕ್ಕೆ ವಿರೋಧ

ಬಾಲಿವುಡ್ ನಲ್ಲಿ ವ್ಯಾಪಕ ಟ್ರೆಂಡ್ ಆಗಿರುವ #Boycott ಇದೀಗ ಸ್ಯಾಂಡಲ್ ವುಡ್ ಗೂ ಪ್ರವೇಶ ಮಾಡಿದ್ದು, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ರ ಬನಾರಸ್ ಚಿತ್ರಕ್ಕೆ (#boycottBanaras) ವಿರೋಧ ವ್ಯಕ್ತವಾಗುತ್ತಿದೆ.
ಬನಾರಸ್ ಚಿತ್ರದ ಪೋಸ್ಟರ್
ಬನಾರಸ್ ಚಿತ್ರದ ಪೋಸ್ಟರ್

ಬೆಂಗಳೂರು: ಬಾಲಿವುಡ್ ನಲ್ಲಿ ವ್ಯಾಪಕ ಟ್ರೆಂಡ್ ಆಗಿರುವ #Boycott ಇದೀಗ ಸ್ಯಾಂಡಲ್ ವುಡ್ ಗೂ ಪ್ರವೇಶ ಮಾಡಿದ್ದು, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ರ ಬನಾರಸ್ ಚಿತ್ರಕ್ಕೆ (#boycottBanaras)  ವಿರೋಧ ವ್ಯಕ್ತವಾಗುತ್ತಿದೆ.

ಚಾಮರಾಜಪೇಟೆ ಮೈದಾನದ ವಿಚಾರ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಬಹಿರಂಗವಾಗಿ ಮಾತನಾಡಿಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಈ ಬಾರಿ ಚಿತ್ರವೊಂದರ ವಿಚಾರವಾಗಿ ಜಮೀರ್ ಸುದ್ದಿಗೀಡಾಗಿದ್ದು, ಚಿತ್ರರಂಗ ಪ್ರವೇಶ ಮಾಡಿರುವ ತಮ್ಮ ಪುತ್ರ ಝೈದ್ ಖಾನ್ ಅವರ ಬನಾರಸ್ ಚಿತ್ರಕ್ಕೆ ಇದೀಗ ವಿರೋಧ ವ್ಯಕ್ತವಾಗುತ್ತಿದೆ. 

ಬನಾರಸ್ ಚಿತ್ರದ ವಿರುದ್ಧ ಹಿಂದೂಪರ ಸಂಘಟನೆಗಳು ಇದೀಗ #boycottBanaras ಟ್ರೆಂಡ್ ಆರಂಭಿಸಿದ್ದು, ಚಿತ್ರ ಹಿಂದೂ ವಿರೋಧಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ. ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಗಣೇಶ ಹಬ್ಬಕ್ಕೆ ಶುಭ ಕೋರುವ ಶಾಸಕರು, ಅತ್ತ ದೆಹಲಿಯಲ್ಲಿ ಖ್ಯಾತ ಕಪಿಲ್ ಸಿಬಲ್ ರನ್ನು ಭೇಟಿ ಮಾಡಿ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ನಡೆಸದಂತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾತ್ರವಲ್ಲದೇ ಇತ್ತೀಚೆಗೆ ಬನಾರಸ್ ಚಿತ್ರತಂಡ ಬಿಡುಗಡೆ ಮಾಡಿದ್ದ ಪೋಸ್ಟರ್ ಮತ್ತು ಚಿತ್ರಗಳಲ್ಲೂ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಲಾಗಿದೆ.

ಬಾಲಿವುಡ್ ನಲ್ಲಿ ವ್ಯಾಪಕವಾಗಿರುವ #Boycott ಟ್ರೆಂಡ್
ಇನ್ನು ಈ #Boycott ಬಾಲಿವುಡ್ ನಲ್ಲಿ ವ್ಯಾಪಕವಾಗಿದ್ದು, ನಟ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಇದೇ Boycott ಟ್ರೆಂಡ್ ನಿಂದಾಗಿ ಹಿನ್ನಡೆ ಅನುಭವಿಸಿತ್ತು. ಅಂತೆಯೇ ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ, ವಿಜಯ್ ದೇವರಕೊಂಡ ಅವರ ಲೈಗರ್ ಚಿತ್ರಗಳೂ ಕೂಡ #Boycott ವಿರೋಧ ವ್ಯಕ್ತಪಡಿಸಿದ್ದವು. ಕೇವಲ ಚಿತ್ರಗಳು ಮಾತ್ರವಲ್ಲದೇ ಬಾಲಿವುಡ್ ಕೆಲ ನಿರ್ಮಾಣ ಸಂಸ್ಥೆಗಳ ವಿರುದ್ಧವೂ #Boycott ವಿರೋಧ ವ್ಯಕ್ತಪಡಿಸಲಾಗುತ್ತಿದ್ದು, ಪ್ರಮುಖವಾಗಿ ಸಲ್ಮಾನ್ ಖಾನ್ ಫಿಲ್ಮ್ಸ್, ಶಾರುಖ್ ಖಾನ್ ರ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್, ಅಮೀರ್ ಖಾನ್ ರ ಅಮೀರ್ ಖಾನ್ ಪ್ರೊಡಕ್ಷನ್ಸ್, ಕರಣ್ ಜೋಹರ್ ರ ಧರ್ಮ ಪ್ರೊಡಕ್ಷನ್ಸ್, ಯಶ್ ರಾಜ್ ಫಿಲಮ್ಸ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬನ್ಸಾಲಿ ಫಿಲಂಸ್ ಕೂಡ Boycott ವಿರೋಧ ಎದುರಿಸುತ್ತಿವೆ.

ಅಂದಹಾಗೆ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರ ಇದೇ ಸೆಪ್ಟೆಂಬರ್ 4ರಂದು ಕನ್ನಡ, ತೆಲುಗು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ತೆರೆ ಕಾಣುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com