ಸಲಾರ್ ಟ್ರೈಲರ್ ಬಿಡುಗಡೆ: ಥಿಯೇಟರ್ ನಲ್ಲಿ ಸಂಭ್ರಮಿಸಿದ ನಿರ್ಮಾಪಕ ವಿಜಯ್ ಕಿರಂಗದೂರ್

ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಇದಕ್ಕೂ ಮೊದಲೇ ಟ್ರೈಲರ್ ನೋಡಿದ ನಿರ್ಮಾಪಕ ವಿಜಯ್ ಕಿರಗಂದೂರು ಟ್ರೈಲರ್ ನೋಡಿ ಫಿದಾ ಆಗಿದ್ದಾರೆ.
ಸಲಾರ್ ಟ್ರೈಲರ್
ಸಲಾರ್ ಟ್ರೈಲರ್

ಬೆಂಗಳೂರು: ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಇದಕ್ಕೂ ಮೊದಲೇ ಟ್ರೈಲರ್ ನೋಡಿದ ನಿರ್ಮಾಪಕ ವಿಜಯ್ ಕಿರಗಂದೂರು ಟ್ರೈಲರ್ ನೋಡಿ ಫಿದಾ ಆಗಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಟ್ರೇಲರ್ ಶುಕ್ರವಾರ ಸಂಜೆ 7:19 ಕ್ಕೆ ಬಿಡುಗಡೆಯಾಗುತ್ತಿದ್ದು, ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಆಕ್ಷನ್-ಪ್ಯಾಕ್ಡ್ ಡ್ರಾಮಾ ಆಗಿದೆ. ಎರಡು ವರ್ಷಗಳಿಂದ ಚಿತ್ರತಂಡ ಈ ಬಹು ನಿರೀಕ್ಷಿತ ಚಿತ್ರದ ತಯಾರಿಕೆಯಲ್ಲಿದೆ. ಇದು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಅವರ ತೆಲುಗಿನ ಚೊಚ್ಚಲ ಚಿತ್ರವಾಗಿದ್ದು, ಚಿತ್ರದಲ್ಲಿ ನಟಿ ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತು ಶ್ರೀಯಾ ರೆಡ್ಡಿ ಚಿತ್ರದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ನಿರ್ಮಾಪಕ ವಿಜಯ ಕಿರಗಂದೂರ್‌ (Vijay Kirgandur) ಟ್ರೈಲರ್ (Trailer) ಅನ್ನು ವೀಕ್ಷಣೆ ಮಾಡಿದ್ದು, ಟ್ರೈಲರ್ ಕಂಡು ಸಂಭ್ರಮಿಸಿದ್ದಾರೆ. ಆ ಫೋಟೋವನ್ನು ಅಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಅದ್ಭುತವಾದ ಟ್ರೈಲರ್ ಇದಾಗಿದ್ದು, ಮೂರೂವರೆ ನಿಮಿಷಕ್ಕೂ ಹೆಚ್ಚು ಅವಧಿಯ ಟ್ರೈಲರ್ ಇದಾಗಿದೆ.

ಚಿತ್ರದ ಹಿಂದಿನ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಈ ಹಿಂದೆ ಸಲಾರ್: ಭಾಗ 1 - ಸೀಸ್ ಫೈರ್ ಟೀಸರ್ ಅನ್ನು ಬಿಡುಗಡೆ ಮಾಡಿತ್ತು, ಇದು ಸಲಾರ್‌ ಜಗತ್ತಿನ ಕುರಿತು ಒಂದು ಹೊಸ ಆಲೋಚನೆ ನೀಡಿದ್ದು ಮಾತ್ರವಲ್ಲದೇ ಚಿತ್ರದ ಕುರಿತ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿತ್ತು. 

ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದು ನಿರ್ದೇಶಕ ಪ್ರಶಾಂತ್ ನೀಲ್.. ಇತ್ತೀಚೆಗೆ, ತಮ್ಮ ಚಿತ್ರದ ಪ್ರಚಾರದ ಸಮಯದಲ್ಲಿ, ಪ್ರಶಾಂತ್ ನೀಲ್ ಅವರ ಮನಸ್ಸಿನಲ್ಲಿ ಸಲಾರ್ ಪಾತ್ರದ ಕಲ್ಪನೆಯು ಹೇಗೆ ಹುಟ್ಟಿಕೊಂಡಿತು ಎಂದು ಹೇಳಿದ್ದರು. 15 ವರ್ಷಗಳ ಹಿಂದೆ ಸಾಲಾರ್ ಸಿನಿಮಾ ಮಾಡುವ ಆಲೋಚನೆ ನನ್ನ ಮನಸ್ಸಿಗೆ ಬಂದಿತ್ತು, ಆದರೆ ನನ್ನ ಮೊದಲ ಚಿತ್ರ ಉಗ್ರಂ ಮಾಡಿದ ನಂತರ ನಾನು ಕೆಜಿಎಫ್‌ನಲ್ಲಿ ಬ್ಯುಸಿಯಾದೆ. 

ಅದನ್ನು ತಯಾರಿಸಲು ಸುಮಾರು 8 ವರ್ಷ ತೆಗೆದುಕೊಂಡೆ. ಅದೇನೆಂದರೆ, ನಾವು ಮೊದಲು ಕೆಜಿಎಫ್ ಅನ್ನು ಯೋಜಿಸಲು ಪ್ರಾರಂಭಿಸಿದ್ದೆವು ಮತ್ತು ಅದರ ಎರಡನೇ ಭಾಗ ಬಿಡುಗಡೆಯಾಗುವ ಹೊತ್ತಿಗೆ 8 ವರ್ಷಗಳು ಕಳೆದವು. ಈ ರೀತಿಯಾಗಿ, ಈ ಚಿತ್ರವನ್ನು ನಿರ್ಮಿಸುವ ಆಲೋಚನೆ ನನ್ನ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡಿತ್ತು. ಕೋವಿಡ್ ಸಮಯದಲ್ಲಿ, ಕೆಜಿಎಫ್ 2 ಬಿಡುಗಡೆಯಾಗದಿದ್ದಾಗ, ನಾವೆಲ್ಲರೂ ಮನೆಯಲ್ಲಿಯೇ ಕುಳಿತಿದ್ದರಿಂದ ನಮಗೆಲ್ಲರಿಗೂ ಸಾಕಷ್ಟು ಸಮಯವಿತ್ತು. ಹಾಗಾಗಿ ನಾನು ಸಲಾರ್  ಮೇಲೆ ಸ್ವಲ್ಪ ಕೆಲಸ ಮಾಡಲು ಅವಕಾಶವಾಯಿತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com