ಅರವಿಂದ ಕುಪ್ಲಿಕರ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಶರಣ್; ನಾಯಕಿಯಾಗಿ ಅಮೃತಾ ಅಯ್ಯಂಗಾರ್!

ನವನೀತ್ ಅವರ ಛೂ ಮಂತರ್ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿರುವ ನಟ ಶರಣ್, ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರ ಮುಂಬರುವ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಶರಣ್ ಅವರಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಳ್ಳಲಿದ್ದಾರೆ.
ನಟ ಶರಣ್ - ಅಮೃತಾ ಅಯ್ಯಂಗಾರ್
ನಟ ಶರಣ್ - ಅಮೃತಾ ಅಯ್ಯಂಗಾರ್

ನವನೀತ್ ಅವರ ಛೂ ಮಂತರ್ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿರುವ ನಟ ಶರಣ್, ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರ ಮುಂಬರುವ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಅರವಿಂದ್ ಅವರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ, ಪುಕ್ಸಟ್ಟೆ ಲೈಫು, ಪುರ್‌ಸೊತ್ತೇ ಇಲ್ಲ (2021) ಮೂಲಕ ಚೊಚ್ಚಲ ನಿರ್ದೇಶಕರಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದವರು. ಇದೀಗ ತಮ್ಮ ಎರಡನೇ ಯೋಜನೆಗೆ ಸಜ್ಜಾಗುತ್ತಿದ್ದಾರೆ.

ಶ್ರೀಧರ ಕೃಪಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಬಸವರಾಜ್ ಮತ್ತು ಶ್ರೀಧರ್ ಅವರ ನಿರ್ಮಾಣದಲ್ಲಿನ ಈ ಸಿನಿಮಾದಲ್ಲಿ ತರುಣ್ ಕಿಶೋರ್ ಸುಧೀರ್ ಅವರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಇಂದು ನಟ ಶರಣ್ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ.

ಇನ್ನೂ ಹೆಸರಿಡದ ಈ ಚಿತ್ರ ನೈಜ ಘಟನೆಯ ಸುತ್ತ ಸುತ್ತುತ್ತದೆ. ಇದು ರಾಜಕೀಯ ವಿಡಂಬನೆಯಾಗಿದ್ದು, ಉತ್ತರ ಕರ್ನಾಟಕದ ಬಾಗಲಕೋಟೆಯ ಭೌಗೋಳಿಕತೆಯನ್ನು ಆಧರಿಸಿದ ಸಾಮಾಜಿಕ ಸಮಸ್ಯೆಯನ್ನು ಆಧರಿಸಿದೆ. ಚಿತ್ರದ ಕಥಾವಸ್ತುವು ಕೃಷ್ಣಾ ಮೇಲ್ದಂಡೆ ಯೋಜನೆಯ ಪರಿಣಾಮವಾಗಿ ಸುಮಾರು 20 ಹಳ್ಳಿಗಳು ಮುಳುಗಡೆ ಪ್ರದೇಶಕ್ಕೆ ಬಂದವು ಮತ್ತು ಕೃಷಿ ಭೂಮಿಯನ್ನು ಹೊಂದಿದ್ದ ಜನರ ಮೇಲೆ ಅದರ ಪ್ರಭಾವದ ಕುರಿತಾಗಿದೆ. ಇದು ನಮ್ಮ ಕಥಾಹಂದರದ ಕಾಲ್ಪನಿಕ ಹಿನ್ನೆಲೆಯಾಯಿತು ಎಂದು ಅರವಿಂದ್ ಹೇಳುತ್ತಾರೆ.

ಚಿತ್ರದಲ್ಲಿ ಶರಣ್ ಎಲೆಕ್ಟ್ರೀಷಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಾರೆ ಅರವಿಂದ್.

ಕಾಮಿಡಿಗೆ ಹೆಸರುವಾಸಿಯಾಗಿರುವ ನಟ ಶರಣ್ ಅವರ ಪಾತ್ರಕ್ಕೆ ಗಂಭೀರವಾದ ಧ್ವನಿ ಇದೆ ಮತ್ತು ಚಿತ್ರವು ನೈಜ ವಿಧಾನವನ್ನು ಹೊಂದಿರುತ್ತದೆ. ಆದರೆ, ಚಿತ್ರವು ಕಾಮಿಡಿಯೊಂದಿಗೆ ನೋವಿನಿಂದ ಕೂಡಿದ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ' ಎಂದು ಫೆಬ್ರುವರಿ 20 ರಂದು ಚಿತ್ರೀಕರಣ ಪ್ರಾರಂಭಿಸಲು ಯೋಜಿಸುತ್ತಿದ್ದಾರೆ ನಿರ್ದೇಶಕರು.

ನಾವು ಬೆಂಗಳೂರಿನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುತ್ತೇವೆ ಮತ್ತು ನಂತರ ಸಂಪೂರ್ಣ ಕಥಾವಸ್ತುವನ್ನು ಹೊಂದಿರುವ ಉತ್ತರ ಕರ್ನಾಟಕದ ಬಾಗಲಕೋಟೆಗೆ ಹೋಗುತ್ತೇವೆ.

ನಿರ್ದೇಶಕ ಅರವಿಂದ್ ಅವರು ಒಂದಷ್ಟು ಕಲಾವಿದರನ್ನು ಅಂತಿಮಗೊಳಿಸಿದ್ದು, ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಮೃತಾ ಅಯ್ಯಂಗಾರ್ ಅವರನ್ನು ಕರೆತಂದಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ನಟ ಧನಂಜಯ್ ಅವರ 25ನೇ ಚಿತ್ರ ಹೊಯ್ಸಳದಲ್ಲಿಯೂ ಅಮೃತಾ ನಟಿಸಿದ್ದಾರೆ.

ನಾನು ಹೋಮ್ಲಿ ಲುಕ್‌ನ ಹುಡುಗಿಯನ್ನು ಹುಡುಕುತ್ತಿದ್ದೆ ಮತ್ತು ಅಮೃತಾ ಅವರು ಇದಕ್ಕೆ ಸರಿಹೊಂದುತ್ತಾರೆ ಎಂದು ಅನಿಸಿತು. ಅವರು ಚಿತ್ರದಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕರು ಹೇಳುತ್ತಾರೆ. 

ಚಿತ್ರದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು ಮತ್ತು ರಾಜು ತಾಳಿಕೋಟೆ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇನ್ನೂ ಹೆಸರಿಡದ ಈ ಸಿನಿಮಾಗೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com