ನಾನು ನಟಿಸಬೇಕು ಮತ್ತು ಕಲಿಯಬೇಕು, ನನ್ನ ಕಲೆಯಲ್ಲಿ ಉತ್ತಮವಾಗಬೇಕು: ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ

Mr. ಬ್ಯಾಚುಲರ್ ಸಿನಿಮಾವನ್ನು ನಟ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್ಟೇಲ್‌ಗಾಗಿ ಕಥೆಯನ್ನು ಬರೆಯುವ ಸಮಯದಲ್ಲಿಯೇ ಆಯ್ಕೆ ಮಾಡಿದ್ದರು. ಅದಾದ ಮೂರು ವರ್ಷಗಳ ನಂತರ, ಚಿತ್ರ ಈಗ ಅಂತಿಮವಾಗಿ ಚಿತ್ರಮಂದಿರಗಳಿಗೆ ಅಪ್ಪಳಿಸುತ್ತಿದೆ. ಚಿತ್ರದಲ್ಲಿ ಮಿಲನಾ ನಾಗರಾಜ್ ಕೂಡ ನಟಿಸಿರುವುದು ವಿಶೇಷ.
ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ
Updated on

Mr. ಬ್ಯಾಚುಲರ್ ಸಿನಿಮಾವನ್ನು ನಟ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್ಟೇಲ್‌ಗಾಗಿ ಕಥೆಯನ್ನು ಬರೆಯುವ ಸಮಯದಲ್ಲಿಯೇ ಆಯ್ಕೆ ಮಾಡಿದ್ದರು. ಅದಾದ ಮೂರು ವರ್ಷಗಳ ನಂತರ, ಚಿತ್ರ ಈಗ ಅಂತಿಮವಾಗಿ ಚಿತ್ರಮಂದಿರಗಳಿಗೆ ಅಪ್ಪಳಿಸುತ್ತಿದೆ. ಚಿತ್ರದಲ್ಲಿ ಮಿಲನಾ ನಾಗರಾಜ್ ಕೂಡ ನಟಿಸಿರುವುದು ವಿಶೇಷ.

'ನಾಯ್ಡು ಬಂಡಾರು ನಿರ್ದೇಶನದ ಚಿತ್ರವನ್ನು ನಾನು ನೋಡಿದ್ದೇನೆ. ಕಾನ್ಸೆಪ್ಟ್ ಪ್ರಕಾರ ನೋಡುವುದಾದರೆ, ಇದು ಔಟ್ ಆಫ್ ದ ಬಾಕ್ಸ್‌ ಚಿತ್ರವಲ್ಲ. ಆದರೆ, ಇದು ಮೊದಲಾರ್ಧದಲ್ಲಿ ಉತ್ತಮ ಮನರಂಜನೆಯೊಂದಿಗೆ ಒಟ್ಟು ಟೈಂಪಾಸ್‌ ಅನ್ನು ಮಾಡುತ್ತದೆ. ದ್ವಿತೀಯಾರ್ಧದಲ್ಲಿ ಸಾಮಾನ್ಯ ಕಮರ್ಷಿಯಲ್ ಎಂಟರ್‌ಟೈನರ್‌ಗಳಂತೆ ಆಕ್ಷನ್ ಸೀಕ್ವೆನ್ಸ್ ಇರಲಿದೆ' ಎನ್ನುತ್ತಾರೆ ಕೃಷ್ಣ.

ಈ ವಾರ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ನಿಮಿಕಾ ರತ್ನಾಕರ್, ಮಿಲನ ನಾಗರಾಜ್ ಮತ್ತು ಚಿಕ್ಕಣ್ಣ ಪ್ರಮುಖ ತಾರಾಗಣದಲ್ಲಿದ್ದಾರೆ.

ನಟನೆ ಮತ್ತು ನಿರ್ದೇಶನ ಎರಡರಲ್ಲೂ ಹಿಟ್‌ಗಳನ್ನು ನೀಡಿರುವ ಕೃಷ್ಣ ಅವರಿಗೆ, 'ಪ್ರತಿ ಚಿತ್ರವೂ ವಿಭಿನ್ನ ಮತ್ತು ಪ್ರತಿಯೊಬ್ಬ ನಿರ್ದೇಶಕರು ವಿಭಿನ್ನರು. ನಾನು ಹೇಗೆ ನನ್ನ ಸಹಿ ಶೈಲಿಯ ಮೇಕಿಂಗ್ ಅನ್ನು ಹೊಂದಿದ್ದೇನೆಯೋ ಹಾಗೆಯೇ ಇತರ ನಿರ್ದೇಶಕರು ಕೂಡ ತಮ್ಮದೇ ಆದದ್ದನ್ನು ಹೊಂದಿರುತ್ತಾರೆ. ಒಬ್ಬ ನಟನಾಗಿ, ನಾನು ಅವರ ದೃಷ್ಟಿಯಲ್ಲಿ ಹೋಗಬೇಕು' ಎಂದು ಹೇಳುತ್ತಾರೆ.

ಕೃಷ್ಣ ಸ್ಯಾಂಡಲ್‌ವುಡ್‌ನ ಅತ್ಯಂತ ಬ್ಯುಸಿಯಾಗಿರುವ ನಟರಲ್ಲಿ ಒಬ್ಬರಾಗಿದ್ದಾರೆ. 2022 ರಲ್ಲಿ ಹಲವು ಸಿನಿಮಾಗಳನ್ನು ಹೊಂದಿದ್ದ ಅವರು, 2023ರಲ್ಲೂ ಸರಣಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

'ಇದು ಪ್ರತಿ ಚಿತ್ರರಂಗಕ್ಕೂ ಮತ್ತು ವೈಯಕ್ತಿಕವಾಗಿ ಕಲಾವಿದನಾಗಿ ನನಗೆ ಅವಶ್ಯಕ. ನಾನು ನಟಿಸಬೇಕು ಮತ್ತು ಕಲಿಯಬೇಕು ಮತ್ತು ನನ್ನ ಕಲೆಯಲ್ಲಿ ಉತ್ತಮಗೊಳ್ಳಬೇಕು. ಈ 2 ವರ್ಷಗಳಲ್ಲಿ, ನಾನು ಪುನರಾವರ್ತಿತ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಅಂತಹ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತೇನೆ. ನನ್ನ ಮುಂಬರುವ ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರಗಳು ಮತ್ತು ಕಥೆಗಳನ್ನು ಒಳಗೊಂಡಿರುವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತೇನೆ' ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com