ಬಹುಭಾಷಾ ಚಿತ್ರದಲ್ಲಿ ಒಂದಾದ ಯೋಗಿ ಬಾಬು ಹಾಗೂ ಕಾಂತಾರ ನಟ ಪ್ರಮೋದ್ ಶೆಟ್ಟಿ!

ತಮಿಳಿನ ಜನಪ್ರಿಯ ನಟ ಯೋಗಿ ಬಾಬು ಮತ್ತು ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಬಹುಭಾಷಾ ಚಿತ್ರವೊಂದರಲ್ಲಿ ಒಂದಾಗಿದ್ದಾರೆ. 
ಯೋಗಿ ಬಾಬು-ಪ್ರಮೋದ್ ಶೆಟ್ಟಿ
ಯೋಗಿ ಬಾಬು-ಪ್ರಮೋದ್ ಶೆಟ್ಟಿ
Updated on

ತಮಿಳಿನ ಜನಪ್ರಿಯ ನಟ ಯೋಗಿ ಬಾಬು ಮತ್ತು ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಬಹುಭಾಷಾ ಚಿತ್ರವೊಂದರಲ್ಲಿ ಒಂದಾಗಿದ್ದಾರೆ. 

'ದೈವಿಕ ವಿಷಯ'ದ ಕಥಾ ಹಂದರವಿರುವ ಈ ಚಿತ್ರವನ್ನು ಮಲಯಾಳಂ ನಿರ್ದೇಶಕ ರಾಜೀವ್ ವೈದ್ಯ ನಿರ್ದೇಶಿಸಲಿದ್ದಾರೆ. ಕನ್ನಡದಲ್ಲಿ ತೂತುಮಡಿಕೆಯನ್ನು ನಿರ್ಮಿಸಿದ ಮಧುಸೂದನ್ ರಾವ್ ಈ ಯೋಜನೆಗೆ ಬಂಡವಾಳ ಹೂಡಲಿದ್ದಾರೆ.

ಮಕರ ಸಂಕ್ರಾಂತಿಯಂದು ಚಿತ್ರಕ್ಕೆ ಮುಹೂರ್ತ ನಡೆಸಿದೆ. ಇನ್ನು ಚಿತ್ರದ ಬಗ್ಗೆ ಮಾತನಾಡಿದ ಮಧುಸೂದನ್ ರಾವ್, ಶಬರಿಮಲೆಯಲ್ಲಿ ಕಥೆ ನಡೆಯುತ್ತದೆ. ವಿವಿಧ ಧರ್ಮದ ಜನರು ದೇಗುಲಕ್ಕೆ ಪ್ರವೇಶಿಸುವ ನಡುವೆ ಧಾರ್ಮಿಕ ಸ್ಥಳವು ಹೇಗೆ ವ್ಯತ್ಯಾಸವಾಗುವುದಿಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ.

ಚಿತ್ರದ ಮೊದಲ ಶೆಡ್ಯೂಲ್ ಅನ್ನು ಶಬರಿಮಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗುತ್ತದೆ. ವಿನೋದ್ ಭಾರತಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಸಂಗೀತ ನಿರ್ದೇಶಕರು ಸೇರಿದಂತೆ ಉಳಿದ ತಾಂತ್ರಿಕ ತಂಡವನ್ನು ತಯಾರಕರು ಇನ್ನೂ ಅಂತಿಮಗೊಳಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com