'ಬ್ಲ್ಯಾಕ್ ಶೀಪ್' ಚಿತ್ರದ ಮೂಲಕ ನಿರ್ದೇಶನಕ್ಕಿಳಿದ ನೃತ್ಯ ಸಂಯೋಜಕ ಜೀವನ್ ಹಳ್ಳಿಕಾರ್

ನೃತ್ಯ ಸಂಯೋಜಕ ಮತ್ತು ಫಿಟ್ನೆಸ್ ತರಬೇತುದಾರ ಜೀವನ್ ಹಳ್ಳಿಕಾರ್ ಅವರು 'ಬ್ಲ್ಯಾಕ್ ಶೀಪ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿಸಲಾದ ಈ ಚಿತ್ರದ ನಿರ್ದೇಶನದ ಜತೆಗೆ ಜೀವನ್ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. 
ಜೀವನ್ ಹಳ್ಳಿಕಾರ್ - ಬ್ಲ್ಯಾಕ್ ಶೀಪ್ ಚಿತ್ರದ ಪೋಸ್ಟರ್
ಜೀವನ್ ಹಳ್ಳಿಕಾರ್ - ಬ್ಲ್ಯಾಕ್ ಶೀಪ್ ಚಿತ್ರದ ಪೋಸ್ಟರ್
Updated on: 

ನೃತ್ಯ ಸಂಯೋಜಕ ಮತ್ತು ಫಿಟ್ನೆಸ್ ತರಬೇತುದಾರ ಜೀವನ್ ಹಳ್ಳಿಕಾರ್ ಅವರು 'ಬ್ಲ್ಯಾಕ್ ಶೀಪ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿಸಲಾದ ಈ ಚಿತ್ರದ ನಿರ್ದೇಶನದ ಜತೆಗೆ ಜೀವನ್ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. 

ಸಿನಿಮಾದಲ್ಲಿ ವಿಶಾಲ್ ಕಿರಣ್ ನಾಯಕನಾಗಿ ಮತ್ತು ಪ್ರಶಾಂತ್ ವಿ ಹರಿ ಪ್ರತಿನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ನಿಶಾ ಹೆಗ್ಡೆ ಮತ್ತು ಶಿವಾಂಗಿ ಡೇವಿ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ.

ನಿರ್ದೇಶಕ ಜೀವನ್ ಹಳ್ಳಿಕಾರ್ ಇತ್ತೀಚೆಗೆ ಚಿತ್ರದ ಕೆಲವು ಸ್ಟಿಲ್‌ಗಳನ್ನು ಅನಾವರಣಗೊಳಿಸಿದ್ದಾರೆ. ಚಿತ್ರದ ಶೂಟಿಂಗ್ ಮುಗಿದಿದ್ದು, ಅಶ್ವಿನಿ ಗುರುಚರಣ್ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರದಲ್ಲಿ ನಟರಾದ ಕೃಷ್ಣ ಹೆಬ್ಬಾಳೆ, ಕೆಎಸ್ ಶ್ರೀಧರ್, ಸುಂದರ್ ವೀಣಾ ಮತ್ತು ಭಜರಂಗಿ ಪ್ರಸನ್ನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನೃತ್ಯ ಸಂಯೋಜಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಜೀವನ್, 'ಕಳೆದ ಕೆಲ ವರ್ಷಗಳಲ್ಲಿ ನಾನು ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಹರೇ ರಾಮ ಹರೇ ಕೃಷ್ಣ ಮತ್ತು ದೇವ್ ಸನ್ ಆಫ್ ಮುದ್ದೇಗೌಡ ಮುಂತಾದ ಚಿತ್ರಗಳಲ್ಲಿ ವಿಶೇಷ ಪಾತ್ರಗಳನ್ನು ಮಾಡಿದ್ದೇನೆ. ಸಿನಿಮಾ ರಂಗದಲ್ಲಿ ತೊಡಗಿಕೊಳ್ಳುವ ಮೊದಲು, ನಾನು ಭಾರತೀಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಒಳಗೊಂಡಂತೆ ದೂರದರ್ಶನ ಕಾರ್ಯಕ್ರಮಗಳು ಮತ್ತು ಟಿವಿ ಜಾಹೀರಾತುಗಳಿಗೆ ಸಹ ನೃತ್ಯ ಸಂಯೋಜನೆ ಮಾಡಿದ್ದೇನೆ' ಎಂದರು.

ಬ್ಲ್ಯಾಕ್ ಶೀಪ್ ಜೀವನ್ ಅವರ ವೃತ್ತಿಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಏಕೆಂದರೆ, ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವೂ ಆಗಿದೆ. ಚಿತ್ರದ ಸಂಗೀತವನ್ನು ಪೀಪಲ್ ಟ್ರೀ ಸಂಯೋಜಿಸಿದ್ದು, ಛಾಯಾಗ್ರಹಣವನ್ನು ದೇವೂ ನಿರ್ವಹಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಅಥವಾ 2024ರ ಆರಂಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com