ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಸೋನಲ್ ಮೊಂತೆರೋ!

ನಟಿ ಸೋನಲ್‌ ಮೊಂತೆರೋ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ನಟಿ ಇದೀಗ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರದ ಬಿಡುಗಡೆಗಾಗಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. 
ಗರಡಿ ಸಿನಿಮಾದಲ್ಲಿ ನಟಿ ಸೋನಲ್ ಮೊಂತೆರೋ
ಗರಡಿ ಸಿನಿಮಾದಲ್ಲಿ ನಟಿ ಸೋನಲ್ ಮೊಂತೆರೋ

ನಟಿ ಸೋನಲ್‌ ಮೊಂತೆರೋ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ನಟಿ ಇದೀಗ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರದ ಬಿಡುಗಡೆಗಾಗಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. 

ಈ ಕುರಿತು ಮಾತನಾಡುವ ಸೋನಲ್, 'ಪಂಚತಂತ್ರ ಸಿನಿಮಾ ಮೂಲಕ ನನ್ನನ್ನು ಸ್ಯಾಂಡಲ್‌ವುಡ್‌ಗೆ ಕರೆತಂದಿದ್ದು ಯೋಗರಾಜ್ ಭಟ್. ಈಗ ಮತ್ತೆ ಅವರೊಂದಿಗೆ ಕೆಲಸ ಮಾಡುತ್ತಿರುವುದು ನನಗೆ ಸಂತೋಷವಾಗಿದೆ' ಎಂದು ಹೇಳಿದರು. 

ಗರಡಿ ಸಿನಿಮಾದಲ್ಲಿ ಯಶಸ್ ಸೂರ್ಯ ಅವರಿಗೆ ಜೋಡಿಯಾಗಿ ನಟಿ ಸೋನಲ್‌ ಮೊಂತೆರೋ ನಟಿಸಿದ್ದು, ಇದರೊಂದಿಗೆ ಬಿಸಿ ಪಾಟೀಲ್ ಮತ್ತು ರವಿ ಶಂಕರ್ ಅವರಂತಹ ಅನುಭವಿ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಉತ್ಸುಕರಾಗಿದ್ದಾರೆ.

ನವೆಂಬರ್ 10ರಂದು ಚಿತ್ರ ರಾಜ್ಯದಾದ್ಯಂತ ತೆರೆಕಾಣಲು ಸಿದ್ಧವಾಗಿದ್ದು, ತನ್ನ ಪಾತ್ರದ ಬಗ್ಗೆ ನಟಿ ಮಾತನಾಡಿದ್ದಾರೆ. 'ನಾನು ಹೊಸ ಪಾತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಮತ್ತು ಅದು ನಮ್ಮನ್ನು ಬೆಳೆಯುವಂತೆ ಮಾಡುತ್ತದೆ. ಉದಾಹರಣೆಗೆ, ಗರಡಿಯಲ್ಲಿ ನನ್ನ ಪಾತ್ರವು ಟಾಸ್ಕ್ ನಂತಿತ್ತು. ನಾನು ನಿರ್ವಹಿಸಿರುವ ಪಾತ್ರವು ಟಿಕ್‌ಟಾಕ್‌ ಗೀಳನ್ನು ಹೊಂದಿದೆ. ಆದರೆ, ನಾನು ವೈಯಕ್ತಿಕವಾಗಿ ಆ ರೀತಿ ವಿಡಿಯೋಗಳನ್ನು ಮಾಡುವುದಿಲ್ಲ ಅಥವಾ ಯೂಟ್ಯೂಬ್ ಚಾನೆಲ್ ಹೊಂದಿಲ್ಲ. ಅಲ್ಲದೆ, ಹಳ್ಳಿ ಹುಡುಗಿ ಅಥವಾ ಸಿಟಿ ಹುಡುಗಿಯಾಗಿ ನಟಿಸುವುದು ಸುಲಭ. ಆದರೆ, ಆದರೆ, ಹಳ್ಳಿ ಹುಡುಗಿಯಾಗಿದ್ದುಕೊಂಡು ಸಿಟಿ ಹುಡುಗಿಯಂತೆ ನಟಿಸುವುದು ಕುತೂಹಲ ಮೂಡಿಸಿತು. ಇದು ಉಡುಪು ಮಾತ್ರವಲ್ಲದೇ, ಬಾಡಿ ಲಾಂಗ್ವೇಜ್ ಕೂಡ ಮುಖ್ಯವಾಗುತ್ತದೆ. ಗರಡಿ ಸಿನಿಮಾದಲ್ಲಿನ ನನ್ನ ಪಾತ್ರದಲ್ಲಿ ನಾನು ಸಾಕಷ್ಟು ಬದಲಾವಣೆಗಳನ್ನು ಹೊಂದಿದ್ದೇನೆ. ಇದು ದ್ವಿತೀಯಾರ್ಧದಲ್ಲಿ ತೀವ್ರವಾದ ತಿರುವನ್ನು ಒಳಗೊಂಡಿರುತ್ತದೆ' ಎಂದು ಸೋನಲ್ ತಿಳಿಸಿದರು. 

ನಿರ್ದೇಶಕರು ನಟರ ಮೇಲೆ ವಿಶ್ವಾಸವಿಡುವುದು ಬಹಳ ಮುಖ್ಯ ಎನ್ನುವ ಸೋನಲ್, ಯೋಗರಾಜ್ ಭಟ್ ಅವರು ತಮ್ಮ ಚಿತ್ರದಲ್ಲಿ ತನ್ನ ಪಾತ್ರವನ್ನು ನಿರೂಪಿಸುವ ಸಾಮರ್ಥ್ಯದ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದರು. 'ಗರಡಿ ಸಿನಿಮಾಗಾಗಿ ಅವರು ನನಗಿಂತ ಮೊದಲು ಒಂದೆರಡು ನಾಯಕಿಯರನ್ನು ಅಂತಿಮಗೊಳಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ನನ್ನನ್ನು ಪರಿಗಣಿಸಲಾಯಿತು. ಆದರೆ, ಭಟ್ರು ಇತ್ತೀಚೆಗಷ್ಟೇ ಅವರು ನನ್ನನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾಗಿ ಮತ್ತು ನಾನು ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾಗಿ ಹೇಳಿದ್ದಾರೆ. ಅವರಿಂದ ಇದನ್ನು ಕೇಳುವುದು ನಿಜವಾಗಿಯೂ ಅಗಾಧವಾಗಿತ್ತು. ನಾನು ಆ ಪಾತ್ರಕ್ಕೆ ನ್ಯಾಯ ಸಲ್ಲಿಸಬಹುದೇ ಎಂದು ಆರಂಭದಲ್ಲಿ ನನಗೆ ಅನುಮಾನವಿತ್ತು. ಹೀಗಾಗಿ, ಈ ಬಗ್ಗೆ ನಿರ್ದೇಶಕರಿಗೆ ನನ್ನ ಕಳವಳವನ್ನು ವ್ಯಕ್ತಪಡಿಸಿದೆ. ಆದಾಗ್ಯೂ, ಅವರು ನನ್ನ ಮೇಲೆ ನಂಬಿಕೆಯನ್ನಿಟ್ಟರು ಮತ್ತು ನಾನು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.

ನಾನಿನ್ನು ವೃತ್ತಿಜೀವನದ ಕಲಿಕೆಯ ಹಂತದಲ್ಲಿದ್ದೇನೆ ಎನ್ನುವ ಸೋನಲ್, 'ಪ್ರತಿ ಬಾರಿ ನಾನು ಹೊಸ ಚಿತ್ರವನ್ನು ಕೈಗೆತ್ತಿಕೊಂಡಾಗ, ನಾನು ಅದನ್ನು ಚೆನ್ನಾಗಿ ಮಾಡಬಹುದೇ ಎಂಬ ಭಯ ನನಗಿನ್ನೂ ಇದೆ. ಪ್ರತಿ ಚಿತ್ರವು ನನಗೆ ಹೊಸದನ್ನು ಕಲಿಸುತ್ತದೆ ಮತ್ತು ಕಲಿಯಲು ಯಾವಾಗಲೂ ಹೆಚ್ಚು ಇರುತ್ತದೆ. ನಾನು ಕಲಿಯುವುದನ್ನು ಮುಂದುವರಿಸಲು ಉತ್ಸುಕಳಾಗಿದ್ದೇನೆ' ಎಂದು ಸೋನಾಲ್ ಹೇಳಿದರು.

ಆದಾಗ್ಯೂ, ನಾನಿನ್ನು ನಟನೆಯಲ್ಲಿ ಉತ್ತಮ ಮನ್ನಣೆಯನ್ನು ಪಡೆಯಬೇಕಾಗಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಅವರು, 'ರಾಬರ್ಟ್ ಚಿತ್ರ ನನ್ನ ವೃತ್ತಿಜೀವನದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆದರೂ, ಪ್ರೇಕ್ಷಕರು ನನ್ನಿಂದ ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿರಂತರ ಪ್ರಕ್ರಿಯೆ ಎಂದು ನಾನು ನಂಬುತ್ತೇನೆ. ಅವರಿಂದ ದೊರಕುವ ಪ್ರತಿಕ್ರಿಯೆಯಿಂದ ಹೆಚ್ಚಿನದನ್ನು ಕಲಿಯಲು ನಾನು ಉತ್ಸುಕಳಾಗಿದ್ದೇನೆ. ನನ್ನ ವೃತ್ತಿಜೀವನವನ್ನು ವ್ಯಾಖ್ಯಾನಿಸಲು ನಾನು ಆ ಒಂದು ಉತ್ತರಕ್ಕಾಗಿ ಕಾಯುತ್ತಿದ್ದೇನೆ' ಎಂದರು ಸೋನಲ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com